“ಮರಳಿ ಮನಸಾಗಿದೆ” ಹಾಡುಗಳ ಅನಾವರಣ
ಕನ್ನಡಕ್ಕೆ ಹೊಸ ಹೊಸ ಕಲಾವಿದರು, ಕಥೆಗಳು, ಕಟೆಂಟು ಸಿನಿಮಾಗಳು ಹೊರಬರುತ್ತಿವೆ. ಸಂಗೀತ ಪ್ರಧಾನ ಚಿತ್ರ ” ಮರಳಿ ಮನಸಾಗಿದೆ” ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದು ಕುತೂಹಲ ಕೆರಳಿಸಿದೆ. ಮಾಜಿ ಉಪ ಮುಖ್ಯಮಂತ್ರಿ ಹಾಗು ಹಾಲಿ ಶಾಸಕ ಡಾ. ಸಿಎನ್ ಅಶ್ವಥ್ ನಾರಾಯಣ್ ಹಾಡು ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದ್ದಾರೆ

ಬೆನಕ ಟಾಕೀಸ್ ಲಾಂಛನದಲ್ಲಿ ಮುದೇಗೌಡ್ರು ನವೀನ್ ಕುಮಾರ್ ಆರ್ ಓ ಹಾಗೂ ತೆಲಿಗಿ ಮಲ್ಲಿಕಾರ್ಜುನಪ್ಪ ನಿರ್ಮಿಸಿರುವ, ನಾಗರಾಜ್ ಶಂಕರ್ ನಿರ್ದೇಶನದಲ್ಲಿ ಅರ್ಜುನ್ ವೇದಾಂತ್ ನಾಯಕರಾಗಿ ನಟಿಸಿರುವ “ಮರಳಿ ಮನಸಾಗಿದೆ” ಚಿತ್ರಕ್ಕೆ. ವಿನು ಮನಸು ಸಂಗೀತವಿದೆ

ನಿರ್ದೇಶಕ ನಾಗರಾಜ್ ಶಂಕರ್ ಮಾತನಾಡಿ ಇದೊಂದು ಸಂಗೀತ ಪ್ರಧಾನ ಚಿತ್ರ. ವಿನು ಮನಸು ಸಂಗೀತ ನೀಡಿರುವ ಸುಮಧುರ ಹಾಡುಗಳು ಈ ಚಿತ್ರದಲ್ಲಿದೆ. ಆ ಪೈಕಿ “ಎದುರಿಗೆ ಬಂದರೆ ಹೃದಯಕೆ ತೊಂದರೆ” ಎಂಬ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಆಶಿತ್ ಸುಬ್ರಹ್ಮಣ್ಯ ಹಾಗೂ ಶ್ರೀನಿಧಿ ಬರೆದಿರುವ ಈ ಹಾಡನ್ನು ಸಂತೋಷ್ ವೆಂಕಿ ಹಾಡಿದ್ದಾರೆ. ಇನ್ನು ಇದೊಂದು ಯುವಜನತೆಗೆ ಹತ್ತಿರವಾದ ಚಿತ್ರದ ಜೊತೆಗೆ ಸಂಬಂಧಗಳ ಮೌಲ್ಯಗಳನ್ನು ತಿಳಿಸುವ ಚಿತ್ರವೂ ಹೌದು ಎಂದು ಮಾಹಿತಿ ನೀಡಿದರು
ಇದರೊಟ್ಟಿಗೆ ಮೆಡಿಕಲ್ ಗೆ ಸಂಬಂಧಿಸಿದ ವಿಷಯ ಸಹ ಇದೆ. ಇದು ನಟ ಉಪೇಂದ್ರ ಅವರು ಹೇಳಿದ ಹಾಗೆ 2ಡಿ ಸಿನಿಮಾ ಎನ್ನಬಹುದು. ಇಂಟರ್ ವೆಲ್ ಗೆ ಮುಂಚೆ ಒಂದು ಸಿನಿಮಾ. ಇಂಟರ್ ವೆಲ್ ನಂತರ ಮತ್ತೊಂದು ಸಿನಿಮಾ ಇರುತ್ತದೆ. ಎರಡು ಕಿರುಚಿತ್ರಗಳನ್ನು ನಿರ್ದೇಶಿಸಿರುವ ನನಗೆ ಹಿರಿತೆರೆಯಲ್ಲಿ ಇದು ಮೊದಲ ಚಿತ್ರ ಎಂದು ತಿಳಿಸಿದರು.
ನಿರ್ಮಾಪಕ ಮುದೇಗೌಡ ನವೀನ್ ಕುಮಾರ್ ಆರ್. ಓ ಮಾತನಾಡಿ ದಾವಣಗೆರೆಯಲ್ಲೇ ಈ ಚಿತ್ರದ ಚಿತ್ರೀಕರಣ ಆರಂಭವಾಗಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಚಿತ್ರೀಕರಣ ನಡೆದಿದೆ. ಇನ್ನೂ ನನಗೆ ನಿರ್ಮಾಣ ಮಾಡಲು ಹುರಿದುಂಬಿಸಿದವರು ತೆಲಿಗಿ ಮಲ್ಲಿಕಾರ್ಜುನಪ್ಪ ಈ ಸಂದರ್ಭದಲ್ಲಿ ಅವರಿಗೆ ಹಾಗೂ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ. ಇದೇ 23 ರಂದು ಕಲ್ಬುರ್ಗಿಯಲ್ಲಿ ಎರಡನೇ ಹಾಡಿನ ಅನಾವರಣವಾಗಲಿದೆ. ಉಳಿದ ಹಾಡುಗಳನ್ನು ಬೇರೆ ಬೇರೆ ಊರುಗಳಲ್ಲಿ ಬಿಡುಗಡೆ ಮಾಡುವ ಯೋಚನೆ ಇದೆ ಎಂದರು.

ನಾಯಕ ಅರ್ಜುನ್ ವೇದಾಂತ್ ಮಾತನಾಡಿ, ಈಗಿನ ಪರಿಸ್ಥಿತಿಯಲ್ಲಿ ಚಿತ್ರ ನಿರ್ಮಾಣ ಮಾಡಲು ಮುಂದೆ ಬರುವವರೆ ಸಂಖ್ಯೆ ವಿರಳ. ಹಾಗಾಗಿ ನಮ್ಮ ಚಿತ್ರದ ನಿರ್ಮಾಪಕರಿಗೆ ಮೊದಲು ಧನ್ಯವಾದ. ಇನ್ನೂ ನಿರ್ದೇಶಕರು ಮೊದಲ ಸಲ ಕಥೆ ಹೇಳಿದಾಗಲೇ ನನಗೆ ಬಹಳ ಇಷ್ಟವಾಯಿತು. ಚಿತ್ರದ ಪ್ರಮೋಷನ್ ಆರಂಭವಾಗಿದೆ. ಕರ್ನಾಟಕದ ಎಲ್ಲೆಡೆ ನಮ್ಮ ಚಿತ್ರದ ಬಗ್ಗೆ ಪ್ರಚಾರ ಮಾಡುತ್ತೇವೆ. ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಮನೋಜ್. ಜನರು ಕೊಟ್ಟ ದುಡ್ಡಿಗೆ ಬೇಸರವಾಗದಂತಹ ಪರಿಶುದ್ಧ ಮನೋರಂಜನೆಯುಳ್ಳ ಚಿತ್ರ ನಮ್ಮದು ಎಂದರು.

ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ನಿರೀಕ್ಷಾ ಶೆಟ್ಟಿ ಹಾಗೂ ಸ್ಮೃತಿ ವೆಂಕಟೇಶ್. ಆ ಪೈಕಿ ಸಮಾರಂಭ ಉಪಸ್ಥಿತರಿದ್ದ ಸ್ಮೃತಿ ತಮ್ಮ ಪಾತ್ರದ ಬಗ್ಗೆ ಹೇಳಿದರು. ಕಲಾವಿದರಾದ ರಘು ಸಿರುಂಡೆ, ಸಂಗೀತ ಚಿತ್ರದ ಕುರಿತು ಮಾತನಾಡಿದರು. ಸಂಗೀತದ ಬಗ್ಗೆ ವಿನು ಮನಸು ಮಾಹಿತಿ ನೀಡಿದರು. ಛಾಯಾಗ್ರಾಹಕ ಹಾಲೇಶ್, ಸಂಕಲನಕಾರ ಹರೀಶ್ ಕೊಮ್ಮೆ ಹಾಗೂ ವಿಜಯ್ ಕುಮಾರ್ ಮಾಹಿತಿ ಹಂಚಿಕೊಂಡರು

