"Nagavalli Bungalow" movie song release: Well wishes from dignitaries

“ನಾಗವಲ್ಲಿ ಬಂಗಲೆ” ಚಿತ್ರದ ಹಾಡು ಬಿಡುಗಡೆ: ಗಣ್ಯರ ಶುಭ ಹಾರೈಕೆ - CineNewsKannada.com

“ನಾಗವಲ್ಲಿ ಬಂಗಲೆ” ಚಿತ್ರದ ಹಾಡು ಬಿಡುಗಡೆ: ಗಣ್ಯರ ಶುಭ ಹಾರೈಕೆ

ವಿಭಿನ್ನ ಕಥಾಹಂದರ ಹೊಂದಿರುವ “ನಾಗವಲ್ಲಿ ಬಂಗಲೆ” ಚಿತ್ರದ ಹಾಡು ಬಿಡುಗಡೆಯಾಗಿದೆ. ಶಾಸಕ ಡಾ. ಸಿಎನ್ ಅಶ್ವಥ್ ನಾರಾಯಣ್ ಧ್ವನಿಸುರುಳಿ ಅನಾವರಣ ಮಾಡಿದರು. ಹಿರಿಯ ನಿರ್ಮಾಪಕ ಎಸ್ ಎ ಚಿನ್ನೇಗೌಡ ಮತ್ತಿತರರು ಸಾಥ್ ನೀಡಿದ್ದಾರೆ

ನೆ.ಲ.ನರೇಂದ್ರ ಬಾಬು ಸಹೋದರ ನೆ.ಲ.ಮಹೇಶ್ ಮತ್ತು ತಮ್ಮ ಸ್ನೇಹಿತ ನೇವಿ ಮಂಜು ನಿರ್ಮಾಣ ಮಾಡಿರುವ “ನಾಗವಲ್ಲಿ ಬಂಗಲೆ” ಚಿತ್ರ ಯಶಸ್ವಿಯಾಗಲಿ.ಸಿನಿಮಾ ನೋಡಿಕೊಂಡು ಬೆಳೆದವನು. ನಾವು ಕಂಡ ಕನಸನ್ನು ಸಿನಿಮಾದಲ್ಲಿ ನೋಡುತ್ತೇವೆ ಹಾಗೂ ಸಿನಿಮಾದಲ್ಲಿ ನೋಡಿದ್ದನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತೇವೆ. ಅಂತಹ ಶಕ್ತಿ ಸಿನಿಮಾಗೆ ಮಾತ್ರ ಇರುವುದು. ತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು

ನೆ.ಲ.ನರೇಂದ್ರ ಬಾಬು ಮಾತನಾಡಿ ಶಾಸಕ ಅಶ್ವಥ್ ನಾರಾಯಣ್ ಹಿರಿಯರಾದ ಚಿನ್ನೇಗೌಡ ಅವರು ಸಮಾರಂಭಕ್ಕೆ ಬಂದಿರುವುದು ಬಹಳ ಖುಷಿಯಾಗಿದೆ. ಸಹೋದರ ನೆ.ಲ.ಮಹೇಶ್ ಹಂಸ ಕ್ರಿಯೇಷನ್ಸ್ ಲಾಂಛನದಲ್ಲಿ ನೇವಿ ಮಂಜು ಅವರೊಡಗೂಡಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ ಎಂದರು

ಕಥಾ ಲೇಖಕ ಜೆ.ಎಂ.ಪ್ರಹ್ಲಾದ್ ಮಾತನಾಡಿ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಈ ಆರು ಗುಣಗಳನ್ನು ಪ್ರತಿನಿಧಿಸುವ ಆರು ಪಾತ್ರಗಳು ಈ ಕಥೆಯಲ್ಲಿದೆ. ಇದಲ್ಲದೆ ಅರಿಷಡ್ವರ್ಗಗಳನ್ನು ಜಯಿಸಿದ ಮನುಷ್ಯ ಹೇಗಿರುತ್ತಾನೆ ಎಂದು ತಿಳಿಸುವ ಏಳನೇ ಪಾತ್ರ ಕೂಡ ಇದೆ. ಈವರೆಗೂ ನಾನು ಸಾಕಷ್ಟು ಚಿತ್ರಗಳಿಗೆ ಕಥೆ ಬರೆದಿದ್ದೇನೆ. ಇದು ನಾನು ಕಥೆ ಬರೆದಿರುವ 35 ನೇ ಚಿತ್ರ ಎಂದು ತಿಳಿಸಿದರು.

ನಿರ್ದೇಶಕರು ಕವಿ ರಾಜೇಶ್ ಮಾತನಾಡಿ ನೆ.ಲ ಮಹೇಶ್ ಹಾಗೂ ನೇವಿ ಮಂಜು ಅವರು ಕಥೆ ಇಷ್ಟವಾಗಿ ಸಿನಿಮಾ ರೂಪಕ್ಕೆ ತಂದಿದ್ದಾರೆ. ಟೀಜರ್ ಹಾಗೂ ಹಾಡುಗಳು ಎಲ್ಲರಿಗೂ ಇಷ್ಟವಾಗಿದೆ. ಫೆಬ್ರವರಿ 28ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ. ನನ್ನ ನಿರ್ದೇಶನದ 20ನೇ ಚಿತ್ರ ಎಂದು ಹೇಳಿದರು.

ಚಿತ್ರದಲ್ಲಿ ನಟಿಸಿರುವ ರೂಪ, ಯಶ್ ಮುಂತಾದ ಕಲಾವಿದರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಗಾಯಕಿಯರಾದ ಆಗಮ ಶಾಸ್ತ್ರಿ ಹಾಗೂ ಅಮೋಘ ಶಾಸ್ತ್ರಿ ಚಿತ್ರದ ಎರಡು ಹಾಡುಗಳ ಪಲ್ಲವಿ ಹಾಡಿದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin