Lyrical video song of the movie Samarth Sadguru Sri Sangameshwara Maharajaru released on November 21st

ನವಂಬರ್ 21 ರಂದು ಸಮರ್ಥ ಸದ್ಗುರು ಶ್ರೀಸಂಗಮೇಶ್ವರ ಮಹಾರಾಜರು ಚಿತ್ರದ ಲಿರಿಕಲ್ ವಿಡಿಯೋ ಹಾಡು ಬಿಡುಗಡೆ - CineNewsKannada.com

ನವಂಬರ್ 21 ರಂದು ಸಮರ್ಥ ಸದ್ಗುರು ಶ್ರೀಸಂಗಮೇಶ್ವರ ಮಹಾರಾಜರು ಚಿತ್ರದ ಲಿರಿಕಲ್ ವಿಡಿಯೋ ಹಾಡು ಬಿಡುಗಡೆ

“ಸಮರ್ಥ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರು” ಚಿತ್ರದ ಲಿರಿಕಲ್ ವಿಡಿಯೋ ನವೆಂಬರ್ 21 ರಂದು ಶ್ರೀ ಸದ್ಗುರು ಸಂಗಮೇಶ್ವರ ಮಹಾರಾಜರ 93ನೇ ಪುಣ್ಯಸ್ಮರಣೆಯಂದು ಬಿಡುಗಡೆ ಆಗಲಿದೆ.

ವಿಜಯಪುರ ಜಿಲ್ಲೆಯ ಶ್ರೀಕ್ಷೇತ್ರ ಇಂಚಗೇರಿ ಮಠದ ಶ್ರೀ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರು ಲಿರಿಕಲ್ ವಿಡಿಯೋ ವೀಕ್ಷಿಸಿ, ಪೋಸ್ಟರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಕೋರಿದ್ದಾರೆ. ಇದೇ ವೇಳೆ ಇಂಚಗೇರಿ ಆಧ್ಯಾತ್ಮ ಸಂಪ್ರದಾಯ ಹಾಗೂ ಚಲನಚಿತ್ರದ ಕುರಿತು ಅನೇಕ ವಿಷಯಗಳನ್ನು ಇಂಚಗೇರಿ ಮಠದಲ್ಲಿ ಚರ್ಚಿಸಿದರು.

ಈ ಸಂಧರ್ಭದಲ್ಲಿ ಉಪಸ್ಥಿತರಿದ್ದ ಚಿತ್ರ ನಿರ್ಮಾಪಕ ಮಾಧವಾನಂದ ಚಿತ್ರ ನಿರ್ಮಾಪಕ ಶ್ರೀಶೈಲ ಗಾಣಿಗೇರ, ನಟ ವಿಶ್ವಪ್ರಕಾಶ್ ಟಿ ಮಲಗೊಂಡ, ಪ್ರಕಾಶ ಕಾಲತಿಪ್ಪಿ, ಮಲ್ಲಿಕಾರ್ಜುನ ಕಾಲತಿಪ್ಪಿ ಶ್ರೀಕ್ಷೇತ್ರ ಇಂಚಗೇರಿಯ ಸದ್ಗುರುಗಳ ದರ್ಶನ ಆಶೀರ್ವಾದ ಪಡೆದರು.

ಚುಟು ಚುಟು ಹಾಡಿನ ಮೂಲಕ ಗಮನ ಸೆಳೆದ, ತಮ್ಮ ಅದ್ಭುತ ಗಾಯನದಿಂದ ಜನಪ್ರಿಯರಾಗಿರುವ ಗಾಯಕ ರವೀಂದ್ರ ಸೊರಗಾವಿ ಅವರು “ಇಂಚಗೇರಿ ಆಧ್ಯಾತ್ಮಿಕ ಸಂಪ್ರದಾಯ ಗುರುಲಿಂಗ ಜಂಗಮ ಮಹಾರಾಜ” ಭಕ್ತಿ ಪ್ರಧಾನ ಹಾಡಿಗೆ ಶ್ರೀ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರು ಪ್ರಶಂಸಿಸಿದರು.

ಶ್ರೀ ಗಿರಿಮಲ್ಲೇಶ್ವರ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ “ಮಾಧವಾನಂದ ಙ” ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಶ್ರೀ ಸ. ಸ. ಪ್ರಭೂಜೀ ಮಹಾರಾಜರ ಮಾರ್ಗದರ್ಶನದಲ್ಲಿ “ಸಮರ್ಥ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರು” ಚಿತ್ರದ ಹಾಡುಗಳು ತಯಾರಾಗಿವೆ. ಇತ್ತೀಚೆಗಷ್ಟೇ ಚಿತ್ರತಂಡದ ಸದಸ್ಯರು ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀಮಂಜನಾಥಸ್ವಾಮಿ ದರ್ಶನ ಪಡೆದುಕೊಂಡು ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆ ಚಿತ್ರ ಯಶಸ್ವಿಯಾಗಲೆಂದು ಹಾರೈಸಿ ಆಶೀರ್ವದಿಸಿದ್ದರು.

ಹೊಸ ಪ್ರತಿಭೆ ರವಿ ನಾರಾಯಣ್ ಶ್ರೀಸಂಗಮೇಶ್ವರರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟರಾದ ರಾಮಕೃಷ್ಣ, ವಿಜಯಕಾಶಿ, ವಿನಯಪ್ರಸಾದ್, ಸಂದೀಪ್ ಮಲಾನಿ, ನಾರಾಯಣ ಸ್ವಾಮಿ, ವಿಶ್ವಪ್ರಕಾಶ್ ಟಿ ಮಲಗೊಂಡ, ಭವ್ಯಶ್ರೀ ರೈ ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ರಾಜಾ ರವಿಶಂಕರ್ ನಿರ್ದೇಶನ, ಸಿ ನಾರಾಯಣ್ ಛಾಯಾಗ್ರಹಣ, ಎ.ಟಿ. ರವೀಶ್ ಸಂಗೀತ, ಡಿ. ರವಿ ಸಂಕಲನ, ಕುಮಾರ್ ನೊಣವಿನಕೆರೆ ಪ್ರಸಾದನ ಈ ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin