Madanur Manu starrer "Kedar Nath Kuripharam" hits screens this week
ಮಡನೂರ್ ಮನು ಅಭಿನಯದ “ಕೇದಾರ್ ನಾಥ್ ಕುರಿಫಾರಂ” ಈ ವಾರ ತೆರೆಗೆ
ಜೆ.ಕೆ.ಮೂವೀಸ್ ಲಾಂಛನದಲ್ಲಿ ಕೆ.ಎಂ ನಟರಾಜ್ ನಿರ್ಮಿಸಿರುವ, ಶೀನು ಸಾಗರ್ ನಿರ್ದೇಶನದಲ್ಲಿ “ಕಾಮಿಡಿ ಕಿಲಾಡಿಗಳು” ಖ್ಯಾತಿಯ ಮಡೆನೂರ್ ಮನು ನಾಯಕನಾಗಿ ನಟಿಸಿರುವ “ಕೇದಾರ್ ನಾಥ್ ಕುರಿಫಾರಂ” ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಮೂಲಕ ಈ ಚಿತ್ರ ಈಗಾಗಲೇ ಜನಪ್ರಿಯವಾಗಿದೆ. ಗ್ರಾಮೀಣ ಸೊಗಡಿನ ಹಾಗೂ ಕಾಮಿಡಿ ಜಾನರ್ ನ ಈ ಚಿತ್ರಕ್ಕೆ ರಾಜೇಶ್ ಸಾಲುಂಡಿ ಕಥೆ, ಸಂಭಾಷಣೆ ಬರೆದಿದ್ದು, ಚಿತ್ರಕಥೆಯನ್ನು ನಿರ್ದೇಶಕ ಶೀನು ಸಾಗರ್ ಅವರೆ ಬರೆದಿದ್ದಾರೆ.
ರಾಕೇಶ್ ತಿಲಕ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ಸನ್ನಿ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಮಡೆನೂರ್ ಮನು, ಶಿವಾನಿ, ಕರಿಸುಬ್ಬು, ಟೆನ್ನಿಸ್ ಕೃಷ್ಣ, ಮುತ್ತು ಮುಂತಾದವರಿದ್ದಾರೆ.