"Usire Usire" to hit the screens on May 3: Kichcha Sudeep in a special role

“ಉಸಿರೇ ಉಸಿರೇ” ಚಿತ್ರ ಮೇ 3 ರಂದು ತೆರೆಗೆ: ವಿಶೇಷ ಪಾತ್ರದಲ್ಲಿ ಕಿಚ್ಚ ಸುದೀಪ್ ನಟನೆ - CineNewsKannada.com

“ಉಸಿರೇ ಉಸಿರೇ” ಚಿತ್ರ ಮೇ 3 ರಂದು ತೆರೆಗೆ: ವಿಶೇಷ ಪಾತ್ರದಲ್ಲಿ ಕಿಚ್ಚ ಸುದೀಪ್ ನಟನೆ

ಎನ್ ಗೊಂಬೆ ಲಾಂಛನದಲ್ಲಿ ಪ್ರದೀಪ್ ಯಾದವ್ ನಿರ್ಮಾಣದ, ಸಿ.ಎಂ.ವಿಜಯ್ ನಿರ್ದೇಶನದ ಹಾಗೂ ಬಿಗ್ ಬಾಸ್ ಖ್ಯಾತಿಯ ರಾಜೀವ್ ಹನು ನಾಯಕರಾಗಿ ನಟಿಸಿರುವ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಶೇಷಪಾತ್ರದಲ್ಲಿ ಕಾಣಸಿಕೊಂಡಿರುವ “ಉಸಿರೇ ಉಸಿರೇ” ಚಿತ್ರ ಮೇ 3 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಜನರ ಮನ ಗೆದ್ದಿದೆ.

ನಾಯಕ ರಾಜೀವ್ ಹನು ಮಾತನಾಡಿ, ಚಿತ್ರಕ್ಕಾಗಿ ಐದು ವರ್ಷಗಳ ಕಾಲ ಶ್ರಮಪಟ್ಟಿದ್ದೇನೆ. ಈ ಸಮಯದಲ್ಲಿ ಬೇರೆ ಯಾವ ಚಿತ್ರಗಳನ್ನು ಒಪ್ಪಿಕೊಂಡಿಲ್ಲ. ಈಗ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಮೇ 3 ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ನನ್ನ ಅಣ್ಣನ ಸ್ಥಾನದಲ್ಲಿರುವ ಕಿಚ್ಚ ಸುದೀಪ್ ಅವರು ಈ ಚಿತ್ರದ ವಿಶೇಷಪಾತ್ರದಲ್ಲಿ ಕಾಣಿಸಿಕೊಳ್ಳುವುದರ ಮೂಲಕ ನಮಗೆ ಪ್ರೋತ್ಸಾಹ ನೀಡಿದ್ದಾರೆ. ಅವರಿಗೆ ವಿಶೇಷ ಧನ್ಯವಾದ. ಇದೊಂದು ನೈಜ ಘಟನೆ ಆಧಾರಿತ ಚಿತ್ರವಾಗಿದ್ದು, ಚಿತ್ರ ಚೆನ್ನಾಗಿ ಮೂಡಿಬಂದಿದೆ. ಚಿತ್ರಕ್ಕೆ ಬಂಡವಾಳ ಹೂಡಿರುವ ನಿರ್ಮಾಪಕ ಪ್ರದೀಪ್ ಯಾದವ್ ಅವರಿಗೆ ಒಳ್ಳೆಯದಾಗಲಿ. ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.

ನಿರ್ಮಾಪಕ ಪ್ರದೀಪ್ ಯಾದವ್ ಮಾತನಾಡಿ, ಚಿತ್ರರಂಗ ಹೊಸತು. ನಿರ್ದೇಶಕ ವಿಜಯ್ ಅವರು ಈ ಚಿತ್ರದ ಕಥೆ ಹೇಳಿ ನಿರ್ಮಾಣಕ್ಕೆ ಕರೆತಂದರು. ಕಿಚ್ಚ ಸುದೀಪ್ ಅವರು ಆರಂಭದಿಂದಲೂ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ನಾಯಕ ರಾಜೀವ್ ಹಾಗೂ ಚಿತ್ರತಂಡದ ಸಹಕಾರವನ್ನು ಈ ಸಮಯದಲ್ಲಿ ನೆನಪಿಸಿಕೊಳ್ಳುತ್ತೇನೆ. ಚಿತ್ರ ಮೇ 3 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಂದನ್ ಫಿಲಂಸ್ ಅವರು ನಮ್ಮ ಚಿತ್ರದ ವಿತರಕರು ಎಂದು ತಿಳಿಸಿದರು.

ಈ ಸಮಯದಲ್ಲಿ ಇನ್ನೊಂದು ವಿಷಯ ಹೇಳುತ್ತೇನೆ. ನಮ್ಮ ಚಿತ್ರದ ನಿರ್ದೇಶಕ ಸಿ.ಎಂ.ವಿಜಯ್ ಕೆಲವು ತಿಂಗಳು ಗಳಿಂದ ನಮ್ಮ ಸಂಪರ್ಕದಲ್ಲಿಲ್ಲ. ಫೋನ್ ಕರೆ ಸ್ವೀಕರಿಸುತ್ತಿಲ್ಲ. ಅವರಿಂದ ನನಗೆ ಬಹಳ ನಷ್ಟವಾಗಿದೆ. ಚಿತ್ರ ಬಿಡುಗಡೆಯ ಸಮಯದಲ್ಲಿ ನಮ್ಮ ಜೊತೆ ಅವರು ನಿಂತಿಲ್ಲ. ಹೇಳಿದ ದುಡ್ಡಿಗಿಂತ ಹೆಚ್ಚು ಖರ್ಚು ಮಾಡಿಸಿದ್ದಾರೆ. ಅದರಿಂದ ನನಗೆ ತುಂಬಾ ಅನಾನುಕೂಲವಾಗಿದೆ. ಯಾವ ಹೊಸ ನಿರ್ಮಾಪಕರಿಗೂ ಈ ರೀತಿ ಆಗಬಾರದು. ಎಚ್ಚರವಹಿಸಿ. ನನ್ನ ತಾಯಿ ಹಾಗೂ ನನ್ನ ಅನೇಕ ಸ್ನೇಹಿತರ ಸಹಾಯದಿಂದ ಚಿತ್ರವನ್ನು ಮೇ 3 ರಂದು ಬಿಡುಗಡೆ ಮಾಡುತ್ತಿದ್ದೇನೆ. ಚಿತ್ರ ಚೆನ್ನಾಗಿ ಬಂದಿದೆ. ಎಲ್ಕರೂ ನೋಡಿ ಪ್ರೋತ್ಸಾಹವಿರಲಿಎಂದರು.

ಚಿತ್ರದಲ್ಲಿ ನಾಯಕಿ ಶ್ರೀಜಿತ ಘೋಶ್, ನಟ ಸೀತಾರಾಮ್, ನಟಿ ಪ್ರೀತಿ ಗೌಡ, ಸಹ ನಿರ್ಮಾಪಕರಾದ ಮಂಜುನಾಥ್ ಕಪೂರ್, ಚಂದ್ರಶೇಖರ್ ರೆಡ್ಡಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಕುರಿತು ಮಾತನಾಡಿದರು.

ರಾಜೀವ್ ಹನು, ಶ್ರೀಜಿತ ಘೋಶ್, ಡೈನಾಮಿಕ್ ಸ್ಟಾರ್ ದೇವರಾಜ್, ತಾರಾ, ಸುಚೇಂದ್ರ ಪ್ರಸಾದ್, ಬ್ರಹ್ಮಾನಂದಂ, ಅಲಿ, ಸಾಧುಕೋಕಿಲ, ಮಂಜು ಪಾವಗಡ, ಶೈನಿಂಗ್ ಸೀತರಾಮ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. .

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin