Puneeth Rajkumar's Apta released the song of the film 'Ratna'

ಪುನೀತ್ ರಾಜ್‍ಕುಮಾರ್ ಆಪ್ತರಿಂದ ‘ರತ್ನ’ ಚಿತ್ರದ ಹಾಡು ಬಿಡುಗಡೆ - CineNewsKannada.com

ಪುನೀತ್ ರಾಜ್‍ಕುಮಾರ್ ಆಪ್ತರಿಂದ ‘ರತ್ನ’ ಚಿತ್ರದ ಹಾಡು ಬಿಡುಗಡೆ

ಬಸವರಾಜ್ ಬಳ್ಳಾರಿ ನಿರ್ಮಿಸಿ, ನಿರ್ದೇಶಿಸಿರುವ “ರತ್ನ” ಚಿತ್ರದ ಹಾಡುಗಳು ಆನಂದ್ ಆಡಿಯೋ ಮೂಲಕ ಇತ್ತೀಚಿಗೆ ಬಿಡುಗಡೆಯಾಯಿತು. ಚಿತ್ರದಲ್ಲಿ ಐದು ಹಾಡುಗಳಿದ್ದು, ಒಂದೊಂದು ಹಾಡನ್ನು ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಹಾಗೂ ಅವರ ಹತ್ತಿರದ ಒಡನಾಡಿಗಳು ಬಿಡುಗಡೆ ಮಾಡಿದ್ದು ವಿಶೇಷ.

“ಅಪ್ಪು” ವೆಂಕಟೇಶ್, ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರು, ಪುನೀತ್ ಅವರ ಅಂಗರಕ್ಷಕರಾಗಿದ್ದ ಚಲಪತಿ, ಹುಬ್ಳಳಿಯಿಂದ ಬಂದಿದ್ದ ರಘುಪತಿ ಹಾಗೂ ಮಾರುತಿ ಅವರು “ರತ್ನ” ಚಿತ್ರದ ಹಾಡುಗಳನ್ನು ಲೋಕಾರ್ಪಣೆ ಮಾಡಿದರು. “ರತ್ನ” ಕೂಡ ಅಪ್ಪು ಅಭಿಮಾನಿಯ ಕುರಿತಾದ ಚಿತ್ರವಾಗಿದೆ.

ಹಾಡುಗಳನ್ನು ಬಿಡುಗಡೆ ಮಾಡಿದ್ದ ಅಷ್ಟು ಜನ ಜನ ಅಭಿಮಾನಿಗಳು ಹಾಗೂ ಒಡನಾಡಿಗಳು ಪುನೀತ್ ರಾಜಕುಮಾರ್ ಅವರನ್ನು ನೆನೆದು ಭಾವುಕರಾದರು. ಪುನೀತ್ ರಾಜಕುಮಾರ್ ಅಭಿಮಾನಿಗಳು ಈ ಚಿತ್ರವನ್ನು ತಪ್ಪದೇ ನೋಡಿ ಎಂದರು.

ನಿರ್ದೇಶಕ ಹಾಗೂ ನಿರ್ಮಾಪಕ ಬಸವರಾಜ್ ಬಳ್ಳಾರಿ ಮಾತನಾಡಿ, ಪುನೀತ್ ರಾಜಕುಮಾರ್ ಅವರು ನನಗೆ ಮಾಡಿರುವ ಸಹಾಯ ಹಾಗೂ ಸಹಕಾರ ಅಷ್ಟಿಷ್ಟಲ್ಲ. ಅವರ ಒಳ್ಳೆಯ ಗುಣಗಳೇ, ನನಗೆ ಈ ಚಿತ್ರ ಮಾಡಲು ಸ್ಪೂರ್ತಿ. ನಾನು ಕೂಡ ಅವರ ಅಪ್ಪಟ್ಟ ಅಭಿಮಾನಿ. ಅಪ್ಪು ಅವರನ್ನು ಜನ ಎಷ್ಟು ಪ್ರೀತಿಸುತ್ತಾರೆ ಎನ್ನುವುದಕ್ಕೆ ಈ ಚಿತ್ರ ನೋಡಬೇಕು. ಏಕೆಂದರೆ ಇದು ಅಪ್ಪು ಅವರ ಅಭಿಮಾನಿಯ ಕುರಿತಾದ ಚಿತ್ರ. “ರತ್ನ” ಚಿತ್ರದ ಹಾಡುಗಳನ್ನು ಅಪ್ಪು ಅವರ ಅಭಿಮಾನಿಗಳು ಹಾಗೂ ಅವರ ಹತ್ತಿರದ ಒಡನಾಡಿಗಳಿಂದ ಬಿಡುಗಡೆ ಮಾಡಿಸುವ ಹಂಬಲವಿತ್ತು. ಸತೀಶ್ ಬಾಬು ಅವರು ಸಂಗೀತ ನೀಡಿರುವ ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿಕೊಟ್ಟ ಅಭಿಮಾನಿಗಳಿಗೆ ನನ್ನ ಧನ್ಯವಾದ. ಏಪ್ರಿಲ್ 19 ಚಿತ್ರ ಬಿಡುಗಡೆಯಾಗಲಿದೆ ನೋಡಿ ಪೆÇ್ರೀತ್ಸಾಹಿಸಿ ಎಂದರು.

ನಾಯಕ ವರ್ಧನ್ ಮಾತನಾಡಿ, ಅಭಿಮಾನಿ ಕಥೆ ರತ್ನ. ಚಿತ್ರ ನೋಡಿದ ಎಲ್ಲರಿಗೂ ಅದರಲ್ಲಿಯೂ ಅಭಿಮಾನಿಗಳು ಚಿತ್ರ ಮನಸ್ಸಿಗೆ ನಾಟುತ್ತದೆ. ವಿಭಿನ್ನ ಚಿತ್ರದಲ್ಲಿ ಭಾಗಿಯಾಗಿದ್ದುದು ಖುಷಿಕೊಟ್ಟಿದೆ ಎಂದು ಹೇಳಿದರು,

ಸಂಕಲನಕಾರ ಹಾಗೂ ನಟ ನಾಗೇಂದ್ರ ಅರಸ್, ನಟ ಅಮಿತ್ ರಾವ್, ವಿತರಕ ವಿಜಯ್ ಕುಮಾರ್ ಹಾಗೂ ಸಹ ನಿರ್ಮಾಪಕರಾದ ಮಂಜುನಾಥ್,ಕಲ್ಕೆರೆ ರಾಘವೇಂದ್ರ ಕರೂರ್ “ರತ್ನ” ಚಿತ್ರದ ಕುರಿತು ಮಾತನಾಡಿದರು.

ಹರ್ಷಲ ಹನಿ, ವರ್ಧನ್, ಆನಂದ್ ಅಪ್ಪು, ಬಾಲರಾಜ್ ಒಡೆಯರ್, ನಾಗೇಂದ್ರ ಅರಸ್, ಅಮಿತ್ ರಾವ್,ವಿಜಯ್ ಚಂಡೂರ್. ಮಹೇಶ್ ಬಾಬು.ಸಾರಿಕಮ್ಮ, ರಾಣಿ ಬಸವರಾಜ್, ಸುಚಿತ್ ಚೌವ್ಹಾಣ್, ರಾಮು ಕರೂರ್, ಮಂಜು ದೈವಜ್ಞ.ಜಗದೀಶ್ ಕೊಪ್ಪ ಮುಂತಾದವರು “ರತ್ನ” ಚಿತ್ರದ ತಾರಾಬಳಗದಲ್ಲಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin