“ಬ್ರಾಟ್” ಚಿತ್ರದ ಟೀಸರ್ ಬಿಡುಗಡೆ

“ಫಸ್ಟ್ ರಾಂಕ್ ರಾಜು” ಖ್ಯಾತಿಯ ನಿರ್ಮಾಪಕ ಮಂಜುನಾಥ್ ಕಂದಕೂರ್ ಐದು ವರ್ಷಗಳ ನಂತರ ನಿರ್ಮಿಸುತ್ತಿರುವ ಹಾಗೂ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸದಭಿರುಚಿಯ ಚಿತ್ರ ನಿರ್ದೇಶಿಸಿರುವ ಶಶಾಂಕ್ ನಿರ್ದೇಶನದ ಹಾಗೂ ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸುತ್ತಿರುವ “ಬ್ಯಾಟ್” ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದೆ.
ಡಾರ್ಲಿಂಗ್ ಕೃಷ್ಣ ಹುಟ್ಟುಹಬ್ಬದ ಸಲುವಾಗಿ ಟೀಸರ್ ಬಿಡುಗಡೆ ಮಾಡಿರುವ ಚಿತ್ರತಂಡ ಆ ಮೂಲಕ ನಾಯಕನಿಗೆ ಹುಟ್ಟುಹಬ್ಬದ ಶುಭಾಶಯ ಹೇಳಿದೆ.
ಈಗಾಗಲೇ ಶೀರ್ಷಿಕೆ, ಫಸ್ಟ್ ಲುಕ್ ಮೂಲಕ ಎಲ್ಲರ ಗಮನ ಸೆಳೆದಿರುವ “ಬ್ರ್ಯಾಟ್” ಚಿತ್ರದ ಟೀಸರ್‍ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಡಾರ್ಲಿಂಗ್ ಕೃಷ್ಣ – ಮಿಲನ ನಾಗರಾಜ್ ಪುತ್ರಿ ಸಹ ಟೀಸರ್ ವೀಕ್ಷಿಸುತ್ತಿರುವುದು ಸಾಕಷ್ಟು ವೈರಲ್ ಆಗುತ್ತಿದೆ. ಬಹುನಿರೀಕ್ಷಿತ ಈ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ.

ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯಾಗಿ ಮನಿಶಾ ಕಂದಕೂರ್ ಅಭಿನಯಿಸುತ್ತಿದ್ದಾರೆ. ರಮೇಶ್ ಇಂದಿರಾ, ಡ್ರ್ಯಾಗನ್ ಮಂಜು ಮುಂತಾದವರ ತಾರಾಬಳಗವಿರುವ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಅಭಿಲಾಶ್ ಕಲ್ಲತ್ತಿ ಛಾಯಾಗ್ರಹಣವಿದೆ.