ಹೊಸತನದ ಚಿತ್ರ ಮಂಡ್ಯ ಹೈದಕ್ಕೆ ಮುಹೂರ್ತ

ಮನಸಾಗಿದೆ” ಚಿತ್ರ ನಿರ್ಮಾಣ ಮಾಡಿದ್ದ ನಿರ್ಮಾಪಕ ಚಂದ್ರಶೇಖರ್ ಎರಡನೇ ಬಾರಿಗೆ ಪುತ್ರ ಅಭಯ್ ಗಾಗಿ ” ಮಂಡ್ಯ ಹೈದ” ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಚಿತ್ರದ ಮುಹೂರ್ತಕ್ಕೆ ನಿವೃತ್ತ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಶಾಸಕ ರವಿ ಸುಬ್ದಮಣ್ಯ, ನಿರ್ಮಾಪಕ ಕೆ.ಪಿ ಶ್ರೀಕಾಂತ್ ಮತ್ತಿತರರು ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.

ಈ ವೇಳೆ ಮಾತಿಗಿಳಿದ ನಿರ್ಮಾಪಕ ಚಂದ್ರಶೇಖರ್, ಮಂಡ್ಯ ಸೊಗಡಿನ ಕಥೆ ಆಧಾರಿತ ಚಿತ್ರ ” ಮಂಡ್ಯ ಹೈದ” ರೈತನ ಮಗನಾಗಿ ಹಳ್ಳಿ ಸಿನಿಮಾ ಮಾಡುತ್ತಿದ್ದೇವೆ. ಶೇ. 20 ರಷ್ಟು ಬೆಂಗಳೂರು ಮತ್ತು ಶೇ. 80 ರಷ್ಟು ಭಾಗವನ್ನು ಮಂಡ್ಯದಲ್ಲಿ ಚಿತ್ರೀಕರಣ ಮಾಡುವ ಉದ್ದೇಶ ಹೊಂದಲಾಗಿದೆ. ಕಾಮಿಡಿ ಕಿಲಾಡಿಯಲ್ಲಿ ಕಾಣಿಸಿಕೊಂಡ 15 ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದರು
ಮೊದಲರ್ದ ಕಾಮಿಡಿ, ಎರಡನೇ ಅರ್ದ ಸೆಂಟಿಮೆಂಟ್ ಅಂಶಗಳನ್ನು ಚಿತ್ರ ಒಳಗೊಂಡಿದೆ., ಪಕ್ಕಾ ಮಂಡ್ಯ ಸೊಗಡಿನ ಭಾಷೆ ಬಳಸಲಾಗುತ್ತಿದೆ. ಪ್ರೀತಿ ವಿಸ್ಮಯ, ಪ್ರೀತಿಗಾಗಿ ಏನೆಲ್ಲಾ ನಡೆಯಲಿವೆ. ಭಾಂಧವ್ಯ. ನಾಯಕ ಕಿಲ್ಲರ್ ತ್ಯಾಗ ಮಾಡ್ತಾನಾ ಎನ್ನುವುದು ಚಿತ್ರ ತಿರುಳು.ಹಳ್ಳಿ ಸೊಡಗಿನ ಪ್ರೆಮ ಕಥೆ ಚಿತ್ರದಲ್ಲಿದೆ ಎಂದರು.

ನಿರ್ದೇಶಕ ಶ್ರೀಕಾಂತ್ ಮಾತನಾಡಿ, ಕಮರ್ಷಿಯಷಿಲ್ ಕಟೆಂಟ್ ಆಧರಿಸಿದ ಚಿತ್ರ.ನಿರ್ಮಾಪಕರು ಸಂಫೂರ್ಣ ತೊಡಗಿಸಿಕೊಂಡ ಹಿನ್ನೆಲೆಯಲ್ಲಿ ಒತ್ತಡ ಕಡಿಮೆಯಾಗಿದೆ.ಮುದ್ದಾದ ಪ್ರೇಮಕಥೆಯನ್ನು ತೆರೆಯ ಮೇಲೆ ತರುವ ಉದ್ದೇಶ ಹೊಂದಲಾಗಿದೆ ಎಂದರು.
ನಾಯಕ ಅಭಯ್ ಮಾತನಾಡಿ ಸಿನಿಮಾ ನಿರೀಕ್ಷೆ ಹೆಚ್ಚಳ ಮಾಡಿದೆ. ಬಂಡಿ ಮಾಂಕಾಳಮ್ಮ ಅಮ್ಮನ ಸನ್ನಿಧಿಯಲ್ಲಿ ಪೂಜೆ ಆಗಬೇಕು ಎಂದು ಬಯಸಿದ್ದೆ.ತಂದೆ ತಾಯಿ ಬೆನ್ನೆಲುಬಾಗಿ ನಿಂತಿದ್ದಾರೆ ಎಂದರೆ ಭೂಮಿಕಾ ನಾಯಕಿ, ನಿರೀಕ್ಷೆ ಇದೆ. ಹಳ್ಳಿ ಹುಡುಗಿ ಎಂದರು.
ಮನುಗೌಡ ಕ್ಯಾಮರಾ.ಥ್ರಿಲ್ಲರ್ ಮಂಜು ಸಂಗೀತವಿದೆ.ಚಿತ್ರದಲ್ಲಿ ಬಾಲರಾಜವಾಡಿ, ಸುನಂದ, ದರ್ಶನ್ ಸೂರ್ಯ, ವಿಷ್ಣು, ಪ್ರವೀಣ್, ಸೀರುಂಡೆ ರಘು ಮತ್ತಿತರಿದ್ದಾರೆ.