The second song of the movie 'One and a Half' is unveiled

‘ಒನ್ ಅಂಡ್ ಆ ಹಾಫ್’ ಸಿನಿಮಾದ ಎರಡನೇ ಸಾಂಗ್ ಅನಾವರಣ - CineNewsKannada.com

‘ಒನ್ ಅಂಡ್ ಆ ಹಾಫ್’ ಸಿನಿಮಾದ ಎರಡನೇ ಸಾಂಗ್ ಅನಾವರಣ

ಒಂದು ಸಿನಿಮಾ ಯಾವೆಲ್ಲಾ ಆಂಗಲ್ ಗಳಿಂದ ಸದ್ದು ಸುದ್ದಿಯಾಗಬೇಕೋ ಅದೆಲ್ಲಾ ಆಂಗಲ್ ಗಳಿಂದ “ಒನ್ ಅಂಡ್ ಆ ಹಾಫ್” ಸಿನಿಮಾ ಸುದ್ದಿಯಾಗುತ್ತಿದೆ. ಟೈಟಲ್ ಹಾಗೂ ಫಸ್ಟ್ ಲುಕ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಎರಡನೇ ಹಾಡು ಅನಾವರಣಗೊಂಡಿದೆ.

ಹೇ ನಿಧಿ ಎಂಬ ಮೊದಲ ಗೀತೆ ಹಿಟ್ ಲೀಸ್ಟ್ ಸೇರಿರುವ ಬೆನ್ನಲ್ಲೇ ಚಿತ್ರತಂಡ ಮತ್ತೊಂದು ಸಿಂಗಿಂಗ್ ಮೂಲಕ ಪ್ರೇಕ್ಷಕರಿಗೆ ಆಮಂತ್ರಣ ಕೊಟ್ಟಿದೆ. ರಂಗ್ಬಿರಂಗಿ, ಡೆವಿಡ್, ದಿ ವೆಕೆಂಟ್ ಹೌಸ್ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ಯುವ ಪ್ರತಿಭೆ ಶ್ರೇಯಶ್ ಸೂರಿ ಸಾರಥ್ಯದಲ್ಲಿ ಮೂಡಿ ಬರ್ತಿರುವ ಒನ್ ಅಂಡ್ ಆ ಹಾಫ್ ಚಿತ್ರದ ಹ್ಯಾಂಡಲ್ ವಿತ್ ಕೇರ್ ಎಂಬ ಹಾಡು ಬಿಡುಗಡೆ ಮಾಡಿದೆ. ನಾಯಕ ಹಾಗೂ ನಿರ್ದೇಶಕ ಆಗಿರುವ ಶ್ರೇಯಶ್ ಸೂರಿ ಹುಟ್ಟುಹಬ್ಬದ ವಿಶೇಷವಾಗಿ ಬಿಡುಗಡೆ ಮಾಡಲಾಗಿದೆ.

ನಟಿ ಮಾನ್ವಿತಾ ಹರೀಶ್ ಮಾತನಾಡಿ, ಸಿನಿಮಾ ಇಂಡಸ್ಟ್ರೀಗೆ ಆಕಸ್ಮಿಕವಾಗಿ ಎಂಟ್ರಿ ಕೊಟ್ಟೆ. ಪ್ರತಿ ಸಿನಿಮಾದಿಂದ ಇಲ್ಲಿವರೆಗೂ ತುಂಬಾ ಪ್ರೀತಿ ಕೊಟ್ಟಿದ್ದೀರ. ಮೊದಲ 3 ಸಿನಿಮಾದಲ್ಲಿ 125 ದಿನದ ಬೋರ್ಡ್ ನಿಮ್ಮ ಕಡೆಯಿಂದ ಬಂದಿದೆ. ಅದೇ ರೀತಿ ಒನ್ ಅಂಡ್ ಆ ಹಾಫ್ ಸಿನಿಮಾ 125 ದಿನ ಅಲ್ಲ 150 ದಿನದ ಬೋರ್ಡ್ ಬರಲಿ. ನಿಮ್ಮ ಸಹಕಾರವಿಲ್ಲದೇ ಏನೂ ಆಗಲ್ಲ. ಈ ಚಿತ್ರ ನನಗೆ ಸ್ಪೆಷಲ್. ಇವತ್ತು ಶ್ರೇಯಸ್ ಹುಟ್ಟುಹಬ್ಬ. ಅವರಿಗೆ ಒಳ್ಳೆಯದಾಗಲಿದೆ. ಅವರ ಚಿತ್ರ ನಿರ್ದೇಶನ ಮಾಡುವುದಲ್ಲದೇ, ನಟಿಸುತ್ತಿದ್ದಾರೆ. ನಿಮ್ಮ ತಂದೆ ಹೆಸರು ಸೂರಿ. ನನ್ನ ಗಾಢ್ ಫಾದರ್ ಹೆಸರು ಸೂರಿ. ಆ ಲಾಕ್ ಫ್ಯಾಕ್ಟರ್ ಕೂಡ ಈ ಚಿತ್ರದಲ್ಲಿ ವರ್ಕ್ ಆಗಲಿ ಎಂದು ತಿಳಿಸಿದರು.

ನಟ ಕಮ್ ನಿರ್ದೇಶಕ ಶ್ರೇಯಶ್ ಸೂರಿ ಮಾತನಾಡಿ, ಈ ಸಿನಿಮಾ ನನ್ನಿಂದ ಅಲ್ಲ. ಇಡೀ ತಂಡದ ಕೆಲಸ. ಈ ಚಿತ್ರದ ನನ್ನದಲ್ಲ. ನಮ್ಮೆಲ್ಲರದ್ದು, ರಿಲೀಸ್ ಆದ ಮೇಲೆ ನಿಮ್ಮೆಲ್ಲರದ್ದು. ಎಲ್ಲಿ ತನಕ ಕರೆದುಕೊಂಡು ಹೋಗುತ್ತೀರಾ ಎಷ್ಟು ಮುಂದೆ ಹೋಗುತ್ತೀರಾ ಅಷ್ಟೇ ಚೆನ್ನಾಗಿ ಬೆಳೆಯುತ್ತಾ ಬೆಳೆಯುತ್ತಾ ಒಳ್ಳೆ ಸಿನಿಮಾ ಮಾಡುತ್ತೇವೆ ಎಂದರು.

ಹ್ಯಾಂಡಲ್ ವಿತ್ ಕೇರ್ ಎಂಬ ಹಾಡಿಗೆ ಎಂ.ಸಿ.ಬಿಜ್ಜು ಹಾಗೂ ಯಶಸ್ ನಾಗ್ ಸಾಹಿತ್ಯ ಬರೆದಿದ್ದು, ನಾಯಕ ಶ್ರೇಯಸ್ ಸೂರಿ, ಅನಂತ್ ಹಾಗೂ ಎಂ,ಸಿ.ಬಿಜ್ಜು ಧ್ವನಿಯಾಗಿದ್ದಾರೆ. ಕದ್ರಿ ಮಣಿಕಾಂತ್ ಟ್ಯೂನ್ ಹಾಕಿರುವ ಹಾಡಿಗೆ ಶ್ರೇಯಸ್ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದಾರೆ.

ಒನ್ ಅಂಡ್ ಆ ಹಾಫ್ ಸಿನಿಮಾವನ್ನು ಸುಲಕ್ಷ್ಮೀ ಫಿಲಂಸ್ ನಡಿ ಆರ್.ಚರಣ್, ಬಿ.ಇಂಪನಾ ಪ್ರಸಾದ್, ಅರ್ಪಿತ್ ನಾರಾಯಣ್, ಸಂತೋಷ್ ನಾಗೇನಹಳ್ಳಿ, ಕದ್ರಿ ಮಣಿಕಂಠ್ ನಿರ್ಮಾಣ ಮಾಡುತ್ತಿದ್ದಾರೆ.

ಚಿತ್ರದಲ್ಲಿ ಮಾನ್ವಿತಾ ಹರೀಶ್ ಕಾಮತ್ ನಾಯಕಿಯಾಗಿ ಸಾಥ್ ಕೊಟ್ಟಿದ್ದು, ಸಾಧು ಕೋಕಿಲಾ, ಅವಿನಾಶ್ ಯೆಳಂದೂರ್, ಸುಚೇಂದ್ರ ಪ್ರಸಾದ್, ಸ್ಪರ್ಶ ರೇಖಾ, ಅನಂತು, ಸುಂದರಶ್ರೀ, ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್ ಕುಮಾರ್, ಅಮಾನ್, ನಿಕಿತಾ ದೋರ್ತೊಡಿ, ಲಲಿತಾ ನಾಯಕ್, ರಾಖಿ ಭೂತಪ್ಪ ತಾರಾಬಳಗದಲ್ಲಿದ್ದಾರೆ.

ದೇವೇಂದ್ರ ಛಾಯಾಗ್ರಹಣ, ಮುಕೇಶ್ ಜೆ ಸಂಕಲನವಿದೆ. ಮಣಿಕಾಂತ್ ಕದ್ರಿ ಸಂಗೀತವಿರುವ ಹಾಡುಗಳಿಗೆ ಭಜರಂಗಿ ಮೋಹನ್ ನೃತ್ಯ ಸಂಯೋಜಿಸಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಕಥಾಹಂದರದ ಹೊಂದಿರುವ ಒನ್ ಅಂಡ್ ಆ ಹಾಫ್ ಸಿನಿಮಾ ಶೀಘ್ರದಲ್ಲೇ ಥಿಯೇಟರ್ ಗೆ ಹಾಜರಿ ಹಾಕಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin