Shooting for ``Pink Note'' in Dubai
ದುಬೈನಲ್ಲ್ಲಿ “ಪಿಂಕ್ ನೋಟ್” ಚಿತ್ರಕ್ಕೆ ಚಿತ್ರೀಕರಣ
ನೆನಪಿರಲಿ ಪ್ರೇಮ್ ಮತ್ತು ಭಾವನಾ ಮೆನನ್ ಜೋಡಿಯ ಹೊಸ ಚಿತ್ರ “ ಪಿಂಕ್ ನೋಟ್” ಚಿತ್ರದ ಚಿತ್ರೀಕರಣ ದುಬೈನಲ್ಲಿ ನಿರಂತರವಾಗಿ ಸಾಗಿದೆ.
ಅಮ್ಮ ಎಂಟರ್ ಪ್ರೈಸಸ್ ಲಾಂಛನದಲ್ಲಿ ಹೆಚ್.ಆನಂದಪ್ಪ ನಿರ್ಮಿಸುತ್ತಿರುವ `ಪಿಂಕ್ ನೋಟ್’ ಚಿತ್ರಕ್ಕೆ 30 ದಿನಗಳ ಕಾಲ ಚಿತ್ರೀಕರಣ ಸಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಆಜರ್ ಬಾಯಿಜನ್ ಬಾಕು ಸಿಟಿಯಲ್ಲಿ ಸಹ ಚಿತ್ರೀಕರಣ ನಡೆದಿದೆ. ದುಬೈನಲ್ಲಿ ನಾಯಕ ನಾಯಕಿಯರೊಂದಿಗೆ ಚಿತ್ರದ ಪ್ರಮುಖ ಕಲಾವಿದರುಗಳು ಪಾಲ್ಗೊಂಡಿದ್ದ ದೃಶ್ಯಗಳು ಹಾಗೂ ಎರಡು ಹಾಡುಗಳ ಚಿತ್ರೀಕರಣ ನಡೆಯಲಿದೆ.
ರಕ್ಷಣ್- ರುದ್ರೇಶ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ನೆನಪಿರಲಿ ಪ್ರೇಮ್, ಭಾವನಾ ಮೆನನ್, ಶ್ರೀನಿವಾಸಪ್ರಭು, ಪದ್ಮಜಾ ರಾವ್, ಗಿರೀಶ್, ಶಿವಣ್ಣ, ಮುನಿ, ಯುಗ ಚಂದ್ರು, ಸಿಂಛನ, ಶೈಲಜಾ, ಮುಂತಾದವರಿದ್ದಾರೆ.
ಸೆಲ್ವಂ ಮಾದಪ್ಪನ್ ಛಾಯಾಗ್ರಹಣ, ಜೆಸ್ಸಿಗಿಫ್ಟ್ ಸಂಗೀತ,ಕೆ.ಎಂ ಪ್ರಕಾಶ್ ಸಂಕಲನ ಮಾಸ್‍ಮಾದ ಸಾಹಸ, ಧನು ನೃತ್ಯ, ಮೋಹನ್‍ರಾಸು ಸಹ ನಿರ್ದೇಶನವಿದೆ.