Ronny Trailer Released: The film will hit the screens on September 12

“ರಾನಿ” ಚಿತ್ರದ ಟ್ರೇಲರ್ ಬಿಡುಗಡೆ : ಸೆಪ್ಟೆಂಬರ್ 12 ರಂದು ಚಿತ್ರ ತೆರೆಗೆ - CineNewsKannada.com

“ರಾನಿ” ಚಿತ್ರದ ಟ್ರೇಲರ್ ಬಿಡುಗಡೆ : ಸೆಪ್ಟೆಂಬರ್ 12 ರಂದು ಚಿತ್ರ ತೆರೆಗೆ

ಪ್ರತಿಭಾನ್ವಿತ ನಟ ಕಿರಣ್ ರಾಜ್ ನಾಯಕರಾಗಿ ನಟಿಸಿರುವ “ರಾನಿ” ಟ್ರೇಲರ್ ಟ್ರೆಂಡಿಂಗ್ ನಲ್ಲಿದೆ ಮಾಸ್ ಗೆ ಮಾಸ್, ಕ್ಲಾಸ್ ಗೆ ಕ್ಲಾಸ್ ಎನ್ನುವಂತೆ ರಾನಿ ಟ್ರೇಲರ್ ಇದೆ. ಅದ್ದೂರಿ ಮೇಕಿಂಗ್ ಕಾಣುತ್ತಿದೆ. ಇದೇ ಸೆಪ್ಟೆಂಬರ್ 12 ರಂದು ಚಿತ್ರ ಬಿಡುಗಡೆಯಾಗಲಿದ್ದು ” ರಾನಿ” ಟ್ರೈಲರ್ ಕುತೂಹಲ ಮೂಡಿಸಿದೆ.

“ರಾನಿ”ಸಿನಿಮಾ, ಬಿಡುಗಡೆಗೂ ಮುನ್ನವೇ ಬಾರಿ ಸದ್ದು ಮಾಡುತ್ತಿದೆ. ಟ್ರೇಲರ್ ಪ್ರೇಕ್ಷಕನಲ್ಲಿ ಬಾರಿ ಕುತೂಹಲ ಮೂಡಿಸಿದೆ, ಕಿರಣ್ ರಾಜ್ ಆಕ್ಷನ್, ಲುಕ್, ಬಾಡಿ ಲಾಂಗ್ವೇಜ್, ಡೈಲಾಗ್ ಡೆಲಿವರಿ, ಗುರುತೇಜ್ ಶೆಟ್ಟಿ ಸಂಭಾಷಣೆ, ಸಚಿನ್ ಬಸ್ರೂರು ಹಿನ್ನೆಲೆ ಸಂಗೀತ ಹಾಗೂ ರಾಘವೇಂದ್ರ ಬಿ ಕೋಲಾರ ಕ್ಯಾಮರಾ ವರ್ಕ್ ಎಲ್ಲವೂ ಚೆನ್ನಾಗಿದೆ.

ಸಿನಿಮಾದ ಕ್ವಾಲಿಟಿ ಟ್ರೇಲರ್ ನಲ್ಲಿ ಕಾಣುತ್ತಿದೆ. ಪ್ರತಿ ಸಾರಿಯು ಚಿತ್ರತಂಡ ನಮ್ಮದು ಫ್ಯಾಮಿಲಿ ಆಕ್ಷನ್ ಜಾನರ್ ಸಿನಿಮಾ ಎಂದು ಹೇಳಿಕೊಂಡು ಬಂದಿದೆ ಟ್ರೇಲರ್ ನಲ್ಲೂ ಆ ಅಂಶ ಕಾಣುತ್ತಿದೆ.

ಟ್ರೇಲರ್ ನಂತೆ ಸಿನಿಮಾದಲ್ಲೂ ಪ್ರೇಕ್ಷಕನ ಮನ ಗೆಲ್ಲುತ್ತಾನಾ “ರಾನಿ” ಎಂಬುದನ್ನು ಸೆಪ್ಟೆಂಬರ್ 12 ರ ವರೆಗೆ ಕಾದು ನೋಡಬೇಕಾಗಿದೆ. “ರಾನಿ” ಚಿತ್ರಕ್ಕೆ ಗುರುತೇಜ್ ಶೆಟ್ಟಿ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿದೇಶನ ಮಾಡಿದ್ದಾರೆ. ಸ್ಟಾರ್ ಕ್ರಿಯೇಷನ್ ಬ್ಯಾನರ್ ನಲ್ಲಿ ಚಂದ್ರಕಾಂತ್ ಪೂಜಾರಿ ಉಮೇಶ್ ಹೆಗ್ಡೆ ನಿರ್ಮಾಣ ಮಾಡಿದ್ದಾರೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin