Navarasan is an actor and producer who got married to Krishna Priya
ಕೃಷ್ಣ ಪ್ರಿಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ, ನಿರ್ಮಾಪಕ ನವರಸನ್

ನಟ, ನಿರ್ಮಾಪಕ, ನಿರ್ದೇಶಕ , ವಿತರಕ ಹಾಗೂ ಈಗಲ್ ಮೀಡಿಯಾ ಸಂಸ್ಥೆ ಮೂಲಕ ಸಾಕಷ್ಟು ಚಿತ್ರರಂಗದ ಸಮಾರಂಭಗಳನ್ನು ಯಶಸ್ವಿಯಾಗಿ ನಡೆಸಿಕೊಡುತ್ತಿರುವ ನವರಸನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ನವರಸನ್ ಹಾಗೂ ಕೃಷ್ಣಪ್ರಿಯ ಅವರ ವಿವಾಹ ಮಹೋತ್ಸವ ಇತ್ತೀಚಿಗೆ ಜೆ.ಪಿ.ನಗರದ ವರಪ್ರದ ಶ್ರೀವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿದೆ .
ನವರಸನ್ ನಿರ್ಮಾಣದ ಸೂತ್ರಧಾರ ಚಿತ್ರ ಬಿಡುಗಡೆಗೆ ಸಜ್ಜಾಗಿದೆ, ಈ ಚಿತ್ರದಲ್ಲಿ ಗಾಯಕ ಚಂದನ್,ನಟಿ ಸಂಜನಾ ಆನಂದ್ ಸೇರಿದಂತೆ ಹಲವು ಕಲಾವಿದರ ದಂಡು ಚಿತ್ರದಲ್ಲಿದೆ.