ಲುಡೋ ಹಾಡು ಬಿಡುಗಡೆ ಮಾಡಿದ ಸಚಿವ ದಿನೇಶ್ ಗುಂಡೂರಾವ್

ಹೈಪರ್ ಲಿಂಕ್ ಕಥೆ ಹೊಂದಿರುವ ಪ್ಯಾನ್ ಇಂಡಿಯಾ ‘ಲುಡೋ’ ಸಿನಿಮಾ ಸದ್ದಿಲ್ಲದೆ ಚಿತ್ರೀಕರಣ ಪೂರ್ಣಗೊಂಡಿದ್ದು ಚಿತ್ರದ ಹಾಡುಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಬಿಡುಗಡೆ ಮಾಡಿ ಶುಭಹಾರೈಸಿದ್ಧಾರೆ.

ನೀಲಕಂಠ ಪ್ರೊಡಕ್ಷನ್ಸ್ ಹೌಸ್ ಅಡಿಯಲ್ಲಿ ಮಹೇಂದ್ರನ್.ಎಂ. ಬಂಡವಾಳ ಹೂಡಿದ್ದಾರೆ. ಕನ್ನಡಿಗ ಡಿ.ಯೋಗರಾಜ್ ಸಿನಿಮಾಕ್ಕೆ ರಚನೆ, ಛಾಯಾಗ್ರಹಣ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿರುವುದು ನಾಲ್ಕನೇ ಅನುಭವ.

ಈ ವೇಳೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಕನ್ನಡ ಸಿನಿಮಾರಂಗದಲ್ಲಿ ಒಳ್ಳೆಯ ಚಿತ್ರಗಳು ಬರುವ ಅಗತ್ಯತೆ ಬಹಳವಾಗಿದೆ. ಹೊಸ ಯುವ ಪ್ರತಿಭಗಳು ಬರಬೇಕು. ಅವರ ಆಲೋಚನೆಗಳು ವಿನೂತನ ರೀತಿಯಲ್ಲಿ ಪ್ರಯತ್ನ ಮಾಡುವ ಧೈರ್ಯ ಇರುತ್ತದೆ. ಸೃಜನಾತ್ಮಕ ಕ್ಷೇತ್ರದಲ್ಲಿ ಸಿನಿಮಾ ಮುಖಾಂತರ ಜನರ ಮುಂದೆ ಕಾರ್ಯಗತ ಮಾಡಬಹುದು. ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಆಯ್ಕೆ ಮಂದಿಗೆ ಮಾತ್ರ ಸಿಗುತ್ತದೆ. ಅಂತಿಮವಾಗಿ ಅವಲಂಬಿತವಾಗಿರುವುದು ಪ್ರೇಕ್ಷಕ, ಜನರ ಮೇಲೆ. ಯಾವ ಒತ್ತಡವು ನಡೆಯುವುದಿಲ್ಲ. ಇಚ್ಚಾನುಸಾರ ಯಾರ ಮೇಲೆ ಪ್ರೀತಿ, ಆಕರ್ಷಣೆ ಬರುತ್ತದೋ ಅವರು ಮೇಲೆ ಬರುತ್ತಾರೆ. ಆದರೂ ನಮ್ಮ ಪ್ರಾಮಾಣಿಕ ಪ್ರಯತ್ನಗಳು ನಿಲ್ಲಬಾರದು. ನಿಮ್ಮಗಳ ಶ್ರಮ ತೆರೆ ಮೇಲೆ ಕಾಣಿಸುತ್ತದೆ. ಒಳ್ಳೆಯದಾಗಲಿ ಎಂದರು.

ನಿರ್ದೇಶಕ ಕನ್ನಡಿಗ ಡಿ.ಯೋಗರಾಜ್ ಮಾತನಾಡಿ, ಇದೊಂದು ಹೈಪರ್ ಲಿಂಕ್ ಕಥೆ ಎನ್ನಬಹುದು. ನಾಲ್ಕು ಭಿನ್ನ ಮನಸ್ಸುಗಳ ಪಾತ್ರಗಳು ಬೇರೆ ರೀತಿಯಲ್ಲಿ ಇದ್ದರೂ ಒಬ್ಬರಿಗೊಬ್ಬರು ಭೇಟಿಯಾಗುವುದಿಲ್ಲ. ಅಷ್ಟು ಜನರು ಕ್ಲೈಮಾಕ್ಸ್‍ದಲ್ಲಿ ಒಟ್ಟಿಗೆ ಸಂದಿಸುತ್ತಾರೆ. ಊಹಿಸಲಾಗದಂತ ತಿರುವುಗಳು ಇರುವುದು ವಿಶೇಷ. ಜತೆಗೆ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಅಂಶಗಳು ಇರಲಿದೆ ಎಂದು ಮಾಹಿತಿ ಹಂಚಿಕೊಂಡರು

ನಾಯಕರುಗಳಾಗಿ ಶರಣ್‍ರಾಜ್ ಕಾಸರಗೂಡು ಮತ್ತು ಆರ್ಯನ್. ನಾಯಕಿ ಜೀವಿತ ಪ್ರಭಾಕರ್. ಉಳಿದಂತೆ ಬೋಜರಾಜ್ ವಾಮನ್‍ಜೂರು, ಹರಿಣಿ ಕುಲಾಲ್, ಲಕ್ಷೀಶ್ ಸುವರ್ಣ, ಇಸ್ಮೈಲ್ ಮೂಡುಶೆಡ್ಡ, ಮೊಹಿದ್ದೀನ್ ಬಾವ, ವೀರೇಂದ್ರ ಸುವರ್ಣ ಕಟೀಲು, ದೀಕ್ಷಿತ್ ಪೂಜಾರಿ, ರಾಜಿಯೋಗಿ, ರಮೇಶ್ ರೈ ಕುಕ್ಕುವಲ್ಲಿ, ಪವನ್ ಬಂಗೇರ ಮುಂತಾದವರು ಅಭಿನಯಿಸಿದ್ದಾರೆ.

ಸಂಗೀತ ರಾಜ್‍ಭಾಸ್ಕರ್, ಸಾಹಸ ಸ್ಟಂಟ್‍ವೇಲು, ಕಾಸ್ಟ್ಯೂಮ್ ಸುಶೀಲಾಯೋಗರಾಜ್, ನೃತ್ಯ ಶ್ವೇತಾ-ಇಸಾಕ್ ಅವರದಾಗಿದೆ. ಮಂಗಳೂರು ಸುಂದರ ತಾಣಗಳಲ್ಲಿ ಸಂಪೂರ್ಣ ಚಿತ್ರೀಕರಣ ನಡೆಸಲಾಗಿದೆ. ಕನ್ನಡ ಸೇರಿದಂತೆ ತೆಲುಗು, ಹಿಂದಿ ಹಾಗೂ ತಮಿಳು ಭಾಷೆಯಲ್ಲಿ ಸಿದ್ದಗೊಂಡಿರುವ ‘ಲುಡೋ’ ಚಿತ್ರ ಮುಂದಿನ ತಿಂಗಳು ತೆರೆಗೆ ಬರುವ ಸಾಧ್ಯತೆ ಇದೆ.

Related Posts

‘ದೇವಿ ಮಹಾತ್ಮೆ’ ಚಿತ್ರ ಡಿಸೆಂಬರ್ 4 ರಂದು ಬಿಡುಗಡೆ : ಕೆಆರ್ ಜಿ ಸ್ಟುಡಿಯೋಸ್ ವಿತರಣೆ

ಹಿರಿಯ ನಟ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ದೇವಿ ಮಹಾತ್ಮೆ’ ಚಿತ್ರ ಡಿಸೆಂಬರ್ 4 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಚಿತ್ರದ ಆಡಿಯೋ ಹಕ್ಕುಗಳನ್ನು ಪ್ರತಿಷ್ಠಿತ ‘ಹೊಂಬಾಳೆ ಮ್ಯೂಸಿಕ್’ ಸಂಸ್ಥೆ ಪಡೆದುಕೊಂಡಿತ್ತು. ಇತ್ತೀಚೆಗಷ್ಟೇ ಹೊಂಬಾಳೆ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‍ನಲ್ಲಿ ಬಿಡುಗಡೆಯಾದ…

ಕದ್ರಿ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಬ್ರೋ ಗೌಡ’ ಪ್ರವೇಶ

ಬಿಗ್ ಬಾಸ್ ಕನ್ನಡ ಸೀಸನ್ 8’ರ ಮೂಲಕ ಕನ್ನಡಿಗರ ಮನೆಮಾತಾಗಿ, ಬಳಿಕ ಲಕ್ಷ್ಮೀ ಬಾರಮ್ಮ’,ಅಗ್ನಿಸಾಕ್ಷಿ ಧಾರಾವಾಹಿಗಳ ಮೂಲಕ ಕಿರುತೆರೆ ವೀಕ್ಷಕರ ಮನಗೆದ್ದಿರುವ ನಟ ಶಮಂತ್ ಬ್ರೋ ಗೌಡ, ಇದೀಗ ಪೂರ್ಣಪ್ರಮಾಣದ ನಾಯಕನಟನಾಗಿ ಚಂದನವನಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ವಿಭಿನ್ನ ಕಥಾಹಂದರದ ರಾಘು’…

Leave a Reply

Your email address will not be published. Required fields are marked *


Notice: ob_end_flush(): Failed to send buffer of zlib output compression (0) in /home/alydqcdn/public_html/wp-includes/functions.php on line 5581