ಇದೇ ಶುಕ್ರವಾರ ” ಮತ್ತೆ ಮತ್ತೆ” ಚಿತ್ರ ಬಿಡುಗಡೆ

ಡಾ.ಅರಣ್ ಹೊಸಕೊಪ್ಪ ನಿರ್ಮಿಸಿ, ನಿರ್ದೇಶನ ಮಾಡಿರುವ ” ಮತ್ತೆ ಮತ್ತೆ” ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಹೊಸ ವಿಷಯವನ್ನು ಮುಂದಿಟ್ಟುಕೊಂಡು ಗಮನ ಸೆಳೆಯುವ ಪ್ರಯತ್ನ ಮಾಡಲಾಗಿದೆ.
ಈ ವೇಳೆ ಮಾತಿಗಿಳಿದ ನಿರ್ದೇಶಕ, ನಿರ್ಮಾಪಕ ಅರುಣ್ ಹೊಸಕೊಪ್ಪ.ಪತ್ರಿಕೋದ್ಯಮ ಮುಗಿಸಿದ ವಿದ್ಯಾರ್ಥಿಗಳು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ನಿರ್ಧರಿಸಿ ತಮ್ಮಲ್ಲಿರುವ ಪ್ರತಿಭೆಯನ್ನು ಬಳಸಿಕೊಂಡು ಸಿನಿಮಾ ನಿರ್ಮಾಣ ಮಾಡಲು ಮುಂದಾಗುತ್ತಾರೆ.ಅದರಿಂದ ಬರುವ ಆದಾಯದಲ್ಲಿ ಚಾನೆಲ್ ಆರಂಭಿಸಬೇಕು ಎನ್ನುವ ಉದ್ದೇಶ ಅವರದು. ಸಂಪೂರ್ಣ ಮನರಂಜಾನಾತ್ಮಕವಾಗಿ ಚಿತ್ರವನ್ನು ಚಿತ್ರೀಕರಣ ಮಾಡಲಾಗಿದೆ.ಚಿತ್ರದಲ್ಲಿ ಎಲ್ಲಿಯೂ ಅಶ್ಲೀಲ ಅಸಭ್ಯ ಸಂಭಾಷಣೆ ಇಲ್ಲ ಚಿತ್ರ ನೋಡಿದ ಎಲ್ಲರೂ ಇಷ್ಟಪಡ್ತಾರೆ. ಸಿನಿಮಾ ಮಾಡ್ತಾರೆ ಇಲ್ಲವೆ ಎನ್ನುವುದು ಕುತೂಹಲ ಎಂದರು.
ಚಿತ್ರದಲ್ಲಿ ಹಿರಿಯ ಕಲಾವಿದ ದಂಡೇ ಚಿತ್ರದಲ್ಲಿದೆ. ಇತ್ತೀಚೆಗೆ ಹಿರಿಯ ಕಲಾವಿದರಿಗೆ ಅವಕಾಶ ಸಿಗುತ್ತಿಲ್ಲ. ಅವರಿಗೆ ಅವಕಾಶ ಮಾಡಿಕೊಡುವುದು ನಮ್ಮ ಉದ್ದೇಶವಾಗಿತ್ತು. ಹೀಗಾಗಿ ಚಿತ್ರ ಮಾಡಿದ್ದೇವೆ. ಚಿತ್ರದಲ್ಲಿ ಕಥೆಯೇ ನಾಯಕ. ಚಿತ್ರಮಂದಿರಕ್ಕೆ ಬಂದವರು ಖುಷಿ ಪಡ್ತಾರೆ. ಚಿತ್ರ ನೋಡಿ ಚಿತ್ರದ ಬಗ್ಗೆ ಪ್ರೇಕ್ಷಕರು ಏನು ಬೇಕಾದರೂ ಅಭಿಪ್ರಾಯ ಹೇಳಲಿ ಅದನ್ನು ಸ್ವೀಕರಿಸಲು ಸಿದ್ದ ಆದರೆ ಚಿತ್ರಮಂದಿರಕ್ಕೆ ಬರದೇ ಇರುವುದು ಸರಿಯಲ್ಲ ಎಂದರು.
ಚಿತ್ರದಲ್ಲಿ ಬರುವ ಲಾಭಾಂಶದಲ್ಲಿ ಶೇಕಡಾ 25 ರಷ್ಟನ್ನು ಅಶಕ್ತ ಕಲಾವಿದರಿಗೆ ಹಂಚುವ ಉದ್ದೇಶ ನಮ್ಮದು ಹೀಗಾಗಿ ಜನರು ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡಿ ಎಂದು ಮನವಿ ಮಾಡಿಕೊಂಡರು
ಹಿರಿಯ ಕಲಾವಿದ ಎಂ.ಎಸ್ ಉಮೇಶ್ ಮಾತನಾಡಿ ಚಿತ್ರದಲ್ಲಿ ವಿಭಿನ್ನ ಪಾತ್ರ ಮಾಡಿದ್ದೇನೆ. ಹೆಣ್ಣು ಮಕ್ಕಳನ್ನು ಕಂಡರೆ ಒಂದು ರೀತಿ ಚೂಲು ಇರುವ ವ್ಯಕ್ತಿಯ ಪಾತ್ರ. ಚಿತ್ರೀಕರಣದ ಸಮಯದಲ್ಲಿ ಇಡೀ ಚಿತ್ರತಂಡ ಚೆನ್ನಾಗಿ ನಡೆಸಿಕೊಂಡಿತು ಎಂದರು.
ಇನ್ನೂ ಚಿತ್ರದಲ್ಲಿ ಅಣ್ಣಾವ್ರ ನಟಿಸಿದ ನೀ ಬಂದು ನಿಂತಾಗ ಗೀತೆಗೆ ನಟಿ ಸಂಜನಾ ಗಲ್ರಾಣಿ ಜೊತೆ ಹೆಜ್ಜೆ ಹಾಕಿದ್ದೇನೆ. ಇದು ಮರೆಯಲಾರದ ಅನುಭವ. ನಾವು ಏನೇ ಮಾಡಿದರೂ ಅಣ್ಣಾವ್ರ ಕಾಲಿನ ಧೂಳಿಗೆ ಸಮ ಇಲ್ಲ ಎಂದರು
ಹಿರಿಯ ಕಲಾವಿದ ಕೋಟೆ ಪ್ರಭಾಕರ್ ಮಾತನಾಡಿ ಚಿತ್ರ ನೋಡಿದ್ದೇನೆ. ಚೆನ್ನಾಗಿ ಮೂಡಿ ಬಂದಿದೆ. ಕೆಲವು ಸಣ್ಣ ಪುಟ್ಟ ಕರೆಕ್ಷನ್ ಹೇಳಿದ್ದೇನೆ. ಮತ್ತೆ ಮತ್ತೆ ಚಿತ್ರ ಮಾಡುವ ಆಸೆ ಇದೆ ಎಂದರು.

ಚಿತ್ರದಲ್ಲಿ ಕಾಣಿಸಿಕೊಂಡಿರುವ ಸ್ವಾತಿ ನಾಯಕ್, ಮಾತನಾಡಿ ಮೊದಲ ಬಾರಿ ಸಿನಿಮಾದಲ್ಲಿ ನಟಿಸಿದ್ದೇನೆ. ನಿರ್ದೇಶಕ ಅರುಣ್ ಅವರು ಹೇಳಿದಂತೆ ಮಾಡಿದ್ದೇನೆ. ವಿಭಿನ್ನವಾದ ಚಿತ್ರ ಎಂದರು.
ಸಂಗೀತ ನಿರ್ದೇಶಕ ಇಮ್ತಿಯಾಜ್ ಸುಲ್ತಾನ್, ಆರ್ ಜೆ ವಿಕ್ಕಿ, ಸೇರಿ ಇಡೀ ಚಿತ್ರತಂಡ ಮಾಹಿತಿ ಹಂಚಿಕೊಂಡಿತು