“ರಕ್ಷಕ-2” ಚಿತ್ರ ಜೂನ್ 26ಕ್ಕೆ ಬಿಡುಗಡೆ
ಶತದಿನೋತ್ಸವ ಆಚರಿಸಿದ ರಕ್ಷಕ, ದೊಡ್ಡಣ್ಣ ಪುಟ್ಟಣ್ಣ ಚಿತ್ರಗಳ ನಿರ್ದೇಶಕ ಡಾ. ಆರ್. ವಿಜಯ್ ಕುಮಾರ್ ಇದೀಗ ರಕ್ಷಕ -2 ಚಿತ್ರ ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ನಿರ್ದೇಶನದ ಮೂರನೇ ಚಿತ್ರ. ‘ರಕ್ಷಕ 2’ ಚಿತ್ರ ಜೂನ್ 26 ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ

ಲವ್, ಆಕ್ಷನ್, ಫ್ಯಾಮಿಲಿ, ಸಸ್ಪೆನ್ಸ್ ಥ್ರಿಲ್ಲರ್, ಕಾಮಿಡಿ ಸೇರಿದಂತೆ ಎಲ್ಲ ಮನರಂಜನಾತ್ಮಕ ಅಂಶಗಳೂ ಈ ಚಿತ್ರದಲ್ಲಿವೆ. ಬೆಂಗಳೂರು ನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.
ಶಿವು ಸರ್ವೇಶ್ ಚಿತ್ರ ನಿರ್ಮಿಸಿದ್ದಾರೆ. ಡಾ. ಆರ್ ವಿಜಯಕುಮಾರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನದ ಜತೆ ಸಂಗೀತ ಸಂಯೋಜನೆಯ ಜವಾಬ್ದಾರಿಯನ್ನೂ ಸಹ ನಿರ್ವಹಿಸಿದ್ದಾರೆ.
ವೈಲೆಂಟ್ ವೇಲು ಅವರ ಸಾಹಸ, ವಿಜಯ್ ಮಧಾಳೇ ಅವರ ಛಾಯಾಗ್ರಹಣ ಹಾಗೂ ಸಂಕಲನ ಈ ಚಿತ್ರಕ್ಕಿದೆ. ನಿರ್ದೇಶಕ ಡಾ.ಆರ್ ವಿಜಯ್ ಕುಮಾರ್ ಅವರು ದಕ್ಷ ಪೆÇಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಸ್ಯನಟ ಲಯಕೋಕಿಲ ಅವರು ಪೆÇಲೀಸ್ ಕಾನ್ಸ್ಟೇಬಲ್ ಪಾತ್ರ ನಿರ್ವಹಿಸಿದ್ದಾರೆ.

ರಾಜವಂಶಿ, ರಾಧಿಕಾ ಚಿತ್ರದ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಉಳಿದ ಪಾತ್ರಗಳಲ್ಲಿ ಮಧುಶ್ರೀ, ಖಳನಾಯಕನಾಗಿ ಹಿರಿಯ ನಟ ಸುರೇಂದ್ರ ಕುಮಾರ್, ಮುರಳಿಕೃಷ್ಣ, ವಿಜಯ್ ಮಧಾಳೇ, ಅರವಿಂದ್, ರೋಹಿಣಿ ನಟಿಸಿದ್ದಾರೆ. ವಿ.ಎಸ್.ಕೆ. ಸಿನಿ ಕ್ರಿಯೇಶನ್ಸ್ ಸಂಸ್ಥೆಯ ಮೂಲಕ ಚಿತ್ರ ಬಿಡುಗಡೆಯಾಗುತ್ತಿದೆ.


