Ashwini Puneeth Rajkumar, Srimurali “Appu” silver trophy unveiled for "Appu Cup Season 2".

“ಅಪ್ಪು ಕಪ್ ಸೀಸನ್ 2” ಗೆ ಅಶ್ವಿನಿ ಪುನೀತ್ ರಾಜಕುಮಾರ್, ಶ್ರೀಮುರಳಿ “ಅಪ್ಪು” ಬೆಳ್ಳಿ ಟ್ರೋಫಿ ಅನಾವರಣ - CineNewsKannada.com

“ಅಪ್ಪು ಕಪ್ ಸೀಸನ್ 2” ಗೆ ಅಶ್ವಿನಿ ಪುನೀತ್ ರಾಜಕುಮಾರ್, ಶ್ರೀಮುರಳಿ “ಅಪ್ಪು” ಬೆಳ್ಳಿ ಟ್ರೋಫಿ ಅನಾವರಣ

” ಅಪ್ಪು ಕಪ್ ಸೀಸನ್ 2″ ಶಟಲ್ ಬ್ಯಾಡ್ಮಿಂಟನ್ ಟೂರ್ನಿ , ಜುಲೈ 26, 27, 28 ಬೆಂಗಳೂರಿನಲ್ಲಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಉಪಸ್ಥಿತಿಯಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಶ್ವನಿ ಪುನೀತ್ ರಾಜ್‍ಕುಮಾರ್ ಹಾಗು ನಟ ಶ್ರೀಮುರುಳಿ ಅಪ್ಪು ಬೆಳ್ಳಿ ಟ್ರೋಫಿ ಅನಾವರಣ ಮಾಡಿದ್ದಾರೆ.

ಓರಾಯನ್ ಮಾಲ್‍ನ ಹೊರಾಂಗಣದಲ್ಲಿ ತಣ್ಣನೆ ಬೀಸುತ್ತಿದ್ದ ಗಾಳಿ. ಪಕ್ಕದಲ್ಲೊಂದು ಕೆರೆ. ಆ ಸುಂದರ ಪರಿಸರದಲ್ಲೊಂದು ವರ್ಣರಂಜಿತ ವೇದಿಕೆಯಲ್ಲಿ ಚೇತನ್ ಸೂರ್ಯ ಅವರ ಸಂಸ್ಥೆ, ಪಿಆರ್ ಕೆ ಆಡಿಯೋ ಸಂಸ್ಥೆಯ ಸಹಯೋಗದಲ್ಲಿ ಅಪ್ಪು ಕಪ್ ಆಯೋಜಿಲಾಗಿದೆ

ಸಾಯಿ ಗೋಲ್ಡ್ ಪ್ಯಾಲೆಸ್ ನ ಶರವಣ ನಿರ್ಮಿಸಿರುವ ಐದು ಕೆಜಿ ತೂಕದ ಅಪ್ಪು ಭಾವಚಿತ್ರವುಳ್ಳ ಬೆಳ್ಳಿ ಕಪ್ ಅಶ್ವಿನಿ ಪುನೀತ್ ರಾಜ್‍ಕುಮಾರ್ ಹಾಗೂ ಶ್ರೀಮುರಳಿ ಅವರಿಂದ ಅನಾವರಣವಾಯಿತು. ರಾಮನಗರ ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ಸಾ.ರಾ.ಗೋವಿಂದು ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಟ್ರೋಫಿ ಅನಾವರಣಗೊಳಿಸಿ ಮಾತನಾಡಿದ ಅಶ್ವಿನಿ ಪುನೀತ್ ರಾಜಕುಮಾರ್, ಶೆಟಲ್ ಆಟ, ಅಪ್ಪು ಅವರ ಮೆಚ್ಚಿನ ಆಟ. ಕಳೆದವರ್ಷದಿಂದ ಅಪ್ಪು ಕಪ್ ಟೂರ್ನಿಯನ್ನು ಚೇತನ್ ಅವರು ಚೆನ್ನಾಗಿ ಆಯೋಜಿಸಿಕೊಂಡು ಬರುತ್ತಿದ್ದಾರೆ. ಅವರಿಗೆ ಹಾಗೂ ಭಾಗವಹಿಸಿರುವ ಎಲ್ಲರಿಗೂ ಒಳ್ಳೆಯದಾಗಲಿ ಎಂದರು.

‘ಯಾವುದಾದರೂ ಆಟದ ನೆಪದಲ್ಲಿ ಕಲಾವಿದರನ್ನು ಒಟ್ಟಾಗಿ ಸೇರಿಸುವ ಆಸೆ ಅಪ್ಪು ಅವರಿಗಿತ್ತು. ಅದು ಹೊರದೇಶದಲ್ಲಿ ಅದನ್ನು ನಡೆಸಬೇಕೆಂಬುದು ಅವರ ಯೋಚನೆಯಾಗಿತ್ತು. ಸದಾ ಒಬ್ಬರಿಗೆ ಒಳೆಯದನ್ನೇ ಬಯಸುವ ಹೃದಯ ಅವರಿಗಿತ್ತು. ಅಂತಹ ಪುನೀತ್ ರಾಜಕುಮಾರ್ ಅವರ ನೆನಪಿನಲ್ಲಿ ನಡೆಯುತ್ತಿರುವ “ಅಪ್ಪು ಕಪ್ ಸೀಸನ್ 2” ಯಶಸ್ವಿಯಾಗಲಿ’ ಎಂದು ಶ್ರೀಮುರಳಿ ಹಾರೈಸಿದರು.

ಸಾಯಿ ಗೋಲ್ಡ್ ಪ್ಯಾಲೆಸ್ ನ ಶರವಣ ಮಾತನಾಡಿ, ‘ನಾಡು ಕಂಡ ಶ್ರೇಷ್ಠ ನಟ ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ನಡೆಯುತ್ತಿರುವ ಈ “ಅಪ್ಪು ಕಪ್” ಶೆಟಲ್ ಬ್ಯಾಡ್ಮಿಂಟನ್ ಟೂರ್ನಿಯ ಬಗ್ಗೆ ಚೇತನ್ ಸೂರ್ಯ ಅವರು ಹೇಳಿದಾಗ ಬಹಳ ಸಂತೋಷವಾಯಿತು. ನಾನು ಮೊದಲೇ ತಿಳಿಸಿದಂತೆ ಈ ಟೂರ್ನಿಯ ಮೊದಲ ವಿಜೇತರಿಗೆ ನೂರು ಗ್ರಾಮ್ ಬಂಗಾರ, ದ್ವಿತೀಯ ವಿಜೇತರಿಗೆ ಐವತ್ತು ಗ್ರಾಮ್ ಬಂಗಾರ ಹಾಗೂ ಮೂರನೇ ವಿಜೇತರಿಗೆ ಇಪ್ಪತ್ತೈದು ಗ್ರಾಮ್ ಬಂಗಾರವನ್ನು ಬಹುಮಾನ ನೀಡುವುದಾಗಿ ತಿಳಿಸಿದರು.

“ಅಪ್ಪು ಕಪ್” ನ ರುವಾರಿ ಚೇತನ್ ಸೂರ್ಯ ಮಾತನಾಡಿ ಕಳೆದ ವರ್ಷದಿಂದ ಆಯೋಜಿಸುತ್ತಿರುವ “ಅಪ್ಪು ಕಪ್” ಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಸಹಕಾರ ನೀಡಿರುವುದು ಬಹಳ ಖುಷಿಯಾಗಿದೆ. ಶ್ರೀಮುರಳಿ ಅವರು ಹೇಳಿದಂತೆ ಮುಂದಿನ ವರ್ಷ ಹೊರದೇಶದಲ್ಲಿ ಈ ಟೂರ್ನಿಯ ಸೆಮಿಫೈನಲ್ ಹಾಗೂ ಫೈನಲ್ ಆಯೋಜಿಸಲು ಪ್ರಯತ್ನ ಪಡುತ್ತೇನೆ. ಈ ಬಾರಿ ಟೂರ್ನಿಯಲ್ಲಿ ಹತ್ತು ತಂಡಗಳಿದೆ. ಹತ್ತು ತಂಡಗಳ ಮಾಲೀಕರಿಗೆ, ಸಾಯಿ ಗೋಲ್ಡ್ ಪ್ಯಾಲೆಸ್ ನ ಶರವಣ ಅವರಿಗೆ ಹಾಗೂ ಎಲ್ಲಾ ತಂಡಗಳ ಮಾಲೀಕರಿಗೆ, ಆಟಗಾರರಿಗೆ ಧನ್ಯವಾದ ತಿಳಿಸಿದರು.

ಇದೇ ಸಂದರ್ಭದಲ್ಲಿ ಹತ್ತು ತಂಡಗಳ ಲೋಗೊ, ಜರ್ಸಿ ಅನಾವರಣ ಮಾಡಿ, ತಂಡದ ಮಾಲೀಕರ ಹಾಗೂ ಆಟಗಾರರ ಪರಿಚಯ ಮಾಡಿಕೊಡಲಾಯಿತು. ಅಲೋಕ್, ಸಮರ್ಜಿತ್ ಲಂಕೇಶ್, ಐಶ್ವರ್ಯ ಸಿಂದೋಗಿ, ಅಭಿಲಾಶ್ ದಳಪತಿ, ಕಾವ್ಯ ಶಾ, ಶರತ್ ಕ್ಷತ್ರಿಯ, ದಿಲೀಪ್ ಕೆಂಪೇಗೌಡ, ಸಿರಿ ರಾಜು, ರಾಮ್ ಪವನ್, ಐಶಾನ, ಲಾವಣ್ಯ, ದೇವನ್, ರಾಘವ್ ನಾಗ್, ಸುನಾಮಿ ಕಿಟ್ಟಿ, ವಿಜಯ್ ಸಿದ್ದರಾಜ್, ವ್ಯಾಸರಾಜ ಸೋಸಲೆ, ಜ್ಯೋತಿ ವ್ಯಾಸರಾಜ್ ಸೇರಿದಂತೆ ಹೆಸರಾಂತ ಕಲಾವಿದರಿಂದ ಮನೋರಂಜನಾ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತು. “ಅಪ್ಪು ಕಪ್” ನಲ್ಲಿ ಆಡುತ್ತಿರುವ ತಂಡಗಳು ಹೀಗಿದೆ.

• ಅರಸು ಹಂಟರ್ಸ್- ಮಾಲೀಕರು ಆನಂದ್, . ನಾಯಕ – ಹರೀಶ್ ನಾಗರಾಜ್
• ಬಿಂದಾಸ್ ರಾಯಲ್ ಚಾಲೆಂಜರ್ಸ್- ಮಾಲೀಕರು ಪರಿತೋಷ್ ಮೂರ್ತಿ, ನಾಯಕ – ರವಿ ಚೇತನ್.
• ಪವರ್ ಪೈತಾನ್ಸ್ -ಮಾಲೀಕರು ಐಶ್ವರ್ಯ, ನಾಯಕ – ಸದಾಶಿವ ಶೆಣೈ.
• ದೊಡ್ಮನೆ ಡ್ರಾಗನ್ಸ್ – ಮಾಲೀಕರು ಮಹೇಶ್ ಗೌಡ, ನಾಯಕ – ಪ್ರಮೋದ್ ಶೆಟ್ಟಿ.
• ಜಾಕಿ ರೈಡರ್ಸ್- ಮಾಲೀಕರು ಶ್ರೀಹರ್ಷ, ನಾಯಕ ಮನು- ರವಿಚಂದ್ರನ್
• ರಾಜಕುಮಾರ ಕಿಂಗ್ಸ್- ಮಾಲೀಕರು ವಿ.ರವಿಕುಮಾರ್ ಮತ್ತು ಶಂಶುದ್ದೀನ್, ನಾಯಕ – ವಿಕ್ರಮ್ ರವಿಚಂದ್ರನ್
• ಗಂಧದಗುಡಿ ವಾರಿಯರ್ಸ್ -ಮಾಲೀಕರು ಡಾ.ಚೇತನ ಆರ್ ಎಸ್, ನಾಯಕ – ಭುವನ್ ಗೌಡ
• ವೀರ ಕನ್ನಡಿಗ ಬುಲ್ಸ್ -ಮಾಲೀಕರು ಮೋನೀಶ್ ಸಿ. ನಾಯಕ -ದಿಲೀಪ್ ರಾಜ್.
• ಯುವರತ್ನ ಚಾಂಪಿಯನ್ಸ್ – ಮಾಲೀಕರು ಬಿ.ಎಂ.ಶ್ರೀರಾಮ್ ಕೋಲಾರ್, ನಾಯಕ -ಪ್ರವೀಣ್ ತೇಜ್
• ಮೌರ್ಯ ವೈಟ್ ಗೋಲ್ಡ್- ಮಾಲೀಕರು ಬಾಬು ಸಿ.ಜೆ, ನಾಯಕ – ನಿರಂಜನ್ ದೇಶಪಾಂಡೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin