ರಾಕಿಂಗ್ ಸ್ಟಾರ್ ಯಶ್ ಅಭಿನಯದ “ಟಾಕ್ಸಿಕ್” ಚಿತ್ರಕ್ಕೆ ಮುಹೂರ್ತ : ಕ್ಲಾಪ್ ಮಾಡಿದ ಸೆಟ್ ಬಾಯ್

ಕೆಜಿಎಫ್ ಭಾಗ ಸರಣಿಯ ಯಶಸ್ಸಿನ ನಂತರ ದೇಶ, ವಿದೇಶಗಳಲ್ಲಿ ಭಾರಿ ಸದ್ದು ಮಾಡಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ವಲ್ರ್ಡ ಚಿತ್ರ “ಟಾಕ್ಸಿಕ್” ಸೆಟ್ಟೇರಿದೆ. ಈ ಮೂಲಕ ಬಹುದಿನಗಳಿಂದ ಚಾತಕ ಪಕ್ಷಿಯಂತೆ ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ಯಶ್ ಸಿಹಿ ಸುದ್ದಿ ನೀಡಿದ್ದಾರೆ.

ತಮ್ಮ ಹಲವು ಚಿತ್ರಗಳಿಗೆ ಕೆಲಸ ಮಾಡಿರುವ ಸೆಟ್ ಬಾಯ್ ಸುನೀಲ್ ಬಳಿ ಚಿತ್ರಕ್ಕೆ ಕ್ಲಾಪ್ ಮಾಡಿಸುವ ಮೂಲಕ ದೊಡ್ಡತನ ಮೆರದಿದ್ದಾರೆ ರಾಕಿಂಗ್ ಸ್ಟಾರ್ ಯಶ್ ಮತ್ತು ಟಾಕ್ಸಿಕ್ ಚಿತ್ರತಂಡ. ಬಹು ನಿರೀಕ್ಷಿತ ಚಿತ್ರಕ್ಕೆ ಇಂದು ಮುಂಜಾನೆ ಮುಹೂರ್ತ ನಡೆದಿದೆ.

ಗೀತು ಮೋಹನ್ ದಾಸ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರಕ್ಕೆ ಕಳೆದ ಒಂದು ವರ್ಷಕ್ಕೂ ಅಧಿಕ ಸಮಯದಿಂದ ಚಿತ್ರ ಕೆಲಸಗಳು ನಡೆಯುತ್ತಿದ್ದುವ. ಇದೀಗ ಚಿತ್ರ ಸೆಟ್ಟೇರಿದೆ, ಈ ಮೂಲಕ ಯಶ್ ಇಂದು ತಮ್ಮ ಪ್ಯಾನ್ ವಲ್ರ್ಡ್ ಚಿತ್ರ ಟಾಕ್ಸಿಕ್ ಚಿತ್ರದ ಮುಹೂರ್ತ ಸೆಟ್ ಬಾಯ್ ಬಗ್ಗೆ ಕ್ಲ್ಯಾಪ್ ಮಾಡಿಸಿ, ತಂತ್ರಜ್ಞನ ಹಾಗೂ ಕಾರ್ಮಿಕರ ಮೇಲೆ ತಮಗಿರುವ ಗೌರವ ಮತ್ತು ಕಾಳಜಿ ಏನು ಎನ್ನುವುದನ್ನು ನಿರೂಪಿಸಿದ್ದಾರೆ

ಸೆಟ್ ಬಾಯ್ ಬಳಿಕ ಪ್ಯಾನ್ ವಲ್ಡ್ ಚಿತ್ರಕ್ಕೆ ಕ್ಲಾಪ್ ಮಾಡಿಸುವ ಮೂಲಕ ಕನ್ನಡ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲಿ ನಟ ಯಶ್ ಮತ್ತವರ ತಂಡ ಹೊಸ ಭಾಷ್ಯ ಬರೆದಿದೆ

ಎಚ್ ಎಮ್ ಟಿ ಫ್ಯಾಕ್ಟರಿ ಸಿದ್ದವಾಗಿರುವ ಟಾಕ್ಸಿಕ್ ಸೆಟ್ ನಲ್ಲೇ ಮುಹೂರ್ತ ನಡೆದಿದ್ದು ಇಂದಿನಿಂದಲೇ ಚಿತ್ರದ ಚಿತ್ರೀಕರಣ ನಡೆಯಲಿದೆ. ಕೆಜಿಎಫ್ ಚಿತ್ರ ತೆರೆಗೆ ಬಂದು ಮೂರು ವರ್ಷಗಳ ಬಳಿಕ ನಟ ಯಶ್ ಅಭಿನಯದ 19ನೇ ಚಿತ್ರ ಸೆಟ್ಟೇರಿದೆ. ಈ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ಅಡಿ ಕೆ. ವೆಂಕಟ್ ನಾರಾಯಣ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ

ಟಾಕ್ಸಿಕ್ ಶುರು ಮಾಡುವ ಮೊದಲೆ,ಸೂರ್ಯ ಸದಾಶಿವ ರುದ್ರ, ಮಂಜುನಾಥನ ದರ್ಶನ ಪಡೆದು ಬಂದಿರುವ ಯಶ್ ಯಾವುದೇ ಅಡೆ ತಡೆ ಇಲ್ಲದೆ ಚಿತ್ರೀಕರಣ ನೆರವೇಸು ತಂದೆ ಎಂದು ದೇವರಲ್ಲಿ ಪ್ರಾರ್ಥಿಸಿ ಚಿತ್ರದ ಮುಹೂರ್ತ ಆರಂಭಿಸಿದ್ದಾರೆ
