ಅಪ್ರತಿಮ ಕಲಾವಿದ ಮನ್ ದೀಪ್ ರಾಯ್ ಇನ್ನು ನೆನಪು ಮಾತ್ರ
ಅಪ್ರತಿಮ ಕಲಾವಿದ ಮನ್ ದೀಪ್ ರಾಯ್ ಇನ್ನು ನೆನಪು ಮಾತ್ರ.ಕನ್ನಡ ಚಿತ್ರರಂಗದ ಹಿರಿಯ ಪೆÇೀಷಕ ನಟ ಮನ್ ದೀಪ್ ರಾಯ್ ಹೃದಯಾಘಾತದಿಂದ ನಿಧನರಾಗಿದ್ದಾರೆ.ಅವರಿಗೆ 73 ವರ್ಷ ವಯಸ್ಸಾಗಿತ್ತು.ಪುತ್ರಿ ಅಕ್ಷತಾ ರಾಯ್ ಸೇರಿದಂತೆ ಕುಟುಂಬದ ಸದಸ್ಯರು ಬಂಧು ಬಳಗ ಅಗಲಿದ್ದಾರೆ.
ಹಾಸ್ಯ ಕಲಾವಿದನಾಗಿ ವೈವಿದ್ಯಮಯ ಪಾತ್ರ ಮಾಡಿದ ಮನ್ ದೀಪ್ ರಾಯ್ ಎನ್ನುವ ಅಪ್ರತಿಮ ಕಲಾವಿದ ಇನ್ನೂ ಬರೀ ನೆನಪು ಮಾತ್ರ. ಈ ಮೂಲಕ ಕನ್ನಡ ಚಿತ್ರರಂಗದ ಹಿರಿಯ ಕೊಂಡಿಯೊಂದು ಕಳಚಿ ಬಿದ್ದಿದೆ.
ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಚೇತರಿಸಿಕೊಳ್ಳುತ್ತಾರೆ ಎನ್ನುವಾಗಲೇ ಮುಂಜಾನೆ 1.45ರ ಸುಮಾರಿಗೆ ಕಾವಲ್ ಬೈರಸಂದ್ರದ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
600 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಸ್ಯ ಕಲಾವಿದನಾಗಿ ಅಭಿನಯದ ಮೂಲಕ ಕನ್ನಡದ ಸಿನಿಮಾ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
ಶಂಕರ್ ನಾಗ್ -ಅನಂತ್ ನಾಗ್ ಜೊತೆ ಉತ್ತಮ ಒಡನಾಟ ಹೊಂದಿದ್ದ ಮನ್ ದೀಪ್ ರಾಯ್ ಅವರು
ಮಿಂಚಿನ ಓಟ , ಗೀತಾ, ಆಕ್ಸಿಡೆಂಟ್ ಏಳು ಸುತ್ತಿನ ಕೋಟೆ , ಗಜಪತಿ ಗರ್ವಭಂಗ , ಆಕಸ್ಮಿಕ, ಅಯ್ಯ , ಸೇರಿ 600 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು. 80ರ ದಶಕದಲ್ಲಿ ಕನ್ನಡ ಚಿತ್ರ ರಂಗ ಪ್ರವೇಶಿಸಿದ ಮನ್ ದೀಪ್ ರಾಯ್ ಕನ್ನಡದ ಅನೇಕ ನಟರ ಜೊತೆ ನಟಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಹೃದಯಾಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಶೇಷಾದ್ರಿಪುರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಹೃಧಯಾಘಾತದಿಂದ ನಿಧನರಾಗಿದ್ದಾರೆ.
ಆಸ್ಪತ್ರೆಯಲ್ಲದ್ದ ಅವಧಿಯಲ್ಲಿ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರು ಗಣ್ಯರು ಹಾಗೂ ಆಪ್ತರು ಮನ್ ದೀಪ್ ರಾಯ್ ಅವರ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದರು.