Actor Anish's new film "Love OTT" title released

ನಟ ಅನೀಶ್ ಹೊಸ ಚಿತ್ರ “ಲವ್ ಒಟಿಟಿ” ಶೀರ್ಷಿಕೆ ಬಿಡುಗಡೆ - CineNewsKannada.com

ನಟ ಅನೀಶ್ ಹೊಸ ಚಿತ್ರ “ಲವ್ ಒಟಿಟಿ” ಶೀರ್ಷಿಕೆ ಬಿಡುಗಡೆ

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟರಲ್ಲಿ ಒಬ್ಬರಾದ ಅನೀಶ್ ತೇಜೇಶ್ವರ್ ಅವರ ಮುಂದಿನ ಚಿತ್ರ “ ಲವ್ ಒಟಿಟಿ’ ಪ್ರೇಮಿಗಳ ದಿನ ಶೀರ್ಷಿಕೆ ಅನಾವರಣವಾಗಿದೆ.,ಕನ್ನಡ ತೆಲುಗು ದ್ವಿಭಾಷೆಯಲ್ಲಿ ತಯಾರಾಗುತ್ತಿದೆ

ಮೊನ್ನೆಯಷ್ಟೇ ಪ್ರೊಡಕ್ಷನ್ಸ್ ನಂ.01 ಅನ್ನೋ ಹೆಸರಲ್ಲಿ ಥೀಮ್ ಪೋಸ್ಟರ್ ಬಿಟ್ಟು ಹುಳ ಬಿಟ್ಟಿದ್ದ ನಟ ನಿರ್ದೇಶಕ ಅನೀಶ್, ಈಗ ಅದಕ್ಕೆ ಲವ್ -ಒಟಿಟಿಅಂತ ಹೆಸರಿಟ್ಟು ಶೀರ್ಷಿಕೆ ಪ್ರಕಟಿಸಿದ್ದಾರೆ

ಒಟಿಟಿ ಎಂದರೆ Over Tourcher Pressure ಅನ್ನೋ ಅಡಿ ಬರಹವಿರೋ ಲವ್ ಒಟಿಟಿಗೆ ಇದೆ 2025ರ ನವಯುವ ಪ್ರೇಮ ಕಾವ್ಯ ಎಂದು ಹೇಳಲಾಗುತ್ತಿದೆ. ಈ ತಲೆಮಾರಿನ ಇವತ್ತಿನ ಯುವ ಮನಸುಗಳ ಕನಸುಗಳ ರಿಯಾಲಿಟಿ ತೆರೆದಿಡುವ ಕಥಾಹಂದರವಿರೋ ಸಿನಿಮಾ

ಆರಾಮ್ ಅರವಿಂದ ಸ್ವಾಮಿಗೆ ಸಿಕ್ಕ ಪ್ರತಿಕ್ರಿಯೆ ಪ್ರೀತಿ ಬೆಂಬಲದ ಬೆನ್ನಿಗೆ ಅನೀಶ್ ಸದ್ದಿಲ್ಲದೇ ಲವ್ ಒಟಿಟಿ ಶುರು ಮಾಡಿದ್ದಾರೆ. ನಿರ್ದೇಶನದ ಜೊತೆ ನಟಿಸ್ತಿರೋ ಅನೀಶ್ ಗೆ ಭಾವಪ್ರೀತ ಪ್ರೊಡಕ್ಷನ್ಸ್ ನ ಎಂ.ವಿಜಯ್ ರೆಡ್ಡಿ ಬಂಡವಾಳ ಹೂಡಿದ್ದಾರೆ. ಈ ಚಿತ್ರದ ಮೂಲಕ ವಿಜಯ್ ರೆಡ್ಡಿ ಅನ್ನೋ ನಿರ್ಮಾಪಕ ಕನ್ನಡ ಚಿತ್ರದ್ಯೋಮಕ್ಕೆ ಕಾಲಿಡ್ತಿದ್ದಾರೆ.

ಸದ್ಯಕ್ಕೆ ಇಷ್ಟು ಮಾಹಿತಿ ಹಂಚಕೊಂಡಿರುವ ಅನೀಶ್ತೇಜೇಶ್ವರ್ ಚಿತ್ರದ ಒಂದೊಂದು ವಿಚಾರವನ್ನ ಇಲ್ಲಿಂದ ಬಿಟ್ಟುಕೊಡುವುದಾಗಿ ಹೇಳಿದ್ದಾರೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin