ಕನ್ನಡದ ಸೂಪರ್ ಹೀರೋ ಚಿತ್ರ “ದಿ ಎಂಡ್” ಮುಕ್ತಾಯ ಹಂತದಲ್ಲಿ ಚಿತ್ರೀಕರಣ


ಕನ್ನಡದ ಸೂಪರ್ ಹೀರೋ ಚಿತ್ರ “ದಿ ಎಂಡ್” ಮುಕ್ತಾಯ ಹಂತದಲ್ಲಿ ಚಿತ್ರೀಕರಣ

ಪುಣ್ಯ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ಪವನ್ ಕುಮಾರ್ ನಿರ್ದೇಶಿಸುತ್ತಿರುವ ನೂತನ ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭ ಇತ್ತೀಚೆಗೆ ನಡೆಯಿತು.”ಸೂಪರ್ ಹೀರೋ ” ಕಾನ್ಸೆಪ್ಟ್ ನ ಈ ಚಿತ್ರಕ್ಕೆ “ದಿ ಎಂಡ್” ಎಂದು ಹೆಸರಿಡಲಾಗಿದೆ. ಇದು ಕನ್ನಡದ ಮೊದಲ ಸೂಪರ್ ಹಿರೋ ಚಿತ್ರ ಎನ್ನಲಾಗಿದೆ.

ಚಿತ್ರದ ಶೀರ್ಷಿಕೆಯನ್ನು ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್ ಅನಾವರಣಗೊಳಿಸಿದರು. ಕನ್ನಡಪರ ಹೋರಾಟಗಾರ ಭೀಮಶಂಕರ್ ಅವರು ಸೇರಿದಂತೆ ಸಾಕಷ್ಟು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದು,

ಈ ವೇಳೆ ಮಾತಿಗಿಳಿದ ನಿರ್ದೇಶಕ ಪವನ್ ಕುಮಾರ್, “ಸೂಪರ್ ಹೀರೋ” ಎಂದರೆ ವಿಶೇಷ ಶಕ್ತಿಯುಳ್ಳವನು ಎಂದು. ಉದಾಹರಣೆಗೆ ಹನುಮಂತ. ಪುರಾಣದಲ್ಲಿ ಬರುವ ಸಪ್ತ ಚಿರಂಜೀವಿಗಳನ್ನು ಆದರ್ಶವಾಗಿಟ್ಟುಕೊಂಡು. ಈ ಚಿತ್ರದ ಕಥೆ ಸಿದ್ದವಾಗಿದೆ. ಚಿತ್ರೀಕರಣ ಮುಕ್ತಾಯ ಹಂತದಲ್ಲಿದೆ. ಬೆಂಗಳೂರು, ಮಂಗಳೂರು, ಗೋವಾ, ಬಾದಾಮಿ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಮೇ ತಿಂಗಳಲ್ಲಿ ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದರು.

ರವಿಶೇಖರ್ ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಪವಿತ್ರ ರಾಜ್, ಕೆ.ಎಸ್. ಶ್ರೀಧರ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಎರಡು ವಿಶೇಷ ಪಾತ್ರಗಳಿದ್ದು, ಹೆಸರಾಂತ ನಟ ಅನಂತನಾಗ್ ಹಾಗೂ ನಟಿ ರಾಗಿಣಿ ಅವರು ಆ ಪಾತ್ರಗಳಲ್ಲಿ ನಟಿಸಬೇಕೆಂಬ ಆಸೆ ನನ್ನಗಿದೆ. ಈ ಕುರಿತು ಮಾತುಕತೆ ನಡೆಯುತ್ತಿದೆ. ಅರುಣ್ ಆಂಡ್ರ್ಯೂ ಸಂಗೀತ ನೀಡಿದ್ದಾರೆ. ರಮೇಶ್ ಕೊಯಿರಾ ಛಾಯಾಗ್ರಹಣ ಹಾಗೂ ರವಿ ಆತ್ಮರಾಮ್ ಸಂಕಲನ ಈ ಚಿತ್ರಕ್ಕಿದೆ. ಈ ಚಿತ್ರ ಐದು ಭಾಗಗಳಲ್ಲಿ ಬರಲಿದೆ. ” ಚಿತ್ರವನ್ನು ಕನ್ನಡ ಸೇರಿದಂತೆ ಒಂಭತ್ತು ಭಾಷೆಗಳಲ್ಲಿ ಬಿಡುಗಡೆ ಮಾಡುವ ಉದ್ದೇಶವಿದೆ.

ತಮಿಳಿನಲ್ಲಿ ಒಂದು ಚಿತ್ರದಲ್ಲಿ ನಟಿಸಿರುವ ನನಗೆ ಕನ್ನಡದಲ್ಲಿ ಮೊದಲ ಚಿತ್ರ. “ಸೂಪರ್ ಹೀರೋ” ಆಗಿ ನಟಿಸಿದ್ದೇನೆ ಎಂದು ನಾಯಕ ರವಿಶೇಖರ್ ತಿಳಿಸಿದರು. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು ನಾಯಕಿ ಪವಿತ್ರರಾಜ್. ಚಿತ್ರದ ಹಾಡುಗಳು ಹಾಗೂ ಹಿನ್ನೆಲೆ ಸಂಗೀತದ ಬಗ್ಗೆ ಸಂಗೀತ ನಿರ್ದೇಶಕ ಅರುಣ್ ಆಂಡ್ರ್ಯೂ ಮಾಹಿತಿ ನೀಡಿದರು.



Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin

Notice: ob_end_flush(): Failed to send buffer of zlib output compression (0) in /home/alydqcdn/public_html/wp-includes/functions.php on line 5581