” ಅಪ್ಪ ಐ ಲವ್ ಯೂ ” ಚಿತ್ರಕ್ಕೆ ಸೆನ್ಸಾರ್ ಮಂಡಳಿಯ ಪ್ರಶಂಸೆ : “ಯು” ಪ್ರಮಾಣ ಪತ್ರ
ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಬರುತ್ತಿರುವ ಚಿತ್ರಗಳ ಕಥಾವಸ್ತು, ಬಳಸಿದ ಸಂಭಾಷಣೆ, ಸನ್ನಿವೇಶಗಳ ಬಗ್ಹೆ ಸೆನ್ಸಾರ್ ಮಂಡಳಿ ತಮಗೆ ಸರಿ ಕಾಣಲಿಲ್ಲ ಎಂದರೆ ಆಕ್ಷೇಪ ವ್ಯಕ್ತಪಡಿಸುವುದು ಅಥವಾ ಆ ಸನ್ನಿವೇಶಕ್ಕೆ ಕತ್ತರಿ ಹಾಕಿ ಎನ್ನುವುದು ಇಲ್ಲ ಸಂಭಾಷಣೆ ಮ್ಯೂಟ್ ಮಾಡಿ ಎನ್ನುವುದು ಸಾಮಾನ್ಯ. ಅಲ್ಲೊಂದು ಇಲ್ಲೊಂದು ಚಿತ್ರಗಳಿಗೆ ಮಾತ್ರ ಸೆನ್ಸಾರ್ ಮಂಡಳಿ ಅಧಿಕಾರಿಗಳು ಮತ್ತು ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸುವುದು ಅಪರೂಪ. ಅಂತಹ ಚಿತ್ರಗಳ ಪೈಕಿ ” ಅಪ್ಪ ಐ ಲವ್ ಯೂ ” ಚಿತ್ರವೂ ಒಂದು.
ಚಿತ್ರದ ಕಥಾವಸ್ತು, ಚಿತ್ರ ಮೂಡಿ ಬಂದಿರುವ ಪರಿ, ಕಲಾವಿದರ ಪ್ರಯತ್ನ, ನಿರ್ದೇಶಕರ ಹೊಸ ರೀತಿಯ ಚಿಂತನೆ ಮತ್ತು ಆಲೋಚನೆಯನ್ನು ಮೆಚ್ಚಿಕೊಂಡ ಸೆನ್ಸಾರ್ ಮಂಡಳಿ ಯಾವುದೇ ಕತ್ತರಿ ಪ್ರಯೋಗಕ್ಕೆ ಸೂಚಿಸದೆ ” ಅಪ್ಪ ಐ ಲವ್ ಯೂ ” ಚಿತ್ರವನ್ನು ಬಹುವಾಗಿ ಮೆಚ್ಚಿಕೊಂಡು ” ಯು” ಪ್ರಮಾಣ ಪತ್ರ ನೀಡಿದೆ.
ನಿರ್ದೇಶಕ ಅಥರ್ವ ಆರ್ಯ ಮತ್ತು ಕೆಆರ್ ಎಸ್ ನಿರ್ಮಾಣ ಸಂಸ್ಥೆ ಮತ್ತು ಕಲಾವಿದರು ಮತ್ತು ಇಡೀ ಚಿತ್ರತಂಡಕ್ಕೆ ಚಿತ್ರ ಮೂಡಿ ಬಂದಿರುವ ಪರಿ , ಮತ್ತು ಚಿತ್ರದ ಬಗ್ಗೆ ನಿರೀಕ್ಷೆ ದುಪ್ಪಟ್ಟಾಗುವಂತೆ ಮಾಡಿದೆ
ಯಾವಾಗ ಬಿಡುಗಡೆ:
ಅಪ್ಪ ಐಲವ್ ಯೂ ಚಿತ್ರ ಮೂಡಿ ಬಂದಿರುವ ಪರಿಗೆ ಇಡೀ ಚಿತ್ರ ತಂಡ ಖುಷಿಯಲ್ಲಿದೆ. ಇದೇ ಸಂತಸದಲ್ಲಿ ಏಪ್ರಿಲ್ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರಲು ಸಿದ್ದತೆ ಮಾಡಿಕೊಳ್ಳುತ್ತಿದೆ. ಚಿತ್ರತಂಡ. ಸೂಕ್ತ ಸಮಯ ನೋಡಿಕೊಂಡು ಚಿತ್ರವನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ಎಲ್ಲಾ ಪ್ರಯತ್ನ ಸಾಗಿದೆ.
ಸದಭಿರುಚಿಯ ವಿಷಯಗಳು ಮತ್ತು ಕಂಟೆಂಟ್ ಉಳ್ಳ ಚಿತ್ರಗಳು ತೀರಾ ಅಪರೂಪ ಎನ್ನುತ್ತಿರುವಾಗ “ ಅಪ್ಪ ಐ ಲವ್ ಯೂ” ಚಿತ್ರ ವಿವಿಧ ಕಾರಣಗಳಿಂದ ಗಮನ ಸೆಳೆಯುತ್ತಿದೆ. ಸಅಥರ್ವ ಆರ್ಯ ನಿರ್ದೇಶನದ ಚಿತ್ರ ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ಚಿತ್ರ ತೆರೆಗೆ ಬರಲಿದ್ದು ಚಿತ್ರದ ಬಗ್ಗೆ ಒಂದಷ್ಟು ನಿರೀಕ್ಷೆ ಗರಿಗೆದರುವಂತೆ ಮಾಡಿದೆ.
ಕಥಾ ವಸ್ತು ಏನು;
ತಂದೆಯ ಮಹತ್ವ ಸಾರುವ ಕಥೆ ಮುಂದಿಟ್ಟುಕೊಂಡು ನಿರ್ದೇಶಕ ಅಥರ್ವ ಆರ್ಯ “ ಅಪ್ಪ ಐ ಲವ್ ಯೂ” ಚಿತ್ರವನ್ನು ಪ್ರೇಕ್ಷಕರ ಮುಂದೆ ಇಡಲು ಸಜ್ಜಾಗಿದ್ದಾರೆ.
ತಂದೆಯ ಮೌಲ್ಯ ಮತ್ತು ಮಹತ್ವ ಸಾರುವ ಕಥೆ ಇತ್ತೀಚಿನ ದಿನಗಳಲ್ಲಿ ಪ್ರಸ್ತುವಾಗಿದ್ದು ಇದೇ ಕಾರಣಕ್ಕೆ ಇಡೀ ಚಿತ್ರತಂಡವನ್ನು ಮುಕ್ತಕಂಠದಿಂದ ಸೆನ್ಸಾರ್ ಮಂಡಳಿ ಪ್ರಶಂಸಿಸಿದೆ. ತಂದೆಯ ಪಾತ್ರದಲ್ಲಿ ಹಿರಿಯ ಕಲಾವಿದ ತಬಲನಾಣಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಕೌಟಂಬಿಕ ಕಥಾ ಹಂದರ ಒಳಗೊಂಡಿರುವ ಚಿತ್ರ ಪ್ರೇಕ್ಷಕರಿಗೆ ತಂದೆಯ ಮಹತ್ವವನ್ನು ಸಾರಿ ಹೇಳಲು ತೆರೆಗೆ ಬರಲು ಸಜ್ಜಾಗಿದೆ
ಯಾರೆಲ್ಲಾ ಕಲಾವಿದರು ನಟನೆ
“ಅಪ್ಪ ಐ ಲವ್ ಯೂ” ಚಿತ್ರದಲ್ಲಿ ಹಿರಿ ಕಿರಿಯ ಕಲಾವಿದರ ದಂಡು ಚಿತ್ರದಲ್ಲಿದೆ. ನೆನಪಿರಲಿ ಪ್ರೇಮ್, ಮಾನ್ವಿತಾ ಕಾಮತ್, ತಬಲನಾಣಿ,ಸಂಜಯ್ . ಜೀವಿತಾ ವಸಿಷ್ಠ, ಬಲರಾಜವಾಡಿ, ಅರವಿಂದ ರಾವ್,ಅರುಣಾ ಬಾಲರಾಜ್, ವಿಜಯ್ ಚೆಂಡೂರ್. ಗಿರೀಶ್ ಜತ್ತಿ ಸೇರಿದಂತೆ ಪ್ರಮುಖ ತಾರಾಗಣ ಚಿತ್ರದಲ್ಲಿದ್ದಾರೆ.
ಚಿತ್ರ ಮೂಡಿ ಬಂದಿರುವ ಪರಿಗೆ ಗಾಂಧಿನಗರದಲ್ಲಿ ಚಿತ್ರದ ಬಗ್ಗೆ ಬಿಡುಗಡೆಗೆ ಮುನ್ನವೇ ಒಂದಷ್ಟು ಸಕರಾತ್ಮಕ ಮಾತುಗಳು ಕೇಳಿಬಂದಿದೆ. ಇದು ಚಿತ್ರತಂಡಕ್ಕೆ ಆನೆ ಬಲ ಬಂದಂತಾಗಿದೆ. ಇದು ನಿರ್ದೇಶಕ ಅಥರ್ವ ಆರ್ಯ ಮತ್ತವರ ತಂಡದಲ್ಲಿ ಸಂತಸಕ್ಕೆ ಕಾರಣವಾಗಿದೆ.
ಮರಳಿ ಬಂದ ಮಾನ್ವಿತಾ
ವಿವಿಧ ಕಾರಣಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದ ಕನ್ನಡದ ಪ್ರತಿಭಾನ್ವಿತ ನಟಿ ಮಾನ್ವಿತಾ ಕಾಮತ್, ಅಪ್ಪ ಐ ಲವ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಬರಲು ಒಳ್ಳೆಯ ವೇದಿಕೆ ಎಂದು ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ.
ಹಿರಿ ಕಿರಿಯ ಮತ್ತು ಸ್ನೇಹಮಯಿ ಗುಣಗಳನ್ನು ಹೊಂದಿರುವ ನಟ ನೆನಪಿರಲಿ ಪ್ರೇಮ್, ತಬಲನಾಣಿ ಸೇರಿದಂತೆ ಹಲವು ಕಲಾವಿದರು ನಟಿಸಿರುವುದು ಚಿತ್ರಕ್ಕೆ ಆನೆ ಬಲಬಂದಿದೆ
ಎಲ್ಲೆಲ್ಲಿ ಚಿತ್ರೀಕರಣ
“ಅಪ್ಪ ಐ ಲವ್ ಯೂ ” ಚಿತ್ರವನ್ನು ಬೆಂಗಳೂರು ಮತ್ತು ಮೈಸೂರು ಸುತ್ತಮುತ್ತ 60 ದಿನಗಳಲ್ಲಿ ಚಿತ್ರೀಕರಣ ಮಾಡಿದ್ದಾರೆ. ಕೆಆರ್ ಎಸ್ ಪೆÇÀಡಕ್ಷನ್ ನಿರ್ಮಾಣದಲ್ಲಿ ಚಿತ್ರ ಮೂಡಿ ಬಂದಿದೆ