INTERVIEW : “ಗಜರಾಮ “ನ ಪ್ರಯತ್ನ ಕ್ಕೆ ಯಶಸ್ಸು ಸಿಗುವ ವಿಶ್ವಾಸ : ರಾಜ್ ವರ್ಧನ್
ರಾಜ್ ವರ್ಧನ್ , ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟರಲ್ಲಿ ಒಬ್ಬರು. ಹಿರಿಯ ಪೋಷಕ ಕಲಾವಿದ ಡಿಂಗ್ರಿ ನಾಗರಾಜ್ ಪುತ್ರ. ಸಹಜವಾಗಿಯೇ ಕಲೆ ರಕ್ತದಲ್ಲಿ ಮೈಗೂಡಿಸಿಕೊಂಡೇ ಬಂದಿದೆ. ಕಿಚ್ಚ ಸುದೀಪ್ , ಚಾಲೆಜಿಂಗ್ ಸ್ಟಾರ್ ದರ್ಶನ್ ಬಳಿಕ ಆರಡಿ ಕಟೌಟ್ ಎನ್ನುವುದು ಮತ್ತೊಂದು ಹೆಗ್ಗಳಿಕೆ. ಆಕ್ಷನ್ ಹೀರೋ ಆಗಿ ಮಿಂಚುವ ಎಲ್ಲಾ ಲಕ್ಷಣಗಳು ನಟ ರಾಜ್ ವರ್ಧನ್ ಅವರಲ್ಲಿದೆ
“ಬಿಚ್ಚುಗತ್ತಿ” ಚಿತ್ರದಂತಹ ಐತಿಹಾಸಿಕ ಪಾತ್ರವಿರಲಿ, ಲವ್ವರ್ ಬಾಯ್ ಪಾತ್ರ ಇರಲಿ ಇಲ್ಲವೇ ಆಕ್ಷನ್ ಹಿರೋ ಹೀಗೆ.. ಯಾವುದೇ ಪಾತ್ರ ಸಿಕ್ಕರೂ ಲೀಲಾಜಾಲವಾಗಿ ಅಭಿನಯಿಸುವ ಕಲೆ ಮೈಗೂಡಿಸಿಕೊಂಡವರು ನಟ ರಾಜ್‍ವರ್ಧನ್. ಹೇಳಿ ಕೇಳಿ ಅಪ್ಪ ಡಿಂಗ್ರಿ ನಾಗರಾಜ್ ರಂಗಭೂಮಿಯಲ್ಲಿ ಪಳಗಿದವರು. ಮೇಲಾಗಿ ಕನ್ನಡ ಚಿತ್ರರಂಗಕ್ಕಾಗಿಯೇ ತಮ್ಮ ಬದುಕು ಮೀಸಲಿಟ್ಟ ಹಿರಿಯ ನಟ. ಹೀಗಾಗಿ ಅವರಲ್ಲಿರುವ ಕಲಾಸರಸ್ವತಿ ಮಗನಿಗೆ ಸಹಜವಾಗಿಯೇ ಒಲಿದಿದೆ.
ನಟ ರಾಜ್‍ವರ್ಧನ್ ನಟನೆಯ ಬಹುನಿರೀಕ್ಷಿತ “ಗಜರಾಮ” ಫೆಬ್ರವರಿ 7 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಮೂಲಕ ಕನ್ನಡಕ್ಕೆ ಆಕ್ಷನ್ ಹಿರೋ ಸಿಗುವ ಎಲ್ಲಾ ಭರವಸೆ ಮೂಡಿಸಿದ್ದಾರೆ. ಚಿತ್ರವನ್ನು ನರಸಿಂಹಮೂರ್ತಿ ನಿರ್ಮಾಣ ಮಾಡಿದ್ದು ಮಲ್ಲಿಕಾರ್ಜುನ ಕಾಶಿ, ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ.
ಯುವ ನಟಿ ತಪಸ್ವನಿ ಪೂಣಚ್ಚ ನಾಯಕಿಯಾಗಿ ಕಾಣಿಸಿಕೊಂಡಿದ್ದು ಮತ್ತೊಬ್ಬ ಪ್ರತಿಭಾನ್ವಿತ ನಟಿ ರಾಗಿಣಿ ದ್ವಿವೇದಿ ಚಿತ್ರದಲ್ಲಿ ” ಸಾರಾಯಿ ಶೇಷಮ್ಮ” ನಾಗಿ ನಟ ರಾಜ್‍ವರ್ಧನ್ ಜೊತೆ ಹೆಜ್ಜೆ ಹಾಕಿದ್ದಾರೆ. ಇದು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ದುಪ್ಪಟ್ಟು ಮಾಡಿದೆ.
“ಗಜರಾಮ” ಚಿತ್ರ ಫೆಬ್ರವರಿ 7ರಂದು ಬಿಡುಗಡೆಯಾಗುತ್ತಿರುವ ಕುರಿತು ಚಿತ್ರದ ಹಾಗು ಮುಂಬರುವ ಚಿತ್ರಗಳು, ಹೊಸ ಯೋಜನೆ ಕುರಿತು ನಟ ರಾಜ್‍ವರ್ಧನ್ ಮಾಹಿತಿ ಹಂಚಿಕೊಂಡಿದ್ದಾರೆ.
- “ಗಜರಾಮ” ಚಿತ್ರ ಫೆಬ್ರವರಿ 7 ರಂದು ಬಿಡುಗಡೆಯಾಗುತ್ತಿದೆ. ನೀವೇಷ್ಟು ಕುತೂಹಲಭರಿತರಾಗಿದ್ದೀರಿ..
” ಗಜರಾಮ” ಚಿತ್ರ ಫೆಬ್ರವರಿ 7ರಂದು ಬಿಡುಗಡೆಯಾಗುತ್ತಿರುವುದು ನನ್ನಲ್ಲಿ ನಿರೀಕ್ಷೆ ದುಪ್ಪಟ್ಟು ಮಾಡಿದೆ.ಜೊತೆಗೆ ಸಿನಿಮಾಗಾಗಿ ಸಾಕಷ್ಟು ಶ್ರಮ ಹಾಕಿದ್ದೇನೆ. ಸಿನಿಮಾ ಕೂಡ ಚೆನ್ನಾಗಿ ಮೂಡಿ ಬಂದಿದೆ. ನಿರ್ದೇಶಕ ಸುನೀಲ್ ಕುಮಾರ್ ಉತ್ತಮ ಕಥೆಯ ಚಿತ್ರವನ್ನು ಪ್ರೇಕ್ಷಕರ ಮುಂದೆ ಇಡುತ್ತಿದ್ದಾರೆ. ಇಡೀ ಚಿತ್ರತಂಡಕ್ಕೆ ಗಜರಾಮ ಚಿತ್ರ ಹೊಸ ಅವಕಾಶಗಳ ಸೃಷ್ಟಿಗೆ ಮುನ್ನುಡಿ ಬರೆಯಲಿದೆ ಎನ್ನುವ ವಿಶ್ವಾಸವಿದೆ.
- ಡಿಸೆಂಬರ್‍ನಲ್ಲಿ ಚಿತ್ರ ಬಿಡುಗಡೆ ದಿನಾಂಕ ಪ್ರಕಟಿಸಿದ್ರಿ.. ಯಾಕೆ ಮುಂದಕ್ಕೆ ಹೋಗಿತ್ತು..
ಡಿಸೆಂಬರ್ ತಿಂಗಳಲ್ಲಿ ನಟ ಉಪೇಂದ್ರ ನಿರ್ದೇಶನದ ” ಯುಐ” ಮತ್ತು ಕಿಚ್ಚ ಸುದೀಪ್ ಅಭಿನಯದ ” ಮ್ಯಾಕ್ಸ್” ಚಿತ್ರ ಬಿಡುಗಡೆ ಇದ್ದುದರಿಂದ ಚಿತ್ರಮಂದಿರಗಳಿಗೆ ಸಮಸ್ಯೆ ಆಗಬಹುದು ಎನ್ನುವ ಕಾರಣದಿಂದ ಚಿತ್ರತಂಡ ಮಾತನಾಡಿಕೊಂಡು ಫೆಬ್ರವರಿ 7ಕ್ಕೆ ಬಿಡುಗಡೆ ಆಗಲಿದೆ ಎಂದು ಮಾಹಿತಿ ಹಂಚಿಕೊಂಡರು.
- ನಿಮ್ಮ ಕೆರಿಯರ್ ಗೆ ” ಗಜರಾಮ” ಚಿತ್ರ ಎಷ್ಟು ಫ್ಲಸ್ ಆಗಲಿದೆ.. ಈ ಬಗ್ಗೆ ಹೇಳುವುದಾರೆ..
ಇದುವರೆಗೂ ಮಾಡಿರುವ ಚಿತ್ರಗಳಿಗಿಂತ “ಗಜರಾಮ” ಚಿತ್ರದಲ್ಲಿ ವಿಭಿನ್ನ ಪಾತ್ರ ಸಿಕ್ಕಿದೆ. ಸಂಪೂರ್ಣ ಕಮರ್ಷಿಯಲ್ ಸಿನಿಮಾ ಆಗಿರುವ ಹಿನ್ನೆಲೆಯಲ್ಲಿ ನೂರಕ್ಕೆ ನೂರರಷ್ಟು ನನ್ನ ಸಿನಿಮಾ ಕೆರಿಯರ್‍ನಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಸ್ಟಾರ್ ನಟನ ಚಿತ್ರಕ್ಕೆ ಏನೆಲ್ಲಾ ಬೇಕೋ ಅಷ್ಟನ್ನು ನಿರ್ಮಾಪಕರು ಒದಗಿಸಿದ್ದಾರೆ. ಗಜರಾಮನ ಪ್ರಯತ್ನಕ್ಕೆ ಯಶಸ್ಸು ಸಿಗಲಿದೆ ಎನ್ನುವ ವಿಶ್ವಾಸವಿದೆ
- ಗಜರಾಮ ಯಾವ ಜಾನರ್ ಸಿನಿಮಾ, ನಿಮ್ಮ ಪಾತ್ರ ಏನು?
ಚಿತ್ರ ಸಂಪೂರ್ಣ ಕಮರ್ಷಿಯಲ್ ಚಿತ್ರ. ಮನರಂಜನೆ ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಅದಕ್ಕೆ ತಕ್ಕಂತೆ ಇಡೀ ತಂಡ ಶ್ರಮ ಹಾಕಿದೆ. ಶ್ರೀರಂಗಪಟ್ಟಣ ಮತ್ತು ಮಂಡ್ಯ ಭಾಗದಿಂದ ಬೆಂಗಳೂರಿಗೆ ಬಂದು ಬದುಕಿಗೆ ಹೋರಾಟ ಮಾಡುವ ಪಾತ್ರ. ಚಿತ್ರದಲ್ಲಿ ನಿರ್ಮಾಪಕರು ಎಲ್ಲಿಯೂ ರಾಜಿ ಮಾಡಿಕೊಳ್ಳದೆ ಗುಣಮಟ್ಟಕ್ಕೆ ಆದ್ಯತೆ ನೀಡಲಾಗಿದೆ.
- ಗಜರಾಮನ ಚಿತ್ರೀಕರಣ ಎಲ್ಲೆಲ್ಲಿ ಎಷ್ಟು ದಿನ ಚಿತ್ರೀಕರಣ ಮಾಡಲಾಗಿದೆ.
ಚಿತ್ರವನ್ನು ಬೆಂಗಳೂರು, ಮೈಸೂರು ಸೇರಿದಂತೆ ಬೇರೆ ಬೇರೆ ಭಾಗದಲ್ಲಿ ಸುಮಾರು 72 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ.
- ಸಾರಾಯಿ ಶಾಂತಮ್ಮ ಹಾಡು ಹಿಟ್ ಆಗಿದೆ. ಇದು ಚಿತ್ರಕ್ಕೆ ಎಷ್ಟು ಪೂರಕವಾಗಬಹುದು.
ನಟಿ ರಾಗಿಣಿ ಅವರೊಂದಿಗೆ ಹೆಜ್ಜೆ ಹಾಕಿರುವ ” ಸಾರಾಯಿ ಶೇಷಮ್ಮ” ಹಾಡು ಈಗಾಗಲೇ ಹಿಟ್ ಆಗಿದೆ. ಜೊತೆಗೆ ಚಿತ್ರದ ಬಗ್ಗೆ ಜನರಲ್ಲಿ ನಿರೀಕ್ಷೆ ಮತ್ತಷ್ಡು ಹೆಚ್ಚು ಮಾಡಿದೆ. ಚಿತ್ರದ ಟೀಸರ್ ಮತ್ತು ಟ್ರೈಲರ್ ಹಿಟ್ ಆಗಿದ್ದು ಜನರನ್ನು ಚಿತ್ರಮಂದಿರಕ್ಕೆ ಕರೆತರಲು ಸಹಕಾರಿಯಾಗಲಿದೆ. ಜೊತೆಗೆ ಹಾಡು ಕಮರ್ಷಿಯಲ್ ಆಗಿ ಅದ್ಬುತವಾಗಿ ಮೂಡಿ ಬಂದಿದೆ. ಕನ್ನಡದ ಸಿನಿ ಪ್ರೇಕ್ಷಕರಿಗೆ ಮತ್ತೊಂದು ಅದ್ಬುತ ಹಾಡು ಸಿಗಲಿದೆ. ಪ್ರೇಪಕ್ಷಕರು ಎಂಜಾಯ್ ಮಾಡುವುದು ನೂರಕ್ಕೆ ನೂರಕ್ಕೆ ಖಚಿತ.
- ಹೊಸ ಹೊಸ ಪ್ರಾಜೆಕ್ಟ್ ಗಳ ಬಗ್ಗೆ ಹೇಳುವುದಾರೆ..
ಹಲವು ಕಥೆಗಳನ್ನು ಕೇಳುತ್ತಿದ್ದೇನೆ. ಅದರಲ್ಲಿಯೂ ಎರಡರಿಂದ ಮೂರು ಚಿತ್ರಗಳ ಕಥೆ ಬಹುತೇಕ ಅಂತಿಮವಾಗಿದೆ. ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಹೊಸ ಚಿತ್ರಗಳು ಆರಂಭವಾಗಲಿದೆ. ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗುವುದು. ಸದ್ಯದಲ್ಲಿ ಮತ್ತೊಂದು ಚಿತ್ರದ ಕುರಿತು ವಿವಿರ ನೀಡಲಾಗುವುದು .
- ಬಿಚ್ಚುಗತ್ತಿ ಚಿತ್ರಕ್ಕಾಗಿ ಸಾಕಷ್ಟು ಶ್ರಮ ಹಾಕಿದ್ರಿ.. ಗಜರಾಮನ ಚಿತ್ರಕ್ಕೆ ನಿಮ್ಮ ಶ್ರಮ ಎಷ್ಟಿದೆ.
“ಬಿಚ್ಚುಗತ್ತಿ” ಐತಿಹಾಸಿಕ ಪಾತ್ರವಾದ ಹಿನ್ನೆಲೆಯಲ್ಲಿ ದೇಹ ತೂಕ ಸಾಕಷ್ಟು ಹೆಚ್ಚಿಸಿಕೊಂಡಿದ್ದೆ. ಗಜರಾಮ ಚಿತ್ರ ವಿಭಿನ್ನ ಜಾನರಿನಚಿತ್ರ. ಈ ಚಿತ್ರದಲ್ಲಿ ಪಾತ್ರಕ್ಕೆ ತಕ್ಕಂತೆ ತಯಾರಾಗಿದ್ದೇನೆ. ನನ್ನದು ಚಿತ್ರದಲ್ಲಿ ಕುಸ್ತಿ ಪಟುವಿನ ಪಾತ್ರ. ಅದಕ್ಕೆ ಹೇಗೆ ಬೇಕೋ ಹಾಗೆ ತಯಾರಾಗಿದ್ದೇನೆ. ನನ್ನ ಚಿತ್ರ ಜೀವನದಲ್ಲಿಯೂ ವಿಭಿನ್ನ. ಚಿತ್ರವಾಗಲಿದೆ.
- ಚಿತ್ರದಲ್ಲಿ ಯಾವೆಲ್ಲಾ ಕಲಾವಿದರು ಇದ್ದಾರೆ.
ಕಬೀರ್ ಸಿಂಗ್ ದುಹಾನ್, ಶಿಷ್ಯ ದೀಪಕ್, ಶರತ್ ಲೋಹಿತಾಶ್ವ, ತುಕಾಲಿ ಸಂತೋಷ್, ನಟಿ ತಪಸ್ವಿನಿ ಪೂಣಚ್ಚ, ರಾಗಿಣಿ ದ್ವಿವೇದಿ ಸೇರಿದಂತೆ ಕಲಾವಿದರ ದೊಡ್ಡ ಬಳಗವೇ ಇದೆ. ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ. ನಾವಂತೂ ಚಿತ್ರ ವೀಕ್ಷಣೆ ಕಾತುರರಾಗಿದ್ದೇವೆ.
- ನಟ,ಕಲಾವಿದನಾಗಿ ಯಾವ ಯಾವ ರೀತಿಯ ಪಾತ್ರ ಮಾಡುವ ಕನಸಿದೆ.
ಪ್ರತಿಭೆಯನ್ನು ಅನಾವರಣ ಮಾಡುವ ಎಲ್ಲಾ ರೀತಿಯ ಪಾತ್ರಗಳ ಚಿತ್ರದಲ್ಲಿ ಕಾಣಿಸಿಕೊಳ್ಳುವ ಆಸೆ ಇದೆ. ಮಾಡುವ ಪಾತ್ರ ನನಗೂ ಇಷ್ಟವಾಗುವ ಮೂಲಕ ಜನರಿಗೂ ಇಷ್ಟವಾಗಬೇಕು. ಆಗ ಮಾಡಿದ ಪ್ರಯತ್ನಕ್ಕೆ ಫಲ ಸಿಗಲಿದೆ. ಈ ರೀತಿಯ ಪಾತ್ರಗಳನ್ನು ಹೆಚ್ಚು ಹೆಚ್ಚು ನಿರೀಕ್ಷೆ ಮಾಡುತ್ತಿದ್ದೇನೆ.
- ಮುಂದಿನ ಯೋಜನೆಗಳ ಬಗ್ಗೆ ಹೇಳುವುದಾದರೆ…
ಮೂರು ನಾಲ್ಕು ಚಿತ್ರಗಳ ಕಥೆಗಳನ್ನು ಕೇಳಿದ್ದೇನೆ. ಸಂಕ್ರಾಂತಿ ನಂತರ ಹೊಸ ಚಿತ್ರ ಆರಂಭವಾಗಲಿದೆ.ಕ್ರಿಕೆಟ್ ಹಿನ್ನೆಲೆಯ ಸಿನಿಮಾ ಆರಂಭವಾಗಲಿದೆ. ಇದರ ಜೊತೆಗೆ ನಿರ್ಮಾಣ ಸಂಸ್ಥೆ ಆರಂಭಿಸಿ ಹೊಸ ಮಾದರಿಯ ಸಿನಿಮಾ ನಿರ್ಮಾಣ ಮಾಡುವ ಆಸೆ ಇದೆ. ಜೊತೆಗೆ ಒಳ್ಳೆಯ ಕಥೆಗಳು, ಉತ್ತಮ ಬರಹಗಾರರು ,ಮತ್ತು ಪ್ರತಿಭಾನ್ವಿತರನ್ನು ಚಿತ್ರರಂಗಕ್ಕೆ ಪರಿಚಯಿಸಿ ತಮ್ಮ ಜೊತೆ ಆವರೂ ಬೆಳೆಯಬೇಕು ಎನ್ನುವ ಉದ್ದೇಶ ಮತ್ತು ಗುರಿ ನಮ್ಮದು. ಈ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದರು ನಟ ರಾಜ್ ವರ್ಧನ್.