‘ರೆಚೆಲ್’ ಚಿತ್ರದ ಟೀಸರ್ ಬಿಡುಗಡೆ; ಕನ್ನಡದಲ್ಲೂ ಚಿತ್ರ ಬಿಡುಗಡೆ
ಮಲಯಾಳಿ ನಟಿ ಹನಿ ರೋಸ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ರೆಚೆಲ್’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಮೂಲ ಮಲಯಾಳಂನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಕನ್ನಡದಲ್ಲೂ ಬಿಡುಗಡೆ ಆಗಲಿದೆ.
ಚಿತ್ರ ಹಿಂಸಾಚಾರ ಮತ್ತು ರಕ್ತಪಾತದ ಕಥೆಯಾಗಿರುತ್ತದೆ ಎಂದು ಟೀಸರ್ ಸುಳಿವು ನೀಡುತ್ತದೆ. ಎಬ್ರಿಡ್ ಶೈನ್ ಸಹ ನಿರ್ಮಾಣದ ಜತೆಗೆ ಮತ್ತು ಬರಹಗಾರರಾಗಿರುವ ಈ ಚಿತ್ರವನ್ನು ಆನಂದಿನಿ ಬಾಲಾ ನಿರ್ದೇಶಿಸಿದ್ದಾರೆ. ಹನಿ ರೋಸ್ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
ಚಿತ್ರದಲ್ಲಿ ಬಾಬು ರಾಜ್, ಕಲಾಭವನ್ ಶಾಜೋನ್, ರೋಷನ್ ಬಶೀರ್, ಚಂದು ಸಲೀಂಕುಮಾರ್, ರಾಧಿಕಾ ರಾಧಾಕೃಷ್ಣನ್, ಜಾಫರ್ ಇಡುಕ್ಕಿ, ವಿನೀತ್ ತಟ್ಟಿಲ್, ಜೋಜಿ, ದಿನೇಶ್ ಪ್ರಭಾಕರ್, ಪಾಲಿ ವಲ್ಸನ್, ವಂದಿತಾ ಮನೋಹರನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಈ ಚಿತ್ರವನ್ನು ಬಾದುಶಾ ಪೆÇ್ರಡಕ್ಷನ್ಸ್ ಬ್ಯಾನರ್‍ನಡಿಯಲ್ಲಿ ಬಾದುಶಾ ಎನ್‍ಎಂ, ರಾಜನ್ ಚಿರಾಯಿಲ್ ಮತ್ತು ಎಬ್ರಿಡ್ ಶೈನ್ ನಿರ್ಮಿಸಿದ್ದಾರೆ. ಕಥೆಯನ್ನು ರಾಹುಲ್ ಮನಪ್ಪಟ್ಟು ಬರೆದಿದ್ದು, ಚಿತ್ರಕಥೆಯನ್ನು ರಾಹುಲ್ ಮನಪ್ಪಟ್ಟು ಮತ್ತು ಎಬ್ರಿಡ್ ಶೈನ್ ಮಾಡಿದ್ದಾರೆ.
ಸಹ ನಿರ್ಮಾಪಕ ಹನ್ನನ್ ಮರಮುತ್ತಮ್, ಛಾಯಾಗ್ರಹಣ ಸ್ವರೂಪ್ ಫಿಲಿಪ್, ಸಂಗೀತ ಮತ್ತು ಬಿಜಿಎಂ ಇಶಾನ್ ಛಾಬ್ರಾ, ಸಂಕಲನ ಮನೋಜ್, ನಿರ್ಮಾಣ ವಿನ್ಯಾಸಕ ಸುಜಿತ್ ರಾಘವ್, ಧ್ವನಿ ಮಿಶ್ರಣ ರಾಜಕೃಷ್ಣನ್ ಎಂ ಆರ್, ಧ್ವನಿ ವಿನ್ಯಾಸ ಶ್ರೀ ಶಂಕರ್, ಕಾರ್ಯನಿರ್ವಾಹಕ ನಿರ್ಮಾಪಕರು ಮಂಜು ಬಾದುಷಾ, ಶೆಮಿ ಬಶೀರ್, ಶೈಮಾ ಮುಹಮ್ಮದ್ ಬಶೀರ್ ಅವರದ್ದು.