"Koragajja" movie... Invisible power during re-shoot: Director Attavar escaped from danger

“ಕೊರಗಜ್ಜ” ಸಿನಿಮಾ… ರೀ ಶೂಟ್ ವೇಳೆ ಅಗೋಚರ ಶಕ್ತಿ: ಅಪಾಯದಿಂದ ಪಾರಾದ ನಿರ್ದೇಶಕ ಅತ್ತಾವರ್ - CineNewsKannada.com

“ಕೊರಗಜ್ಜ” ಸಿನಿಮಾ… ರೀ ಶೂಟ್ ವೇಳೆ ಅಗೋಚರ ಶಕ್ತಿ: ಅಪಾಯದಿಂದ ಪಾರಾದ ನಿರ್ದೇಶಕ ಅತ್ತಾವರ್

ತ್ರಿವಿಕ್ರಮ ಸಪಲ್ಯ ನಿರ್ಮಾಣದ ಬಹುಕೋಟಿ ಬಜೆಟ್ ನ, ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲಂ ಸ್ ಬ್ಯಾನರ್ ನಡಿಯ “ಕೊರಗಜ್ಜ” ಸಿನಿಮಾ ಆರಂಭದಿಂದಲೂ ಹಲವಾರು ಪವಾಡ ಮತ್ತು ಸವಾಲುಗಳ ಜೊತೆ ತೊಂದರೆ ಗಳನ್ನು ಎದುರಿಸುತ್ತಾ ಬಂದಿರುವ ವಿಚಾರ ಗೊತ್ತೇ ಇದೆ.

ಕೊಚ್ಚಿ ಮತ್ತು ಮುಂಬೈ ನಲ್ಲಿ ಕೊನೆಹಂತದ ಪೋಸ್ಟ್ ಪ್ರೊಡಕ್ಷನ್ಸ್ ನಡೆಯುತ್ತಿದ್ದು,ದೈವ ನರ್ತನದ ಪ್ರಮುಖ ದೃಶ್ಯವೊಂದನ್ನು ಮಧ್ಯರಾತ್ರಿಯ ವೇಳೆ ನೂರಾರು ಉರಿವ ಪಂಜುಗಳನ್ನು ಧರಿಸಿಕೊಂಡ ಕೇರಳದ ತೆಯ್ಯಂ ಕಲಾವಿದರ ಮತ್ತು ಮಾಸ್ ಮಾದ ರವರ ಮೈ ನವಿರೇಳಿಸುವ ಸಾಹಸ ಸನ್ನಿವೇಶವೊಂದನ್ನು ನಿರ್ದೇಶಕ ಸುಧೀರ್ ಅತ್ತಾವರ್ ಮೂರನೇ ಬಾರಿ ಮರು ಚಿತ್ರೀಕರಿಸುತ್ತಿದ್ದರು.

ಖ್ಯಾತ ಕಲಾವಿದೆ ಶೃತಿ ಯೊಂದಿಗೆ ನೂರಾರು ಸಹ ಕಲಾವಿದರು ಭಾಗವಹಿಸಿದ್ದ ಸನ್ನಿವೇಶವನ್ನು ಬೆಂಗಳೂರಿನ ಹೊರವಲಯದ ಕನಕಪುರ ರಸ್ತೆಯ ಕಗ್ಗಲಿ ಹಳ್ಳಿಯಲ್ಲಿ ಹಾಕಿದ್ದ ಆದ್ದೂರಿ ಸೆಟ್ ನಲ್ಲಿ ಮಲಯಾಳಂ ಚಿತ್ರರಂಗದ ಖ್ಯಾತ ಛಾಯಾಗ್ರಾಹಕ ಮನೋಜ್ ಪಿಳ್ಳೈ ಚಿತ್ರೀಕರಿಸುತ್ತಿದ್ದಾಗ, ನಿರ್ದೇಶಕ ಸುಧೀರ್ ಅತ್ತಾವರ್ ರನ್ನು ಅಗೋಚರ ಶಕ್ತಿಯೊಂದು ಬಲವಾಗಿ ತಳ್ಳಿ ಏಳೆಂಟು ಗಜ ದೂರಕ್ಕೆಸೆಯಲ್ಪಟ್ಟ ಘಟನೆ ಚಿತ್ರ ತಂಡವನ್ನು ಬೆಚ್ಚಿಬೀಳಿಸಿದೆ.

ಎಲ್ಲೂ ಎಡವಿ ಬೀಳದೆ, ಜಾರದೆ ಇದ್ದರೂ, ಏಕಾಏಕಿ ಬಲವಾಗಿ ತಳ್ಳಿದಂತೆ ವೇಗ ಪಡೆದುಕೊಂಡು ನಿರ್ದೇಶಕರು ಎಸೆಯಲ್ಪಟ್ಟ ವಿಲಕ್ಷಣ ಘಟನೆ, ಸುಮಾರು ಮುನ್ನೂರ ಕ್ಕಿಂತಲೂ ಹೆಚ್ಚಿದ್ದ ಚಿತ್ರತಂಡದ ಸಮಕ್ಷಮದಲ್ಲೇ ಘಟನೆ ನಡೆದಿದೆ.

ಸನ್ನಿವೇಷವನ್ನು ವಿವರಿಸುತ್ತಿದ್ದ ಸಮಯದಲ್ಲಿ ನಿರ್ದೇಶಕರನ್ನು ಒಂದೇ ಸಮನೆ ಅಗೋಚರ ಶಕ್ತಿ ಬಲವಾಗಿ ದೂಡಿದಂತಾಗಿ, ತನ್ನನ್ನು ನಿಭಾಯಿಸಿಕೊಳ್ಳದೆ ನಿರ್ದೇಶಕರು ಸುಮಾರು ದೂರಕ್ಕೆ ಎಸೆಯಲ್ಪಟ್ಟದ್ದನ್ನು ಕಂಡು ಖ್ಯಾತ ನಟಿ ಶ್ರತಿ, ನಿರ್ದೇಶಕರು ದೊಡ್ಡ ಮಟ್ಟದ ಗಾಯಗಳಿಂದ ಪಾರಾಗಿರುವುದನ್ನು ಕೊರಗಜ್ಹ ದೈವವೇ ನಿರ್ದೇಶಕರನ್ನು ಕಾಪಾಡಿದೆ ಎಂದು ವ್ಯಾಖ್ಯಾನಿಸಿದ್ದಾರೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin