ಮುದ್ದಾದ ಪ್ರೇಮ ಕಾವ್ಯ ” ಸಂಜು ವೆಡ್ಸ್ ಗೀತಾ- 2″ ಜನವರಿ 10 ರಂದು ತೆರೆಗೆ

ಶಿಡ್ಲಘಟ್ಟದ ರೇಶ್ಮೆ ಬೆಳೆಗಾರರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳ ಜತೆಗೊಂದು ಅದ್ಭುತ ಪ್ರೇಮ ಕಾವ್ಯವನ್ನು ” ಸಂಜುವೆಡ್ಸ್ ಗೀತಾ-2″ ಮೂಲಕ ನಿರ್ದೇಶಕ ನಾಗಶೇಖರ್ ತೆರೆಗೆ ಕಟ್ಟಿಕೊಡಲು ಮುಂದಾಗಿದ್ದಾರೆ.

ಶ್ರೀನಗರ ಕಿಟ್ಟಿ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ ” ಸಂಜು ವೆಡ್ಸ್ ಗೀತಾ- 2 ” ಚಿತ್ರ ಇದೇ 10 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಕರ್ನಾಟಕ ಅಲ್ಲದೆ ವಿದೇಶಗಳಲ್ಲೂ ಸಹ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.
ಪವಿತ್ರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ ಚಲವಾದಿ ಕುಮಾರ್ ಚಿತ್ರ ನಿರ್ಮಾಣ ಮಾಡಿದ್ದಾರೆ, ಚಿತ್ರದ ಹಾಡುಗಳು ಈಗಾಗಲೇ ಸಂಗೀತಪ್ರಿಯರ ಹೃದಯದಲ್ಲಿ ಹಲ್‌ಚಲ್ ಎಬ್ಬಿಸಿವೆ.
ನಾಯಕ ಶ್ರೀನಗರ ಕಿಟ್ಟಿ ಸಂಗೀತ ನಿರ್ದೇಶಕ ಶ್ರೀಧರ್ ವಿ.ಸಂಭ್ರಮ್ ಹಾಗೂ ಈ ಕಥೆಗೆ ರೇಶ್ಮೆಯಂಥಾ ಎಳೆ ಕೊಟ್ಟ ಚಂದ್ರಚೂಡ್ ಕೂಡ ಹಾಜರಿದ್ದು ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡರು.

ಚಂದ್ರಚೂಡ್ ಮಾತನಾಡಿ ಮಿತ್ರ ಹಾಗು ನಿರ್ದೇಶಕ ಆರ್.ಚಂದ್ರು ಅವರ ಜತೆ ಶಿಡ್ಲಘಟ್ಟಕ್ಕೆ ಹೋಗಿದ್ದೆ, ಆಗ ಅಲ್ಲಿನ ರೇಶ್ಮೆ ಮಾರುಕಟ್ಟೆ, ಆ ರೇಶ್ಮೆ ಬೆಳೆಯುವ ರೈತರು ಅದನ್ನು ಬೆಳೆಯುವಾಗ, ನಂತರ ಅವರು ಪಡುವ ಕಷ್ಟ, ಅವರ ಪರಿಸ್ಥಿತಿ ಇದೆಲ್ಲವನ್ನೂ ಕಣ್ಣಾರೆ ನೋಡಿದೆ, ಎಷ್ಟು ರೇಶ್ಮೆ ಬೆಳೆಯುತ್ತಾರೆ, ಅದೆಲ್ಲ ಎಲ್ಲಿಗೆ ಹೋಗುತ್ತದೆ, ಜಾಗತೀಕರಣದ ಜಗತ್ತಿನಲ್ಲಿ ಬೆಳೆಗಾರರಿಗೆ ಅದರಿಂದ ಎಷ್ಟು ಪ್ರತಿಪಲ ಸಿಗುತ್ತಿದೆ, ಅವರಿಗೆ ಏಕೆ ಮಾರುಕಟ್ಟೆ ದೊರಕುತ್ತಿಲ್ಲ, ಇದನ್ನೆಲ್ಲ ನೋಡಿದಾಗ ಈ ಬಗ್ಗೆಯೇ ಒಂದು ಕಥೆ ಮಾಡಬಾರದೇಕೆ ಅನಿಸಿತು ಅದರ ಫಲವೇ ಸಂಜು ವೆಡ್ಸ್ ಗೀತಾ- 2 ಚಿತ್ರದ ಕಥೆ ಎಂದರು

ನಾಗಶೇಖರ್ ಸಿಕ್ಕಾಗ ಸಂಜು ವೆಡ್ಸ್ ಗೀತಾ -2 ಮಾಡುತ್ತಿದ್ದೇನೆ ಎಂದರು, ಕಿಟ್ಟಿ, ನಾಗಶೇಖರ್, ನಿರ್ಮಾಪಕ ಕುಮಾರ್ ಎಲ್ಲರೂ ಸೇರಿ ಕಥೆಯನ್ನು ಚರ್ಚಿಸುತ್ತಿರುವಾಗ ಈ ಅಂಶವನ್ನು ಹೇಳಿದೆ. ಎಲ್ಲರಿಗೂ ಇಷ್ಟವಾಯ್ತು, ಕೊನೇ ಹಂತದಲ್ಲಿದ್ದ ಕಥೆಗೆ ಹೊಸ ರೂಪ ಸಿಕ್ಕಿತು, ರೇಶ್ಮೆ ಬೆಳೆಯುವ ರೈತರು ಹಾಗೂ ಸ್ವಿಟ್ಜರ್‌ಲ್ಯಾಂಡ್‌ನ ರಾಣಿ ಮತ್ತು ಸೈನಿಕನ ಕಥೆ ಇವೆರಡನ್ನೂ ಸೇರಿಸಿ ಹೊಸದೊಂದು ಚಿತ್ರಕಥೆ ರೆಡಿಯಾಯಿತು. ರೇಶ್ಮೆ ಬೇಳೆಯುವ ಸಾಕಷ್ಟು ರೈತರು ಸಿಲ್ಕೋಸಿಸ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಎಂಎನ್‌ಸಿ, ಕಾರ್ಪೊರೇಟ್ ಕಂಪನಿಗಳು ಅವರನ್ನೆಲ್ಲ ಹೇಗೆ ತುಳಿಯುತ್ತಿದ್ದಾರೆ ಇದನ್ನೆಲ್ಲ ಸಿನಿಮಾದಲ್ಲಿ ತೋರಿಸಿದ್ದಾರೆ, ನೂಲಿನ ಮಹತ್ವದ ಜತೆಗೊಂದು ಮಧುರ ಪ್ರೇಮ ಕಾವ್ಯವನ್ನು ಈ ಚಿತ್ರ ಹೇಳುತ್ತದೆ ಎಂದರು.
ಶಿಡ್ಲಘಟ್ಟದಲ್ಲಿ ಪ್ರಾರಂಭವಾಗುವ ಕಥೆ ಸ್ವಿಟ್ಜರ್ ಲ್ಯಾಂಡ್‌ವರೆಗೂ ಸಾಗುತ್ತದೆ, ಚಿತ್ರದಲ್ಲಿ ರೇಶ್ಮೆ ಬೆಳೆಗಾರ ಸಂಜು ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಕಾಣಿಸಿಕೊಂಡಿದ್ದು, ಗೀತಾ ಆಗಿ ರಚಿತಾರಾಮ್ ಅಭಿನಯಿಸಿದ್ದಾರೆ.
ಸಂಗೀತ ನಿರ್ದೇಶಕ ಶ್ರೀಧರ್ ವಿ.ಸಂಭ್ರಮ್ ಮಾತನಾಡಿ ಚಿತ್ರಕ್ಕೆ ಸಂಗೀತ ಮಾಡುವ ಸದವಕಾಶ ಸಿಕ್ಕಿದ್ದು ಅದೃಷ್ಟವೇ ಸರಿ, ಒಮ್ಮೆ ನಾಗಶೇಖರ್ ನನಗೆ ಕಾಲ್ ಮಾಡಿ ಸಿನಿಮಾಗೆ ಮ್ಯೂಸಿಕ್ ಮಾಡಿಕೊಡಿ ಎಂದಾಗ ಆ ರಾತ್ರಿಯಿಡೀ ನಾನು ನಿದ್ದೆ ಮಾಡಲಿಲ್ಲ, ಮುಸ್ಸಂಜೆ ಮಾತು, ಕೃಷ್ಣನ್ ಲವ್ ಸ್ಟೋರಿ, ಕೃಷ್ಣಲೀಲಾ ನಂತರ ನನ್ನ ಕರಿಯರ್‌ನ ಮತ್ತೊಂದು ಬೆಸ್ಟ್ ಸಿನಿಮಾ ಇದಾಗಲಿದೆ ಎಂದರು.

ನಟ ಶ್ರೀನಗರ ಕಿಟ್ಟಿ ಮಾತನಾಡಿ ನಿರ್ಮಾಪಕ ಕುಮಾರ್, 16 ರಿಂದ 17 ಕೋಟಿ ಬಂಡವಾಳ ಹಾಕಿ ಈ ಚಿತ್ರ ನಿರ್ಮಿಸಿದ್ದಾರೆ, 60 ರಿಂದ 65 ರಷ್ಟು ಸಿನಿಮಾಕಥೆ ಸ್ವಿಟ್ಜರ್ ಲ್ಯಾಂಡ್‌ನಲ್ಲೇ ನಡೆಯುತ್ತದೆ. ಈಗಾಗಲೇ 180 ರಿಂದ 200 ಸಿಂಗಲ್ ಸ್ಕ್ರೀನ್ ಪೈನಲ್ ಆಗಿದ್ದು, ಮಲ್ಟಿಪ್ಲೆಕ್ಸ್ ಸಂಖ್ಯೆ ಏರುತ್ತಲೇ ಇದೆ, ಇದಲ್ಲದೆ ಅಮೇರಿಕಾದಲ್ಲಿಯೇ 31 ಸ್ಕ್ರೀನ್‌ಗಳಲ್ಲಿ ಚಿತ್ರ ರಿಲೀಸಾಗುತ್ತಿದೆ ಎಂದರು
ಮೊದಲು 5 ಸ್ಕ್ರೀನ್ ಅಂದಿದ್ದ ಅಲ್ಲಿನ ವಿತರಕರು ಸಾಂಗ್ ನೋಡಿ, ಥೇಟರ್ ಹೆಚ್ಚಿಸಿದ್ದಾರೆ, ವಿದೇಶಗಳಲ್ಲೇ ನೂರಕ್ಕೂ ಹೆಚ್ಚು ಸ್ಕ್ರೀನ್‌ನಲ್ಲಿ ರಿಲೀಸಾಗುವ ಸಾಧ್ಯತೆಯಿದೆ ಎಂದು ಹೇಳಿದರು,
ವಿಶೇಷವಾಗಿ ಚಿತ್ರದಲ್ಲಿ ಚೇತನ್ ಚಂದ್ರ, ರಾಗಿಣಿ ಗೆಸ್ಟ್ ಅಪೀಯರೆನ್ಸ್ ಆಗಿ ಕಾಣಿಸಿಕೊಂಡಿದ್ದಾರೆ, ಉಳಿದಂತೆ ಸತ್ಯ ಹೆಗಡೆ ಛಾಯಾಗ್ರಹ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ,
ರಂಗಾಯಣ ರಘು, ಸಾಧು ಕೋಕಿಲ, ತಬಲಾನಾಣಿ, ಗಿಚ್ಚಿಗಿಲಿಗಿಲಿ ವಿನೋದ್ ಅಲ್ಲದೆ ಖಳನಟ ಸಂಪತ್‌ಕುಮಾರ್ ಚಿತ್ರದಲ್ಲಿ ಅಭಿನಯಿಸಿದ್ದಾರೆ.