ಪ್ರಿಯಾಂಕ ಉಪೇಂದ್ರ ಹೊಸ ಪ್ರಜಯೇ ಪ್ರಭು
ಚಂದನವನದ ಬ್ಯುಸಿ ನಟಿಯರಲ್ಲಿ ಒಬ್ಬರಾದ ಪ್ರಿಯಾಂಕಉಪೇಂದ್ರ ’ಪಿ ಪಿ’ ಎನ್ನುವ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಎರಡೂವರೆ ದಶಕಕ್ಕೂ ಹೆಚ್ಚು ಕಾಲ ಸುಮಾರು ಚಿತ್ರಗಳಿಗೆ ನೃತ್ಯ ಸಹಾಯಕ, ನೃತ್ಯ ಸಂಯೋಜಕ ಮತ್ತು ಕಲಾವಿದನಾಗಿ ಸೇವೆ ಸಲ್ಲಿಸಿರುವ ಸಾಯಿಲಕ್ಷಣ್ ಪ್ರಥಮ ಅನುಭವ ಎನ್ನುವಂತೆ ಸಿನಿಮಾಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇವರ ಶ್ರಮಕ್ಕೆ ಸೌಭಾಗ್ಯ ಸಿನಿಮಾಸ್ ಅಡಿಯಲ್ಲಿ ಮೂವರು ಉದ್ಯಮಿ ಗೆಳೆಯರು ಸೇರಿಕೊಂಡು ಬಂಡವಾಳ ಹೂಡುತ್ತಿದ್ದಾರೆ.
ರಾಜಕೀಯ ಹಿನ್ನಲೆಯುಳ್ಳ ಮಹಿಳಾ ಪ್ರಧಾನ ಕಥೆಯನ್ನು ಹೊಂದಿದ್ದು, ’ಪ್ರಜೆಯೇ ಪ್ರಭುಗಳು’ ಎಂಬ ಅಡಿಬರಹ ಇರಲಿದೆ. ಭಾರತವನ್ನು ಅಭಿವೃದ್ದಿ ಪಥಕ್ಕೆ ತೆಗೆದುಕೊಂಡು ಹೋಗಬೇಕೆನ್ನುವ ಪ್ರಿಯಾಂಕಉಪೇಂದ್ರ ಮಾನವ ಜೀವ ಒಂದೇ ಅಲ್ಲ, ಸರ್ವ ಜೀವಿಗಳು ಸುಖವಾಗಿರಲು ಎಂದೇ ಇವಳ ಅಭಿಲಾಷೆಯಾಗಿರುತ್ತದೆ. ಇದಕ್ಕೋಸ್ಕರ ತನ್ನ ಜೀವವನ್ನೆ ತ್ಯಾಗ ಮಾಡಿ, ಜನ ಸೇವೆ ಜನಾರ್ಧನ ಸೇವೆ ಅಂದು ಕೊಂಡಿರುತ್ತಾಳೆ. ಜನರ ಜೊತೆ ಬೆರೆತು ಆಶ್ವಾಸನೆ ಕೊಟ್ಟಂತೆ, ವಿಶ್ವಾಸ ಸೇವೆ ಮಾಡಿ ಎಂದು ಹೇಳಲು ಬರುತ್ತಿದ್ದಾಳೆ. ತನ್ನ ಹಿತಕ್ಕಾಗಿ ಅಲ್ಲ, ಸರ್ವ ಜನರ ಸುಖಕ್ಕಾಗಿ ಎಂದು ಕೊಂಡು, ಹಣ ಮುಖ್ಯವಲ್ಲ, ಯಾವಾಗಲೂ ಸಕರಾತ್ಮಕ ಯೋಚನೆಗಳನ್ನು ಮಾಡುತ್ತಿರುತ್ತಾಳೆ. ಹಾಗೆಯೇ ಜನರು ನಿಸ್ವಾರ್ಥದಿಂದ ಉನ್ನತ ಹುದ್ದೆಗೆ ಜನಪ್ರತಿನಿಧಿಯನ್ನು ಆಯ್ಕೆ ಮಾಡುತ್ತಾರೆ. ಅವರು ಅದರ ಪರಿಮಿತಿಯಲ್ಲಿ ಸ್ಥಾರ್ಥವನ್ನು ಬಯಸದೆ ಕೆಲಸ ಮಾಡಬೇಕು. ಆಸೆಗಳಿಗೆ ಬಲಿಯಾಗಬಾರದು. ಹೀಗಿದ್ದರೇನೆ ಸೇವೆ ಮಾಡಲು ಅನುಕೂಲವಾಗುತ್ತದೆ ಎಂದು ಹೇಳಲು ಹೊರಟಿದೆ ಚಿತ್ರತಂಡ.
ಮತ್ತೋಂದು ಮುಖ್ಯ ಪಾತ್ರದಲ್ಲಿ ರವಿಶಂಕರ್, ಉಳಿದಂತೆ ರವಿಕಾಳೆ, ರಾಹುಲ್‌ದೇವ್, ಗಿರಿಜಾಲೋಕೇಶ್, ಯಶ್‌ಶೆಟ್ಟಿ, ಚೆಲುವರಾಜು ಹಾಗೂ ದೊಡ್ಡ ದೊಡ್ಡ ತಾರಬಳಗವೇ ಇರಲಿದ್ದು, ವಾಹಿನಿಯ ಡ್ರಾಮಾ ಕಲಾವಿದರು ನಟಿಸಲಿದ್ದಾರೆ. ಡಾ.ವಿ.ನಾಗೇಂದ್ರಪ್ರಸಾದ್ ಸಾಹಿತ್ಯಕ್ಕೆ ಕೆ.ಎಂ.ಇಂದ್ರ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ಮತ್ತು ಸಂಕಲನ ಋಷಿಕೇಶ್, ಸಾಹಸ ರಂಜಿತ್ ಅವರದಾಗಿದೆ. ಸಂಭಾಷಣೆಗಳು ಉತ್ತರಕರ್ನಾಟಕ ಭಾಷೆಯ ಶೈಲಿಯಲ್ಲಿರುವುದರಿಂದ ಅಲ್ಲಿನ ಸ್ಥಳಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲು ಇನ್ನು ಮುಂತಾದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ರೂಪಿಸಲಾಗಿದೆ. ಜನವರಿ ಕೊನೆವಾರದಂದು ಸಿನಿಮಾಕ್ಕೆ ಚಾಲನೆ ಸಿಗಲಿದೆ.