'Ravanapura' to release on January 17th

‘ರಾವಣಾಪುರ’ ಚಿತ್ರ ಜನವರಿ 17ಕ್ಕೆ ಬಿಡುಗಡೆ - CineNewsKannada.com

‘ರಾವಣಾಪುರ’ ಚಿತ್ರ ಜನವರಿ 17ಕ್ಕೆ ಬಿಡುಗಡೆ

ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಸಾಹಸಗಳು ನಡೆಯುತ್ತಲೇ ಇವೆ. ಆ ಪ್ರಯತ್ನಗಳು ಸೋತ್ರು ಗೆದ್ರು ಹೊಸಬರು ತಮ್ಮ ಪ್ರಯತ್ನ ನಿಲ್ಲಿಸುವುದಿಲ್ಲ. ಅದರಂತೆ ಈಗ ಹೊಸ ತಂಡ ಸೇರಿಕೊಂಡು ರಾವಣಾಪುರ ಎಂಬ ಸಿನಿಮಾ ಮಾಡಿದ್ದು, ಜನವರಿ 17 ರಂದು ತೆರೆಗೆ ಬರಲಿದೆ.

ರಾವಣಾಪುರ ಸಿನಿಮಾದ ಟ್ರೇಲರ್ ಬಿಡುಗಡೆ ನಡೆಯಿತು. ನೆರವೇರಿದೆ. ನಿರ್ದೇಶಕ ಕುಮಾರ್ ಎಂ ಬಾವಗಳ್ಳಿ ಮಾತನಾಡಿ, ಸಿನಿಮಾ ಟೆಕ್ನಿಕಲ್ ಆಗಿ ತುಂಬಾ ಸ್ಟ್ರಾಂಗ್ ಆಗಿದೆ. ಹಳೆ ವಿಷಯ ಇವತ್ತಿನ ಪೀಳಿಗೆಗೆ ಹೋಲುವಂತೆ ಚಿತ್ರ ಮಾಡಿದ್ದೇವೆ. ಸ್ನೇಹಿತರೊಬ್ಬರ ಜೀವನದಲ್ಲಿ ಒಂದು ಘಟನೆ ನಡೆಯಿತು. ಅದನ್ನು ತೆಗೆದುಕೊಂಡು ಸಿನಿಮಾ ಮಾಡಿದ್ದೇನೆ. ಇದು ನನ್ನ ಮೊದಲ ಪ್ರಯತ್ನ. ಪ್ರತಿಯೊಂದು ಚಿತ್ರವು ಗೆಲ್ಲಬೇಕು ಅಂತಾ ಪ್ರತಿಯೊಬ್ಬ ನಿರ್ದೇಶಕರು ಬರುತ್ತಾರೆ. ತಪ್ಪು ಇದ್ದರೆ ತಿದ್ದಿಕೊಂಡು ಮುಂದೆ ಹೆಜ್ಜೆ ಇಡುತ್ತೇನೆ ಎಂದರು.

ರಾವಣಾಪುರ ಸಿನಿಮಾದಲ್ಲಿ ರತ್ನನ್ ಕಲ್ಯಾಣ್, ರಕ್ಷಾ, ದಿಲೀಪ್ ಕುಮಾರ್ ಎಂ, ರಘು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ಎಪಿ ಶ್ರೀನಾಥ್, ಸೂರ್ಯ ಆರ್ ಎನ್, ಮಂಜುನಾಥ್ ಎಲ್, ವಿಶಾಲ್ ಸಂಜಯ್ ಮತ್ತು ರಾಜೇಶ್ವರಿ ಸೇರಿದಂತೆ ಮತ್ತಿತತರು ನಟಿಸಿದ್ದಾರೆ.

ಸಿಂಗನಲ್ಲೂರು ಚೌಡೇಶ್ವರಿ ಕಂಬೈನ್ಸ್ ಬ್ಯಾನರ್ ನಡಿ ಎಲ್ ನಾಗಭೂಷಣ ನಿರ್ಮಾಣ ಮಾಡಿದ್ದು, ಪ್ರಭು ಸಂಗೀತ, ಆನಂದ್ ಇಳಯರಾಜ ಛಾಯಾಗ್ರಹಣ ಚಿತ್ರಕ್ಕಿದೆ. ನೈಜ ಘಟನೆಯಿಂದ ಸ್ಪೂರ್ತಿ ಪಡೆದ ರಾವಣಾಪುರ ಇದೇ ಜನವರಿ 17ಕ್ಕೆ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin