ಭೂತ ಬಂಗಲೆಯ ಸುತ್ತ ನಡೆಯುವ ಕಥಾ ಹಂದರದ ” ಓಮನ್”
ಚಂದನವನದಲ್ಲಿ ಒಳ್ಳೊಳ್ಳೆ ಸಿನಿಮಾಗಳು ಬರುತ್ತಿವೆ.. ವಿಭಿನ್ನ ಕಂಟೆಂಟ್ ಗಳನ್ನೊಳಗೊಂಡ ಸಿನಿಮಾಗಳು ವೀಕ್ಷಕರ ಮುಂದೆ ಬರುತ್ರಿವೆ. ಅದುವೆ ” ಒಮನ್ ” ಹೆಸರು ಕೇಳುವುದಕ್ಕೆ ವಿಭಿನ್ನವಾಗಿದೆ

ಅಜಯ್ ಕುಮಾರ್ ಅಂಡ್ ವಿ ಮಿರುನಳಿನಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಮನೆಯ ಸುತ್ತ ನಡೆಯುವಂತ ಘಟನೆ. ಭೂತ ಬಂಗಲೆಗೆ ಹೋದವರ ಸುತ್ತ ನಡೆಯುವ ಕಥೆ. ನಾಯಕ ಯೂಟ್ಯೂಬರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಾಯಕಿ ಪ್ಯಾರಾನಾರ್ಮಲ್ ರಿಸರ್ಚರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನೇರವಾಗಿ ಘಟನೆವವೀಕ್ಷಿಸುತ್ತಿರುವ ಅನುಭವವನ್ನು ಪ್ರೇಕ್ಷಕರಿಗೆ ಆಗುತ್ತದೆ. ಸಿನಿಮಾದಲ್ಲಿ ಅತ್ಯಾಧುನಿಕ ಕಂಪ್ಯೂಟರ್ ಗ್ರಾಫಿಕ್ಸ್ ಒಳಗೊಂಡಿದೆ. ಸಂಗೀತ ಮತ್ತು ಸೌಂಡ್ ಡಿಸೈನ್ ಚಿತ್ರದ ಶೈಲಿಗೆ ಅನುಗುಣವಾಗಿದ್ದು ನೋಡುವ ವೀಕ್ಷಕರಿಗೆ ರೋಮಾಂಚಕಾರಿ ಹಾಗೂ ಭಯಾನಕ ಅನುಭವ ನೀಡುತ್ತದೆ.

ವಿಬಿನ್ ಎಸ್ ಸಂತೋಷ್ ಕಥೆ ಬರೆದು ನಿರ್ದೇಶನ ಮಾಡಿರೋದಲ್ಲದೆ, ಸಂಕಲನ ಕೆಲಸ ನಿರ್ವಹಿಸಿದ್ದಾರೆ. ಅಜಯ್ ಕುಮಾರ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನೀಶ್ಮ ಶೆಟ್ಟಿ ನಾಯಕಿಯಾಗಿದ್ದಾರೆ.
ಉಳಿದಂತೆ ಮೈತ್ರಿ ಜಗ್ಗಿ, ಕೀರ್ತನ ಪುಲ್ಕಿ, ರಾಘು ಕಲಾವಿದ, ಆಕಾಶ್ ಕುಲಕರ್ಣಿ ಅಭಿನಯಿಸಿದ್ದಾರೆ. ಭುವನ್ ಶಂಕರ್, ಸನ್ಸ್ಕಾರ್ ಸಂಗೀತ, ಆನ್ಶೋ ಎಸ್ ಸೈಮನ್ ಎಸ್ಎಫ್ಎಕ್ಸ್ ಕೆಲಸ ಮಾಡಿದ್ದಾರೆ. ಸಿನಿಮಾದ ಸೆನ್ಸಾರ್ ಮುಗಿದಿದ್ದು, ಶೀಘ್ರದಲ್ಲಿಯೇ ತೆರೆಗೆ ಬರಲಿದೆ.

