"Kannappa" trailer release postponed
“ಕಣ್ಣಪ್ಪ” ಚಿತ್ರದ ಟ್ರೈಲರ್ ಬಿಡುಗಡೆ ಮುಂದೂಡಿಕೆ

ಅಹಮದಾಬಾದ್‍ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತ ಇಡೀ ದೇಶವನ್ನೇ ಆಘಾತಕ್ಕೆ ದೂಡಿದೆ. ಮೃತರ ಗೌರವಾರ್ಥವಾಗಿ, ಜೂನ್ 13 ರಂದು ಮಧ್ಯಪ್ರದೇಶದ ಇಂದೋರ್‍ನಲ್ಲಿ ನಡೆಯಬೇಕಿದ್ದ ವಿಷ್ಣು ಮಂಚು ಅಭಿನಯದ ಕಣ್ಣಪ್ಪ’ ಟ್ರೇಲರ್ ಬಿಡುಗಡೆ ಕಾರ್ಯಕ್ರಮವನ್ನು ಮುಂದೂಡಲುಕಣ್ಣಪ್ಪ’ ಚಿತ್ರತಂಡ ತೀರ್ಮಾನಿಸಿದೆ.
ಈ, ಕಷ್ಟದ ಸಮಯದಲ್ಲಿ ದುಃಖಿತ ಕುಟುಂಬಗಳೊಂದಿಗೆ ನಿಲ್ಲುವುದರ ಜೊತೆಗೆ ಸಂತಾಪ ಸೂಚಿಸಿದೆ. ಕಣ್ಣಪ್ಪ ಚಿತ್ರ ಕನ್ನಡ , ತೆಲುಗು,ಮಲೆಯಾಳಂ, ಹಿಂದಿ ಮತ್ತು ತಮಿಳು ಭಾಷೆಯಲ್ಲಿ ಬಿಡುಗಡೆಗೆ ಸಜ್ಜಾಗಿದೆ.
ವಿಷ್ಣು ಮಂಚು ನಾಯಕರಾಗಿ ನಟಿಸಿರುವ ಚಿತ್ರಕ್ಕೆ ಮೋಹನ್ ಬಾಬು ಬಂಡವಾಳ ಹಾಕಿದ್ದು ಪ್ರಭಾಸ್, ಅಕ್ಷಯ್ ಕುಮಾರ್, ಶರತ್ ಕುಮಾರ್ ಸೇರಿದಂತೆ ಬಹುತಾರಾಗಣ ಚಿತ್ರದಲ್ಲಿದ್ದು ಈ ತಿಂಗಳಾಂತ್ಯಕ್ಕೆ ಚಿತ್ರ ತೆರೆಗೆ ಬರಲಿದೆ