"Muddugara Madappa" folk style Suprabhata visual song released

“ಮುದ್ದುಗಾರ ಮಾದಪ್ಪ’ಜಾನಪದ ಶೈಲಿಯ ಸುಪ್ರಭಾತ ದೃಶ್ಯಗೀತೆ ಬಿಡುಗಡೆ - CineNewsKannada.com

“ಮುದ್ದುಗಾರ ಮಾದಪ್ಪ’ಜಾನಪದ ಶೈಲಿಯ ಸುಪ್ರಭಾತ ದೃಶ್ಯಗೀತೆ ಬಿಡುಗಡೆ

ಶ್ರೀ ಮಲೆ ಆಡಿಯೋ ವಿಡಿಯೋ ಸಂಸ್ಥೆ ಹೊರತಂದಿರುವ ಚೆಲ್ಲಾಟಗಾರ ಮಾದಪ್ಪ ಖ್ಯಾತಿಯ ಕಲಾಶ್ರೀ ಡಾ.ಜಯಶ್ರೀ ಅರವಿಂದ್ ಸಾಹಿತ್ಯ ಮತ್ತು ಸಂಗೀತದಲ್ಲಿ ಮೂಡಿ ಬಂದಿರುವ “ಮುದ್ದುಗಾರ ಮಾದಪ್ಪ” ಶ್ರೀಮಲೆ ಮಹದೇಶ್ವರ ಸ್ವಾಮಿಯ ಜಾನಪದ ಶೈಲಿಯ ಸುಪ್ರಭಾತ ದೃಶ್ಯಗೀತೆಯನ್ನು ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿರುದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ಬಿಡುಗಡೆ ಮಾಡಿದರು

ಶ್ರೀ ಮಲೆ ಮಹದೇಶ್ವರ ಸ್ವಾಮಿಯ ದಿವ್ಯ ಸನ್ನಿಧಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕಿ ಕಲಾಶ್ರೀ ಡಾ.ಜಯಶ್ರೀ ಅರವಿಂದ್, ಅರವಿಂದ್ ಕಿಗ್ಗಾಲ್, ಶ್ರೀ ಮಲೆ ಆಡಿಯೋ ವಿಡಿಯೋ ಸಂಸ್ಥೆಯ ಬಿ.ಅರುಣ್ ಕುಮಾರ್ ಸಿಂಗ್, ಎಂ.ಪ್ರಕಾಶ್, ಬಿ.ಹೇಮಾವತಿ ಮತ್ತು ತಲಕಾಡು ದೇವಸ್ಥಾನದ ಅಧ್ಯಕ್ಷ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

ಈ ಸೃಶ್ರಾವ್ಯವಾದ ಗೀತೆಯನ್ನು ಕನ್ನಡದ ಪ್ರಸಿದ್ಧ ಗಾಯಕರಾದ ಅಜಯ್ ವಾರಿಯರ್ ಮತ್ತು ಶ್ರೀರಕ್ಷಾ ಪ್ರಿಯರಂ ಅವರು ಹಾಡಿದ್ದಾರೆ, ಛಾಯಾಗ್ರಹಣ ಮತ್ತು ಹೃಶಾಂಕ್ ಸಿಂಗ್ ಸಂಕಲನವಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin