Raita song released from movie “Katera” in Mandya: fans cheer

ಮಂಡ್ಯದಲ್ಲಿ “ಕಾಟೇರ” ಚಿತ್ರದ ರೈತ ಗೀತೆ ಬಿಡುಗಡೆ: ಅಭಿಮಾನಿಗಳ ಹರ್ಷೋದ್ಗಾರ - CineNewsKannada.com

ಮಂಡ್ಯದಲ್ಲಿ “ಕಾಟೇರ” ಚಿತ್ರದ ರೈತ ಗೀತೆ ಬಿಡುಗಡೆ: ಅಭಿಮಾನಿಗಳ ಹರ್ಷೋದ್ಗಾರ

ಸಕ್ಕರೆ ನಾಡು ಮಂಡ್ಯದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಚಿತ ಚಿತ್ರ “ಕಾಟೇರ’ ಚಿತ್ರದ ರೈತಗೀತೆ ಬಿಡುಗಡೆಯಾಗಿದೆ. ಮಂಡ್ಯದ ಮಣ್ಣಿನ ಮಕ್ಕಳ ಸಮ್ಮುಖದಲ್ಲಿ ಸಂಸದೆ ಸುಮಲತಾ ಅಂಬರೀಷ್ ಹಾಡು ಬಿಡುಗಡೆ ಮಾಡುವ ಮೂಲಕ ಕಾಟೇರನಿಗೆ ಶುಭ ಹಾರೈಸುತ್ತಿದ್ದಂತೆ ಅಭಿಮಾನಿಗಳ ಸಂತಸ ಮುಗಿಲು ಮುಟ್ಟಿತ್ತು.

ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರವನ್ನು ತರುಣ್ ಸುಧೀರ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಅವಿನಾಶ್, ಶೃತಿ, ಬಿರಾದಾರ್,ಪದ್ಮಾ ವಾಸಂತಿ , ರವಿ ಚೇತನ್, ಕುಮಾರ್ ಗೋವಿಂದು ಸೇರಿದಂತೆ ಹಿರಿ ಕಿರಿಯ ಕಲಾವಿದರ ದೊಡ್ಡ ದಂಡೇ ಚಿತ್ರದಲ್ಲಿದ್ದಾರೆ. ಚಿತ್ರದ ಮೂಲಕ ಮಾಲಾಶ್ರೀ ಅವರ ಪುತ್ರಿ ಆರಾಧಾನ ನಾಯಕಿಯಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.

ಹಲವು ವಿಶೇಷತೆಗಳು ಇರುವ ಚಿತ್ರದಲ್ಲಿ ಸಂಭಾಷಣಾಕಾರ ಮಾಸ್ತಿ ಅವರು ಬರೆದಿರುವ ಮಣ್ಣಿನ ಮಕ್ಕಳ ಕುರಿತಾದ ಅರ್ಥಪೂರ್ಣ ಸಂಭಾಷಣೆ ಚಿತ್ರಕ್ಕೆ ಮತ್ತಷ್ಟು ತೂಕ ಹೆಚ್ಚಿಸಿದೆ.

ಈ ವೇಳೆ ಮಾತಿಗಿಳಿದ ನಟ ದರ್ಶನ್ “ ಚಿತ್ರರಂಗದಲ್ಲಿ ಅಲ್ಲ ಯಾರೇ ಏನೇ ಹೇಳಿದರೂ ನೋವು ಕೋಪ ಮಾಡಿಕೊಳ್ಳಲ್ಲ, ಬೇಜಾರು ಮಾಡಿಕೊಳ್ಳಲ್ಲ, ನೊಂದುಕೊಳ್ಳಲ್ಲ, ಸಿನಿಮಾ ಅಷ್ಟೇ ಮಾಡ್ತೀವಿ, ಯಾವ್ ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಾ ಇಲ್ಲ, ಅದು ಅಪ್ಪಟ ಕನ್ನಡ ಸಿನಿಮಾ ಮಾತ್ರ ಮಾಡೋದು ಎಂದರು

ಮಂಡ್ಯದಲ್ಲಿ ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆಯಾದ ಕಾಟೇರ ಚಿತ್ರದ ಹಾಡು ಬಿಡುಗಡೆಯಲ್ಲಿ ಲೂನಾದಲ್ಲಿ ಓಡಾಡುತ್ತಿದ್ದವನನ್ನು ಲಾಂಬೋರ್ಗಿಯನಿಲ್ಲಿ ಕೂರಿಸಿದ್ದೀರಿ, ಇದಕ್ಕಿಂತ ಯಾರಿಗಣ್ಣ ಬೇಕು, ಸಾಕು, ಖುಷಿಯಾಗಿದ್ದೇನೆ. ಹೊರಗಡೆ ಹೋದರೆ ಚಾಪರ್ ಕೊಡ್ತಾರಾ ಅಲ್ಲಿಯೂ ಕೊಡೋದು ಅದೆ ಎಂದು ಹೇಳಿದರು

ಎಲ್ಲಿಯವರೆಗೆ ಮನರಂಜನೆ ಮಾಡಲು ಆಗುತ್ತೋ ಅಲ್ಲಿಯವರೆಗೆ ಸಿನಿಮಾ ಮಾಡ್ತೇನೆ.. ಕರ್ನಾಟಕದಲ್ಲಿ ಒಳ್ಳೊಳ್ಳೆ ಕಲಾವಿದರಿದ್ದಾರೆ. ಅವರನ್ನೆಲ್ಲಾ ಹಾಕಿಕೊಂಡು ಸಿನಿಮಾ ಮಾಡ್ತೇವೆ. ಮಾಲಾಶ್ರೀ ಮಗಳು ಆರಾಧನಾ ಮೊದಲ ಬಾರಿಗೆ ನಟಿಸಿದ್ದಾರೆ. ಮಾಲಾಶ್ರೀ ಅವರಿಗೆ ಕೊಟ್ಟ ಪ್ರೀತಿಯನ್ನು ಆರಾಧನಾ ಅವರಿಗೂ ಕೊಡಿ, ಜೊತೆಗೆ ಎಲ್ಲಾ ಹಿರೋಗೂ ಬೆಂಬಲವಿರಲಿ ಎಂದು ಕೇಳಿಕೊಂಡರು

ಸುಮಲತಾ ಹೆತ್ತ ತಾಯಿಯಲ್ಲ, ಆದರೆ ತಾಯಿಗಿಂತ ಹೆಚ್ಚು, ಕಾಟೇರ ಬಗ್ಗೆ ಒಳ್ಳೆಯ ಮಾತನಾಡಿದ್ದಾರೆ. ಸುಮಮ್ಮನಿಗೆ ಪ್ರೀತಿ ಬೆಂಬಲ ಸದಾ ಇರಲಿ, ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರ ಶ್ರಮವಿದೆ.ಸಿನಿಮಾ ಆಡಂಬರದ ಸಿನಿಮಾ ಅಲ್ಲ,ರೈತರ ಕಥೆಹೊಂದಿರುವ ಸಿನಿಮಾ, ಎಲ್ಲರ ಸಹಕಾರ ನೀಡಿ ಎಂದರು

ಗೆಡ್ಡೆ ಗೆಣಸು ಬೆಳಲು ಜಾಗಸಿಗಲ್ಲ

“ರೈತರಿಗೆ ಸಿಂಪಥಿ ಬೇಡ, ನ್ಯಾಯವಾದ ಬೆಲೆ ಕೊಡಿ,ರೈತರಿಗೆ ಬೆಲೆ ಕೊಡಿ, ಆಗ ಪ್ರತಿಯೊಬ್ಬರು ಹೆಲಿಕ್ಯಾಪ್ಟರ್‍ನಲ್ಲಿ ಓಡಾಡ್ತಾರೆ. ರೈತರು ತಮ್ಮ ಬಳಿ ಇರುವ ಜಾಗ ಮಾರಿಕೊಳ್ಳಬೇಡಿ, ಜಾಗ ಮಾರಿದ್ರೆ ಅಕ್ಕಿ ಬೆಳೆಯುವುದು ಇರಲಿ, ಗೆಡ್ಡೆ ಗೆಣಸು ಬೆಳೆಯಲು ಸಿಗಲ್ಲ. 56 ಸಿನಿಮಾ ಮಾಡಿದ್ದೇನೆ.47 ವರ್ಷ ಆಗಿದೆ. ದೊಡ್ಡ ದೊಡ್ಡ ಹೀರೋಗಳಾದ ವಿನೋದ್ ಪ್ರಭಾಕರ್, ಸೂರ್ಯ, ಜೈದ್, ಧನ್ವೀರ್, ಚಿಕ್ಕಣ್ಣ ಸೇರಿದಂತೆ ಅನೇಕರು ಕಾಟೇರ ಚಿತ್ರಕ್ಕೆ ಬೆಂಬಲ ನೀಡಿರುವುದಕ್ಕೆ ಚಿರಋಣಿ ಎಂದರು ನಟ ದರ್ಶನ್.

ನಟಿ ಆರಾಧನಾ ಮಾತನಾಡಿ, ಮೊದಲ ಚಿತ್ರದಲ್ಲಿ ದರ್ಶನ್ ಸಾರ್ ಚಿತ್ರದಲ್ಲಿ ಅವಕಾಶ ಸಿಕ್ಕಿದೆ. ಇದಕ್ಕಾಗಿ ಜೀವಮಾನವಿಡೀ ಡಿ ಬಾಸ್ ಅವರಿಗೆ ಋಣಿಯಾಗಿರುವೆ. ಮಾಲಾಶ್ರೀ ಮತ್ತು ರಾಮು ಅವರ ದಂಪತಿಯ ಪುತ್ರಿಯಾಗಿ ಜನಿಸಿರುವುದೇ ನನ್ನ ಪುಣ್ಯ ಎಂದು ಭಾವುಕರಾದರು.

ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮಾತನಾಡಿ,ಕಾಟೇರ, ಮಣ್ಣಿನ ಸೊಗಡಿನ ಚಿತ್ರ. ರೈತರ ಕುರಿತಾದ ಚಿತ್ರ ಇದು, ಇದೇ 29ಕ್ಕೇ ರಾಜ್ಯಾದ್ಯಂತ ತೆರೆಗೆ ಬರಲಿದೆ ಅಭಿಮಾನಿಗಳು ಪ್ರೇಕ್ಷಕರು ಚಿತ್ರವನ್ನು ಮನಸ್ಸಿನಲ್ಲಿಟ್ಟುಕೊಂಡು ಆರಾಧಿಸುತ್ತಾರೆ ಎಂದರು.

ಸಂಸದೆ ಸುಮಲತಾ ಅಂಬರೀಷ್ ಮಾತನಾಡಿ, ನನಗೆ ಯಾರೂ ಇಲ್ಲ ಎಂದಾಗ ಕಷ್ಟದಲ್ಲಿ ಬೆನ್ನೆಲುಬಾಗಿ ನಿಂತವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಆಪ್ತರಾದ ರಾಕ್ ಲೈನ್ ವೆಂಕಟೇಶ್ ಅವರು. ಕಾಟೇರ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಹರಸಿದರು.

ಹಿರಿಯ ನಟಿ ಮಾಲಾಶ್ರೀ ಮಾತನಾಡಿ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರಿಗೆ ಒಂದು ಕರೆ ಮಾಡಿದೆ.ಮಗಳನ್ನು ಈ ಮಟ್ಟಕ್ಕೆ ತಂದಿದ್ದಾರೆ. ನನಗೆ ಕೊಟ್ಟ ಸಹಕಾರ ಬೆಂಬಲ ಮಗಳಿಗೂ ಕೊಡಿ ಎಂದರು

ದರ್ಶನ್ ಸಾರ್ ಗೆ ರಾಷ್ಟ್ರಪ್ರಶಸ್ತಿ

ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಮಾತನಾಡಿ, ದರ್ಶನ್ ಸಾರ್ ಅವರ 56 ಸಿನಿಮಾಗಳಲ್ಲಿ 29 ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. 55 ಚಿತ್ರಗಳ ತನಕ ಒಂದು ತೂಕವಾದರೆ 56ನೇ ಸಿನಿಮಾ ಕಾಟೇರದ್ದೇ ಮತ್ತೊಂದು ತೂಕ. ಈ ಚಿತ್ರದ ಮೂಲಕ ದರ್ಶನ್ ಸಾರ್‍ಗೆ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿ ಸಿಗಲಿದೆ. ಚಿತ್ರದಲ್ಲಿ ಎರಡು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ವಯಸ್ಸಾದರೂ ದರ್ಶನ್ ಅವರೇ ಆಯ್ಕೆ ಸಮಿತಿ ಗೊಂದಲಕ್ಕೀಡಾಗಬೇಡಿ ಎಂದು ಮನವಿ ಮಾಡಿದರು.

ಹಿರಿಯ ಕಲಾವಿದರಾದ ಶೃತಿ, ಪದ್ಮಾ ವಾಸಂತಿ, ಅವಿನಾಶ್, ಬಿರಾದಾರ್ ಗಾಯಕಿ ಮಂಗ್ಲಿ,ಸಂಭಾಷಣಾಕಾರ ಮಾಸ್ತಿ, ಸೇರಿದಂತೆ ಹಲವು ಚಿತ್ರ ಮತ್ತು ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು

ನಟರಾದ ಅಭಿಷೇಕ್ ಅಂಬರೀಷ್, ಸೂರ್ಯ, ವಿನೋದ್ ಪ್ರಭಾಕರ್, ಧನ್ವೀರ್,ಝೈದ್, ಚಿಕ್ಕಣ್ಣ, ಧರ್ಮಣ್ಣ ಸೇರಿದಂತೆ ಅನೇಕರು ದರ್ಶನ್ ಅಣ್ಣನ ಸಿನಿಮಾ ಯಶಸ್ಸು ಕಾಣಲಿ ಎಂದು ಶುಭಹಾರೈಸಿದರು.

ನಟಿಯರಾದ ನಿಮಿಕಾ ರತ್ನಾಕರ್, ಬೃಂದಾ ಆಚಾರ್ಯ, ಮೇಘ ಶೆಟ್ಟಿ ಅವರು ದರ್ಶನ್ ಸಿನಿಮಾಗಳ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಮಂಡ್ಯದಲ್ಲಿ ಅಬ್ಬರ

ಮಂಡ್ಯದಲ್ಲಿ ಕಾಟೇರ ಚಿತ್ರದ ರೈತ ಗೀತೆ ಬಿಡುಗಡೆಯಾಗಿದೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರದಲ್ಲಿ ಮಾಲಾಶ್ರೀ ಅವರ ಪುತ್ರಿ ಆರಾಧಾನಾ ನಾಯಕಿಯಾಗಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ಅವಿನಾಶ್, ಶೃತಿ, ಬಿರಾದಾರ್,ಪದ್ಮಾ ವಾಸಂತಿ , ರವಿ ಚೇತನ್, ಕುಮಾರ್ ಗೋವಿಂದು ಸೇರಿದಂತೆ ಹಿರಿ ಕಿರಿಯ ಕಲಾವಿದರ ದೊಡ್ಡ ದಂಡೇ ಚಿತ್ರದಲ್ಲಿದೆ. ಮಂಡದಲ್ಲಿ ಅಬ್ಬರಿಸಿದ ಬಳಿಕ ಚಿತ್ರಮಂದಿರದಲ್ಲಿಯೂ ಅಬ್ಬರಿಸಲು ಸಜ್ಜಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin