Ragini Prajwal starrer "Shanubhogar Magalu" will be releasing soon

ರಾಗಿಣಿ ಪ್ರಜ್ವಲ್ ನಟನೆ “ಶಾನುಭೋಗರ ಮಗಳು” ಶೀಘ್ರ ಬಿಡುಗಡೆ - CineNewsKannada.com

ರಾಗಿಣಿ ಪ್ರಜ್ವಲ್ ನಟನೆ “ಶಾನುಭೋಗರ ಮಗಳು” ಶೀಘ್ರ ಬಿಡುಗಡೆ

ಭಾಗ್ಯ ಕೃಷ್ಣಮೂರ್ತಿ ಕಾದಂಬರಿ ಆಧಾರಿತ “ಶಾನುಭೋಗರ ಮಗಳು” ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ “ಯು/ಎ” ಪ್ರಮಾಣ ಪತ್ರ ನೀಡಿದೆ. ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದೆ.

ಹಿರಿಯ ನಿರ್ದೇಶಕ ಕೋಡ್ಲು ರಾಮಕೃಷ್ಣ ನಿರ್ದೇಶಿಸಿರುವ ಚಿತ್ರದಲ್ಲಿ ನಟ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಪ್ರಜ್ವಲ್ “ಶಾನುಭೋಗರ ಮಗಳ” ಪಾತ್ರದಲ್ಲಿ ಅಭಿನಯಿಸಿದ್ದಾರೆ. ಬೆಂಗಳೂರು, ಶ್ರೀರಂಗಪಟ್ಟಣ, ಚನ್ನಪಟ್ಟಣ, ಚಿಕ್ಕಬಳ್ಳಾಪುರ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.

ಭುವನ್ ಫಿಲಂಸ್ ಲಾಂಛನದಲ್ಲಿ ಸಿ.ಎಂ.ನಾರಾಯಣ್ ನಿರ್ಮಿಸಿರುವ ಚಿತ್ರ ಹಲವು ವಿಶೇಷಗಳನ್ನೊಳಗೊಂಡಿದೆ. ಜೈ ಆನಂದ್ ಛಾಯಾಗ್ರಹಣವಿರುವ ಚಿತ್ರಕ್ಕೆ ಬಿ.ಎಸ್ ಕೆಂಪರಾಜ್ ಸಂಕಲನವಿದೆ. ವಸಂತ ಕುಲಕರ್ಣಿ ಕಲಾ ನಿರ್ದೇಶನ, ರಮೇಶ್ ಕೃಷ್ಣನ್ ಸಂಗೀತ, ಕರಣ್ ಮಯೂರ್ ನಿರ್ಮಾಣ ನಿರ್ವಹಣೆ ಹಾಗೂ ಎಸ್.ನಾಗರಾಜ್ ರಾವ್ (ಹಾಸ್ನ), ರಘು ಕಲ್ಪತರು ಸಹ ನಿರ್ದೇಶನವಿರುವ “ಶಾನುಭೋಗರ ಮಗಳು” ಚಿತ್ರಕ್ಕೆ ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ.

ರಾಗಿಣಿ ಪ್ರಜ್ವಲ್,ನಿರಂಜನ್ ಶೆಟ್ಟಿ, ರಮೇಶ್ ಭಟ್, ಶ್ರೀನಿವಾಸಮೂರ್ತಿ, ಸುಧಾ ಬೆಳವಾಡಿ, ವಾಣಿಶ್ರೀ, ಪದ್ಮಾ ವಾಸಂತಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಟಿಪ್ಪುಸುಲ್ತಾನ್ ಪಾತ್ರದಲ್ಲಿ ಖ್ಯಾತ ನಟ ಕಿಶೋರ್ ಅಭಿನಯಿಸಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin