Actress Adviti Shetty in a different role in Racer

ರೇಸರ್ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿ ಅದ್ವಿತಿ ಶೆಟ್ಟಿ - CineNewsKannada.com

ರೇಸರ್ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿ ಅದ್ವಿತಿ ಶೆಟ್ಟಿ

ಸೆಟ್ಟೇರಿತು ನೈಜ ಘಟನೆ ಆಧಾರಿತ ‘ರೇಸರ್’ ಸಿನಿಮಾ- ಭರತ್ ವಿಷ್ಣುಕಾಂತ್ ನಿರ್ದೇಶನದ ಮೊದಲ ಸಿನಿಮಾ

ನಿರ್ಮಾಪಕ ಹಾಗೂ ನಿರ್ದೇಶಕ ವಿಷ್ಣುಕಾಂತ್ ಪುತ್ರ ಭರತ್ ವಿಷ್ಣುಕಾಂತ್ ‘ರೇಸರ್’ ಸಿನಿಮಾ ಮೂಲಕ ನಿರ್ದೇಶಕನಾಗಿ ಹೊರ ಹೊಮ್ಮುತ್ತಿದ್ದಾರೆ. ಬೈಕ್ ರೇಸಿಂಗ್ ಕುರಿತ ನೈಜ ಘಟನೆ ಆಧಾರಿತ ‘ರೇಸರ್’ ಚಿತ್ರದ ಮುಹೂರ್ತ ಇಂದು ನೆರವೇರಿದೆ. ಚಿತ್ರದಲ್ಲಿ ಸಂದೇಶ್ ಪ್ರಸನ್ನ, ಅದ್ವಿತಿ ಶೆಟ್ಟಿ ನಾಯಕ ಹಾಗೂ ನಾಯಕಿಯಾಗಿ ನಟಿಸುತ್ತಿದ್ದು, ಭರತ್ ವಿಷ್ಣುಕಾಂತ್ ನಿರ್ದೇಶನದ ಜೊತೆಗೆ ಭರತ್ ಫಿಲಂಸ್ ನಡಿ ತಾವೇ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ನಿರ್ದೇಶಕ ಭರತ್ ವಿಷ್ಣುಕಾಂತ್ ಮಾತನಾಡಿ ಇದು ನನ್ನ ನಿರ್ದೇಶನದ ಮೊದಲ ಸಿನಿಮಾ. ನನ್ನ ಗುರು ಖಲೀಮ್ ಮೆಕಾನಿಕ್ ಹಾಗೂ ನ್ಯಾಶನಲ್ ಚಾಂಪಿಯನ್, ಅವರ ಗ್ಯಾರೇಜ್ ನಲ್ಲಿ ನಡೆದ ನೈಜ ಘಟನೆ ಇಟ್ಟುಕೊಂಡು ಅದಕ್ಕೆ ಸಿನಿಮ್ಯಾಟಿಕ್ ಟಚ್ ಕೊಟ್ಟು ‘ರೇಸರ್’ ಕಥೆ ಹೆಣೆಯಲಾಗಿದೆ.

ಸಿನಿಮಾ ಬೈಕ್ ರೇಸರ್ ಬಗ್ಗೆ ಆಗಿರೋದ್ರಿಂದ ರಿಯಲ್ ಬೈಕ್ ರೇಸರನ್ನೇ ಹಾಕಿಕೊಂಡು ಸಿನಿಮಾ ಮಾಡುತ್ತಿದ್ದೇನೆ. ಬುದ್ದ್ ಇಂಟರ್ ನ್ಯಾಶನಲ್ ಸರ್ಕ್ಯೂಟ್ ನಲ್ಲಿ ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲು ಚಿತ್ರೀಕರಣ ಮಾಡುತ್ತಿದ್ದೇವೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಮೈಸೂರು ಸ್ವಾಮಿ ಛಾಯಾಗ್ರಹಣ ಚಿತ್ರಕ್ಕಿದೆ. ಭಜರಂಗಿ ಲೋಕಿ, ಯಶ್ ಶೆಟ್ಟಿ, ಕಾಕ್ರೋಚ್ ಸುಧಿ, ಬಾಲ ರಾಜ್ವಾಡಿ, ಕಾಮಿಡಿ ಕಿಲಾಡಿ ಸೂರಜ್ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ್ರು.

ನಾಯಕ ನಟ ಸಂದೇಶ್ ಪ್ರಸನ್ನ ಮಾತನಾಡಿ ನಾನು ಪ್ರೊಫೇಶನಲ್ ಸೂಪರ್ ಬೈಕ್ ರೇಸರ್. ನಿರ್ದೇಶಕರು ಬೈಕ್ ರೇಸರ್ ಗಳು ಇಂಟರ್ ನ್ಯಾಶನಲ್ ಚಾಂಪಿಯನ್ ಶಿಪ್ ಗೆ ಹೋಗಲು ಯಾವೆಲ್ಲ ರೀತಿ ಕಷ್ಟ ಪಡುತ್ತಾರೆ ಅನ್ನೋದನ್ನು ಕೇಳಿ ಕಥೆಯಲ್ಲಿ ಇಂಪ್ಲಿಮೆಂಟ್ ಮಾಡಲು ನನ್ನ ಬಳಿ ಬಂದಿದ್ರು. ನಂತರ ನೀವೇ ಹೀರೋ ಆಗಿ ಮಾಡಿ ಅಂದ್ರು. ಒಬ್ಬ ರೇಸರ್ ಕಥೆ ಚಿತ್ರದಲ್ಲಿದೆ. ಕಥೆ ತುಂಬಾ ಸ್ಪೂರ್ತಿದಾಯಕವಾಗಿದೆ. ಎಲ್ಲರನ್ನು ಹುರಿದುಂಬಿಸುತ್ತೆ. ಇದು ನನ್ನ ಮೊದಲನೇ ಸಿನಿಮಾ, ಮೊದಲನೇ ಪ್ರಯತ್ನ ಎಲ್ಲರೂ ಸಪೋರ್ಟ್ ಮಾಡಿ ಎಂದ್ರು.

ನಾಯಕಿ ಅದ್ವಿತಿ ಶೆಟ್ಟಿ ಮಾತನಾಡಿ ಈ ರೀತಿಯ ಜಾನರ್ ಸಿನಿಮಾದಲ್ಲಿ ನಟಿಸಲು ತುಂಬಾ ಖುಷಿಯಾಗುತ್ತೆ. ರೇಸಿಂಗ್ ಅನ್ನೋದು ಒಬ್ಬರಿಗೆ ಕೆರಿಯರ್, ಪ್ರೊಫೆಶನ್ ಆಗಿರುತ್ತೆ. ತುಂಬಾ ಜನಕ್ಕೆ ಸ್ಪೋರ್ಟ್ಸ್ ಅಂದ್ರೆ ಸಪೋರ್ಟ್ ಸಿಗಲ್ಲ. ಈ ಸಿನಿಮಾ ತುಂಬಾ ಜನರಿಗೆ ಮೋಟಿವೇಶನ್ ಆಗುತ್ತೆ. ರಿಯಲ್ ಲೈಫ್ ನಲ್ಲಿ ನನಗೆ ಬೈಕ್ ಅಂದ್ರೆ ತುಂಬಾ ಇಷ್ಟ ಈ ಸಿನಿಮಾದಲ್ಲೂ ಬೈಕ್ ಪ್ರಿಯೆ. ಚಿತ್ರೀಕರಣ ಆರಂಭವಾಗಿದೆ ನಾನು ಕೂಡ ಭಾಗಿಯಾಗಿದ್ದೇನೆ. ನಮ್ಮ ಇಡೀ ತಂಡಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ತಿಳಿಸಿದ್ರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin