“ಮರಳಿ ಮನಸಾಗಿದೆ” ಫೆಬ್ರವರಿ 12 ರಂದು ಚಿತ್ರ ತೆರೆಗೆ
“ಮರಳಿ ಮನಸಾಗಿದೆ” ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಗಿದೆ. ಕುತೂಹಲ ಕೆರಳಿಸಿದೆ ಚಿತ್ರ ಫೆಬ್ರವರಿ 12ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇದಕ್ಕೂ ಮುನ್ನ ಹಲವೆಡೆ ಪೇಡ್ ಪ್ರಿಮಿಯರ್ ನಲ್ಲಿ ಚಿತ್ರ ನೋಡಿದ ಮಂದಿ ಮುಕ್ತ ಕಂಠದಿಂದ ಪ್ರಶಂಸಿದ್ದಾರೆ

ಮುದೇಗೌಡ, ನವೀನ್ ಕುಮಾರ್ ಆರ್ ಓ ತೆಲಿಗಿ ಮಲ್ಲಿಕಾರ್ಜುನಪ್ಪ, ನಾಗರಾಜ್ ಶಂಕರ್ ಹಾಗೂ ಆಶಿತ್ ಸುಬ್ರಹ್ಮಣ್ಯ ನಿರ್ಮಿಸಿರುವ, ನಾಗರಾಜ್ ಶಂಕರ್ ನಿರ್ದೇಶನದಲ್ಲಿ ಅರ್ಜುನ್ ವೇದಾಂತ್ ನಾಯಕರಾಗಿ ನಟಿಸಿದ್ದಾರೆ
ನಾಯಕ ಅರ್ಜುನ್ ವೇದಾಂತ್ ಮಾತನಾಡಿ “ಕುಡ್ಲ ಕೆಫೆ ಚಿತ್ರದ ಹತ್ತು ವರ್ಷಗಳ ನಂತರ ನಟಿಸಿದ ಚಿತ್ರ “ಮರಳಿ ಮನಸಾಗಿದೆ” ಇದೇ ಫೆಬ್ರವರಿ 12 ರಂದು ಬಿಡುಗಡೆಯಾಗುತ್ತಿದೆ.ಟ್ರೇಲರ್ ಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಿಡುಗಡೆಗೂ ಮುನ್ನ ಬೆಂಗಳೂರು, ಪುತ್ತೂರು, ಉಡುಪಿ ಮುಂತಾದ ಕಡೆ “ಮರಳಿ ಮನಸಾಗಿದೆ” ಚಿತ್ರದ ಪೇಡ್ ಪ್ರೀಮಿಯರ್‍ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು

ನಿರ್ದೇಶಕ ನಾಗರಾಜ್ ಶಂಕರ್ ಮಾತನಾಡಿ “ಮರಳಿ ಮನಸಾಗಿದೆ” ಮೊದಲ ಚಿತ್ರ. ಎಂಟು ಕಡೆ ಚಿತ್ರದ ಪೇಡ್ ಪ್ರಿಮಿಯರ್ ನಡೆದಿದೆ. ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ನೋಡಿವರೆಲ್ಲರೂ ಚಿತ್ರದ ಬಗ್ಗೆ ಆಡಿದ ಪ್ರಶಂಸೆಯ ಮಾತಗಳನ್ನು ಕೇಳಿ ಬಹಳ ಖುಷಿಯಾಗಿದೆ. ಪ್ರೇಕ್ಷಕರು ಕೊಟ್ಟ ದುಡ್ಡಿಗೆ ಮೋಸ ಮೋಸವಾಗದ ಚಿತ್ರವಿದು. ಇದೊಂದು ಸಾಮಾನ್ಯ ಪ್ರೇಮಕಥೆಯಲ್ಲ. ಉತ್ತಮ ಕಂಟೆಂಟ್ ವುಳ್ಳ ಚಿತ್ರ. ಸಾಮಾನ್ಯ ಜನರಿಗೂ ತಲುಪುವ ಚಿತ್ರ ಎಂದು ಮಾಹಿತಿ ಹಂಚಿಕೊಂಡರು
ನಿರ್ಮಾಪಕ ಮುದೇಗೌಡ ನವೀನ್ ಕುಮಾರ್ ಮಾತನಾಡಿ ಸಾಮಾನ್ಯವಾಗಿ ಪ್ರಿಮಿಯರ್ ಶೋಗೆ ಮೊದಲು ಟ್ರೇಲರ್ ರಿಲೀಸ್ ಮಾಡುತ್ತಾರೆ. ಆದರೆ ನಾವು ಪೇಡ್ ಪ್ರಿಮಿಯರ್ ಮುಗಿಸಿ ಟ್ರೇಲರ್ ಬಿಡುಗಡೆ ಮಾಡಿದ್ದೇವೆ. ಚಿತ್ರಮಂದಿರಗಳಲ್ಲೇ ನಮ್ಮ ಚಿತ್ರ ನೋಡಿ ಪ್ರೋತ್ಸಾಹಿಸಿ ಎಂದು ಹೇಳಿದರು

ನಾಯಕಿಯರಾದ ನಿರೀಕ್ಷಾ ಶೆಟ್ಟಿ ಹಾಗೂ ಸ್ಮೃತಿ ವೆಂಕಟೇಶ್, ನಟ ಗಿರೀಶ್ ಜತ್ತಿ, ಸಂಗೀತ ನಿರ್ದೇಶಕ ವಿನು ಮನಸು, ಛಾಯಾಗ್ರಾಹಕ ಹಾಲೇಶ್ ಹಾಗೂ ವಿಜಯ್ ಸುಬ್ರಹ್ಮಣ್ಯ, ಹರೀಶ್ ಎಸ್ ಎಂ, ಸಂಜಯ್ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು
ಚಿತ್ರದಲ್ಲಿ ಟಿ.ಎಸ್.ನಾಗಾಭರಣ, ಮಾನಸಿ ಸುಧೀರ್, ಭೋಜರಾಜ್ ವಾಮಂಜೂರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

