"Upendra" sets record on re-release as well

ರೀ ರಿಲೀಸ್ ನಲ್ಲೂ ದಾಖಲೆ ಬರೆದ “ಉಪೇಂದ್ರ” - CineNewsKannada.com

ರೀ ರಿಲೀಸ್ ನಲ್ಲೂ ದಾಖಲೆ ಬರೆದ “ಉಪೇಂದ್ರ”

ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿ ನಟಿಸಿ, ನಿರ್ದೇಶಿಸಿದ್ದ ಹಾಗೂ ಶಿಲ್ಪ ಶ್ರೀನಿವಾಸ್ ನಿರ್ಮಿಸಿದ್ದ “ಉಪೇಂದ್ರ” ಚಿತ್ರ 1999 ರಲ್ಲಿ ಬಿಡುಗಡೆಯಾಗಿ ಭರ್ಜರಿ ಹಿಟ್ ಆಗಿತ್ತು. ಈಗ ಇಪ್ಪತ್ತೈದು ವರ್ಷಗಳ ನಂತರ ಚಿತ್ರ ಕಳೆದವಾರ ರೀ ರಿಲೀಸ್ ಆಗಿದೆ. ಇಪ್ಪತ್ತೈದು ವರ್ಷಗಳ ನಂತರವೂ ಚಿತ್ರಕ್ಕೆ ಅದೇ ತರಹ ಅದ್ದೂರಿ ಓಪನಿಂಗ್ ಸಿಕ್ಕಿದೆ.

ಉಪ್ಪಿ ಅಭಿಮಾನಿಗಳು ಚಿತ್ರವನ್ನು ನೋಡಿ ಫಿದಾ ಆಗಿದ್ದಾರೆ. ಚಿತ್ರ ಮರು ಬಿಡುಗಡೆಯಾಗಿ ಒಂದು ವಾರ ಪೂರೈಸಿ ಎರಡನೇ ವಾರಕ್ಕೆ ಕಾಲಿಡುತ್ತಿದೆ. ಅನೇಕ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ತ್ರಿವೇಣಿ ಸೇರಿದಂತೆ ಅನೇಕ ಚಿತ್ರಮಂದಿರಗಳಲ್ಲಿ ಎರಡನೇ ವಾರದಲ್ಲೂ ಚಿತ್ರ ಮುಂದುವರೆಯಲಿದೆ.

ಈ ಚಿತ್ರ ಬರೀ ಕನ್ನಡಿಗರಿಗಷ್ಟೇ ಅಲ್ಲ. ಅನ್ಯ ಭಾಷೆಯವರಿಗೂ ಮೆಚ್ಚುಗೆಯಾಗಿದೆ. ಚಿತ್ರದ ರಿಮೇಕ್ ರೈಟ್ಸ್ ನೀಡುವಂತೆ ನಿರ್ಮಾಪಕರಿಗೆ ಅನೇಕ ಭಾಷೆಗಳಿಂದ ಬೇಡಿಕೆ ಬರುತ್ತಿದೆ.

ಇಪ್ಪತ್ತೈದು ವರ್ಷಗಳ ನಂತರವೂ ಜನರು “ಉಪೇಂದ್ರ” ಚಿತ್ರಕ್ಕೆ ತೋರುತ್ತಿರುವ ಒಲವಿಗೆ ಮನತುಂಬಿ ಬಂದಿದೆ ಎಂದು ತಿಳಿಸಿರುವ ನಿರ್ಮಾಪಕ ಶಿಲ್ಪ ಶ್ರೀನಿವಾಸ್, ಚಿತ್ರತಂಡಕ್ಕೆ ಹಾಗೂ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin