Shooting of Dhanveer Gowda starrer Vamana is completed

ಧನ್ವೀರ್ ಗೌಡ ಅಭಿನಯದ “ವಾಮನ” ಚಿತ್ರೀಕರಣ ಪೂರ್ಣ - CineNewsKannada.com

ಧನ್ವೀರ್ ಗೌಡ ಅಭಿನಯದ “ವಾಮನ” ಚಿತ್ರೀಕರಣ ಪೂರ್ಣ

ಶೋಕ್ದಾರ್ ಧನ್ವೀರ್ ಗೌಡ ನಟಿಸುತ್ತಿರುವ ಬಹುನಿರೀಕ್ಷಿತ ಮಾಸ್ ಎಂಟರ್ಟೈನ್ಮೆಂಟ್ ಸಿನಿಮಾ ‘ವಾಮನ’. ಟೀಸರ್ ಮೂಲಕ ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಂಡಿರುವ ಈ ಚಿತ್ರಕ್ಕೆ ಶಂಕರ್ ರಾಮನ್ ಆಕ್ಷನ್ ಕಟ್ ಹೇಳಿದ್ದಾರೆ. ಧನ್ವೀರ್ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದು, ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ‘ವಾಮನ’ ಸಿನಿಮಾತಂಡ ಇಂಟ್ರೋಡಕ್ಷನ್ ಸಾಂಗ್ ಸೆರೆ ಹಿಡಿಯುವ ಮೂಲಕ ಚಿತ್ರೀಕರಣಕ್ಕೆ ಕುಂಬಳ ಕಾಯಿ ಒಡೆದಿದೆ.

ನಿರ್ದೇಶಕ ಶಂಕರ್ ರಾಮನ್ ಮಾತನಾಡಿ ಇದು ನನ್ನ ಮೊದಲ ಸಿನಿಮಾ. ಹಲವು ಸಿನಿಮಾದಲ್ಲಿ ರೈಟರ್ ಆಗಿ ಕೆಲಸ ಮಾಡಿದ್ದೇನೆ. ‘ವಾಮನ’ ಸಿನಿಮಾ ಸತತ ಒಂದು ವರ್ಷದ ಜರ್ನಿ. ಇವತ್ತು ಹೀರೋ ಇಂಟ್ರೋಡಕ್ಷನ್ ಸಾಂಗ್ ಸೆರೆ ಹಿಡಿಯಲಾಗ್ತಿದೆ ಈ ಮೂಲಕ ಚಿತ್ರೀಕರಣಕ್ಕೆ ಕುಂಬಳ ಕಾಯಿ ಒಡೆಯುತ್ತಿದ್ದೇವೆ. 72 ದಿನಗಳ ಕಾಲ ಶೂಟ್ ಮಾಡಿದ್ದೇವೆ. ಕಲಾವಿದರು, ತಾಂತ್ರಿಕ ಬಳಗ ತುಂಬಾ ಸಪೋರ್ಟಿವ್ ಆಗಿದ್ದಾರೆ.ಪಕ್ಕಾ ಕಮರ್ಶಿಯಲ್ ಸಿನಿಮಾವಿದು. ಪ್ರತಿಯೊಬ್ಬನಲ್ಲೂ ಒಬ್ಬ ಒಳ್ಳೆಯವನು ಕೆಟ್ಟವನು ಇರ್ತಾನೆ. ಒಳ್ಳೆಯವನಾಗಬೇಕಾ.. ಕೆಟ್ಟವನಾಗಬೇಕಾ ಎನ್ನೋದನ್ನು ನಾವೇ ಆಯ್ಕೆ ಮಾಡಿಕೊಳ್ಳಬೇಕು. ಒಳ್ಳೆಯವನು, ಕೆಟ್ಟದರ ನಡುವಿನಲ್ಲಿ ಭಿನ್ನತೆಯಲ್ಲಿ ಆತ ಯಾರೇ ಆಗಿದ್ರು ಆತನಿಗೆ ಸಲ್ಲಬೇಕಾದ ಶಿಕ್ಷೆ ಅಥವಾ ಸೆಟಲ್ ಮೆಂಟ್ ಸಿಕ್ಕೇ ಸಿಗುತ್ತೆ ಅನ್ನೋದನ್ನು ಇಟ್ಟುಕೊಂಡು ಕಥೆ ಹೆಣೆಯಲಾಗಿದೆ. ಈ ಸಿನಿಮಾವನ್ನು ಇಲ್ಲಿವರೆಗೆ ಸುಸೂತ್ರವಾಗಿ ನಡೆಸಿಕೊಂಡು ಬರಲು ಸಾಧ್ಯವಾಗಿದ್ದು ನಿರ್ಮಾಪಕ ಚೇತನ್ ಗೌಡ ಅವರ ಸಹಕಾರದಿಂದ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಚಿತ್ರದಲ್ಲಿ ನಾಲ್ಕು ಸಾಂಗ್, ನಾಲ್ಕು ಫೈಟ್ ಇದೆ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ್ರು.

ನಟ ಧನ್ವೀರ್ ಗೌಡ ಮಾತನಾಡಿ ಇವತ್ತು ಚಿತ್ರೀಕರಣ ಕಂಪ್ಲೀಟ್ ಆಗುತ್ತಿದೆ. ಒಂದೊಳ್ಳೆ ಕಂಟೆಂಟ್, ಕಥೆ ಇಟ್ಕೊಂಡು, ಒಂದೊಳ್ಳೆ ತಂಡದ ಜೊತೆ, ನಿರ್ಮಾಣ ಸಂಸ್ಥೆ ಜೊತೆ ಕೆಲಸ ಮಾಡಿದ್ದು ತುಂಬಾ ಖುಷಿ ಇದೆ. ಈ ಕಥೆ ಮೂಲಕ ಕರ್ನಾಟಕ ಜನತೆಯನ್ನು ರಂಜಿಸಲು ಬರ್ತಿದ್ದೇವೆ. ಚಿತ್ರದಲ್ಲಿ ಗುಣ ಪಾತ್ರ ಮಾಡಿದ್ದೇನೆ. ಗ್ರೇ ಶೇಡ್ ಪಾತ್ರ. ಬ್ಯಾಡ್ ಬಾಯ್ ಅಲ್ಲ, ಗುಡ್ ಬಾಯ್ ಕೂಡ ಅಲ್ಲ ಆ ರೀತಿಯ ಪಾತ್ರ. ಇದು ನನ್ನ ಮೂರನೇ ಸಿನಿಮಾ ಎಲ್ಲರ ಆಶೀರ್ವಾದ ಈ ಸಿನಿಮಾ ಮೇಲೆ ಇರಲಿ ಎಂದು ತಿಳಿಸಿದ್ರು.

ನಿರ್ಮಾಪಕ ಚೇತನ್ ಗೌಡ ಮಾತನಾಡಿ ಈದು ಈಕ್ವಿನಾಕ್ಸ್ ಗ್ಲೋಬಲ್ ಎಂಟರ್ಟೈನ್ಮೆಂಟ್ ನ ಮೊದಲ ಸಿನಿಮಾ. ಸತತ 72 ದಿನಗಳ ಚಿತ್ರೀಕರಣ ಇಂದು ಮುಕ್ತಾಯಗೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಕೂಡ ನಡೆಯುತ್ತಿದೆ. ಒಂದೊಳ್ಳೆ ಸಿನಿಮಾ ಮಾಡಿದ್ದೇವೆ. ಸದ್ಯದಲ್ಲೇ ರಿಲೀಸ್ ಡೇಟ್ ಅನೌನ್ಸ್ ಮಾಡುವ ಮೂಲಕ ಪ್ರಚಾರ ಕಾರ್ಯ ಆರಂಭಿಸಲಿದ್ದೇವೆ ಎಂದು ತಿಳಿಸಿದ್ರು.ಈಕ್ವಿನಾಕ್ಸ್ ಗ್ಲೋಬಲ್ ಎಂಟರ್ಟೈನ್ಮೆಂಟ್ ಬ್ಯಾನರ್ ನಡಿ ಚೇತನ್ ಗೌಡ ‘ವಾಮನ’ ಸಿನಿಮಾವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.

ಲವ್ ಸ್ಟೋರಿ ಜೊತೆಗೆ ಔಟ್ ಅಂಡ್ ಔಟ್ ಆಕ್ಷನ್ ಕಮರ್ಶಿಯಲ್ ಸಿನಿಮಾವಾಗಿರುವ ವಾಮನದಲ್ಲಿ ಸಂಪತ್, ಆದಿತ್ಯ ಮೆನನ್, ಅಚ್ಯುತ್ ಕುಮಾರ್, ಅವಿನಾಶ್, ತಾರಾ, ಶಿವರಾಜ್. ಕೆ. ಆರ್. ಪೇಟೆ, ಪೆಟ್ರೋಲ್ ಪ್ರಸನ್ನ, ಕಾಕ್ರೋಚ್ ಸುದಿ, ಜ್ಯೂನಿಯರ್ ಸಲಗ ಶ್ರೀಧರ್, ಸಚ್ಚಿತಾನಂದ, ಅರುಣ್ ಒಳಗೊಂಡ ದೊಡ್ಡ ತಾರಾಬಳಗವಿದೆ. ಬಿ.ಅಜನೀಶ್ ಲೋಕನಾಥ್ ಸಂಗೀತ, ಮಹೇಂದ್ರ ಸಿಂಹ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಅರ್ಜುನ್ ರಾಜು, ವಿಕ್ರಮ್ ಮೋರ್ ಮತ್ತು ಜಾಲಿ ಬಾಸ್ಟಿನ್ ಆಕ್ಷನ್, ನವೀನ್ ಕಲಾ ನಿರ್ದೇಶನ ಚಿತ್ರಕ್ಕಿದೆ. ನೃತ್ಯ ನಿರ್ದೇಶಕ ಭೂಷಣ್ ನೃತ್ಯ ಸಂಯೋಜನೆ ಜೊತೆಗೆ ದನ್ವೀರ್ ಸ್ನೇಹಿತನ ಪಾತ್ರದಲ್ಲೂ ಸಹ ಮಿಂಚಲಿದ್ದಾರೆ.

ಪೂರ್ತಿಯಾಗಿ ಓದಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin