Madhura Gowda debuts in Kannada cinema
ಕನ್ನಡ ಚಿತ್ರರಂಗಕ್ಕೆ ಮಲೆನಾಡಿನ ಕುವರಿ ‘ಮಧುರಾ ಗೌಡ ಪಾದಾರ್ಪಣೆ
ಕನ್ನಡ ಚಿತ್ರರಂಗಕ್ಕೆ ಮಲೆನಾಡಿನ ಕುವರಿ ಕನ್ನಡ ಚಿತ್ರಕ್ಕೆ ಮಲೆನಾಡಿನ ಮತ್ತೊಬ್ಬಳು ಕುವರಿ ಪ್ರವೇಶ ವಾಗಿದೆ .ಕನ್ನಡದ “ರೆಡ್ರಮ್ “ಚಿತ್ರದಲ್ಲಿ ಕುಶಾಲನಗರದ ‘ಮಧುರಾ ಗೌಡ ‘ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಅಲ್ಲದೇ, ಈ ಚಿತ್ರ ಚಿತ್ರೀಕರಣದಲ್ಲಿರುವಾಗಲೇ ಇನ್ನೊಂದು ಹೆಸರಿಡದ ಬಹು ತಾರಾಗಣದ ಬಾರಿ ದೊಡ್ಡ ಬಜೆಟ್ ನ ಚಿತ್ರಕ್ಕೆ ಆಯ್ಕೆ ಆಗಿದ್ದಾರೆ.
ಹಾಗೆ ಹಲವು ಚಿತ್ರಗಳಿಗೆ ಮಾತುಕತೆ ನಡೆಯುತ್ತಿದೆ, ಎಂದು ಮಧುರಾ ತಿಳಿಸಿದ್ದಾರೆ. ಹಲವು ಹೊಸ ನಟಿಯರು ಚಿತ್ರ ರಂಗಕ್ಕೆ ಬರುತಿರುವ ಈ ಸಮಯದಲ್ಲಿ ಮಧುರಾ ತಮ್ಮ ನಟನಾ ಕೌಶಲ್ಯದಿಂದ ಕನ್ನಡ ಸಿನಿ ರಸಿಕರ ಮನೆ ಮನದಲ್ಲಿ ನೆಲೆಸುವಂತಾಗಲಿ. ಮಾಡೆಲಿಂಗ್ ಹಾಗೂ ಅಭಿನಯ ಕ್ಷೇತ್ರದಲ್ಲಿ ತರಭೇತಿ ಪಡೆದಿರುವ ಮಧುರಾ ಕೌಟಿಲ್ಯ ಸಿನಿಮಾ’ಸ್ ಹಾಗೂ ಹನಿ ಚೌಧರಿ ಫಿಲಂ’ಸ್ ಲಾಂಛನದ ದಡಿಯಲ್ಲಿ ಪ್ರಾರಂಭವಾದ “ರೆಡ್ರಮ್ “ಕನ್ನಡ ಚಿತ್ರದಲ್ಲಿ ಯು.ಪಿ.ಯಲ್ಲಿ ನಡೆದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.