ondu sarala premakate" Completed 25 Days: Joy on the Faces of the Film Team

25 ದಿನ ಪೂರೈಸಿದ “ಒಂದು ಸರಳ ಪ್ರೇಮ ಕಥೆ: ಚಿತ್ರತಂಡದ ಮುಖದಲ್ಲಿ ಹರ್ಷ - CineNewsKannada.com

25 ದಿನ ಪೂರೈಸಿದ “ಒಂದು ಸರಳ ಪ್ರೇಮ ಕಥೆ: ಚಿತ್ರತಂಡದ ಮುಖದಲ್ಲಿ ಹರ್ಷ

ಸಿಂಪಲ್ ಸುನಿ ಹಾಗೂ ವಿನಯ್ ರಾಜ್ ಕುಮಾರ್ ಜೋಡಿ “ಒಂದು ಸರಳ ಪ್ರೇಮಕಥೆ” ಸಿನಿಮಾ ಯಶಸ್ವಿಯಾಗಿ 25 ದಿನ ಪೂರೈಸಿದೆ. ಫೆಬ್ರವರಿ 8ರಂದು ತೆರೆಗೆ ಬಂದ ಚಿತ್ರ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಪಡೆದುಕೊಂಡಿದೆ.

ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ ಸಕ್ಸಸ್ ಒಂದ್ ಒಂದು ಟೈಮ್ ನಲ್ಲಿ ಒಂಥರ ಡಿಫೈನ್ ಆಗುತ್ತದೆ. ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಸಕ್ಸಸ್ ಮಾಡಿದಾಗ ಅದು 75 ದಿನಕ್ಕೆ ಮಾಡಿದ್ದೆ. ಟಿವಿ ರೈಟ್ಸ್ ಜೊತೆ ಒಂದು ಕಾರ್ಯಕ್ರಮ ಕೊಡ್ತೀವಿ ಎಂದು ಕಮಿಟ್ ಆಗಿದ್ದೇವು.

ಹೀಗಾಗಿ 75 ದಿನಕ್ಕೆ ಸಕ್ಸಸ್ ಸೆಲೆಬ್ರೆಟ್ ಮಾಡಿದೆವು. ಇವತ್ತಿಗೆ ಸಕ್ಸಸ್ ಅಂದರೆ ಯಾವುದರು ಟಿವಿ ಚಾನೆಲ್ ಕರೆದು ಮಾತನಾಡಿಸಿದರೆ. ಜನ ನೋಡಕ್ಕೆ ಇಷ್ಟು ಬಂದಿದ್ದಾರೆ ಅನ್ನೋದೇ ಸಕ್ಸಸ್. ರಿರ್ಟನ್ಸ್ ಆಗಿದೆ. ಖುಷಿ ಇದೆ. ಕನ್ನಡದ ಜೊತೆ ಉಳಿದ ನಾಲ್ಕು ಭಾಷೆಗೆ ಒಂದು ಸರಳ ಪ್ರೇಮ ಕಥೆ ಸಿನಿಮಾ ಕ್ಲಿಯರ್ ಕಟ್ ಆಗಿ ಡಬ್ ಆಗಿದೆ. ಆಯಾ ಭಾಷೆಯಲ್ಲಿ ಆಯಾ ಟೈಟಲ್ನಲ್ಲೇ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ ಎಂದರು.

ನಟ ವಿನಯ್ ರಾಜ್ ಕುಮಾರ್ ಮಾತನಾಡಿ, ತುಂಬಾ ಖುಷಿಯಾಗುತ್ತಿದೆ. 25 ದಿನ ನಮ್ಮ ಸಿನಿಮಾ ಕಂಪ್ಲೀಟ್ ಆಗಿದೆ. ಫ್ಯಾಮಿಲಿ ಎಂಟರ್ ಟೈನರ್. ಕ್ಲೀನ್ ಕಾಮಿಡಿ, ಇಡೀ ಫ್ಯಾಮಿಲಿ ಕುಳಿತುಕೊಂಡು ನೋಡುವ ಚಿತ್ರ. ಜನರಿಂದ ತುಂಬಾ ಒಳ್ಳೆ ಪ್ರತಿಕ್ರಿಯೆ ಬಂದಿದೆ. ಜನರು ನನ್ನ , ಸಿನಿಮಾ , ನಿರ್ದೇಶಕ, ಮ್ಯೂಸಿಕ್ ಹಾಗೂ ಟೆಕ್ನಿಷಿಯನ್ಸ್ ಮೆಚ್ಚಿಕೊಂಡಿದ್ದಾರೆ. ಇಡೀ ಫ್ಯಾಮಿಲಿ ಚಿತ್ರವನ್ನು ಎಂಜಾಯ್ ಮಾಡಿರುವುದು ದೊಡ್ಡ ಸಕ್ಸಸ್ ಎಂದರು.

ಸಂಗೀತ ನಿರ್ದೇಶಕ ವೀರ್ ಸಮರ್ಥ್ ಮಾತನಾಡಿ, 15 ವರ್ಷದ ಕೆರಿಯರ್ ನಲ್ಲಿ ಹಿಟ್ ಸಿನಿಮಾ ನೋಡುತ್ತಿದ್ದೇನೆ. ಹಾಡುಗಳನ್ನು ತುಂಬಾ ಜನ ಮೆಚ್ಚುಕೊಂಡಿದ್ದಾರೆ. ಈ ಚಿತ್ರ ಮಾಡುವಾಗ ಇಷ್ಟು ದೊಡ್ಟಮಟ್ಟದ ಪ್ರತಿಕ್ರಿಯೆ ಸಿಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ನನಗೆ ಎಲ್ಲಾ ಕಡೆಯಿಂದ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ ಎಂದು ಭಾವುಕರಾದರು.

ಸುನಿ ಅವರ ನಿರೂಪಣೆ ಶೈಲಿ, ಕಾಮಿಡಿ ಟೈಮ್, ಎಮೋಷನ್, ನಾಯಕ ವಿನಯ್, ನಾಯಕಿಯರಾದ ಸ್ವಾತಿಷ್ಠಾ, ಮಲ್ಲಿಕಾ ಅಮೋಘ ಅಭಿನಯ, ವೀರ್ ಸಮರ್ಥ್ ಅವರ ಟ್ಯೂನ್ ಸಿನಿರಸಿಕರು ಸಖತ್ ಇಷ್ಟಪಟ್ಟಿದ್ದಾರೆ. ರಾಘವೇಂದ್ರ ರಾಜ್ಕುಮಾರ್ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

ಹಿರಿಯ ಕಲಾವಿದೆ ಅರುಣಾ ಬಾಲರಾಜ್ ಮಾತನಾಡಿ ಚಿತ್ರ ನೂರು ದಿನ ಓಡಲಿ ಎಂದು ಶುಭಹಾರೈಸಿದರು

ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಮುಂತಾದ ತಾರಾಬಳಗ ಚಿತ್ರದಲ್ಲಿದೆ. ಆದಿ ಅವರ ಸಂಕಲನವಿದ್ದು, ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ಹಾಗೂ ಕಾರ್ತಿಕ್ ಅವರ ಕ್ಯಾಮರಾ ಶ್ರಮವಿದೆ.

‘ಒಂದು ಸರಳ ಪ್ರೇಮಕಥೆ’ ವಿನಯ್ ರಾಜ್ಕುಮಾರ್ಗೆ ಬ್ರೇಕ್ ಕೊಟ್ಟಿದೆ. ಸಿಂಪಲ್ ಸುನಿ ಮತ್ತೊಂದು ಪ್ರೇಮಕಥೆಯನ್ನು ಪ್ರೇಕ್ಷಕರಿಗೆ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ತಿಳಿ ಹಾಸ್ಯ, ಒನ್ ಲೈನರ್ ಡೈಲಾಗ್ಗಳು ಪ್ರೇಕ್ಷಕರಿಗೆ ಸಖತ್ ಮಜಾ ಕೊಡುತ್ತಿವೆ. ಇಂತಹ ಸುಂದರ ಪ್ರೇಮಕಥೆಗೆ ಶಕ್ತಿಯಾಗಿ ನಿಂತ ನಿರ್ಮಾಪಕ ಮೈಸೂರು ರಮೇಶ್ ಅವರನ್ನು ಜನ ಜೈ ಎಂದಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin