"Sri Jaganmate Akkamahadevi" has completed the shooting of the songs.

ಹಾಡುಗಳ ಚಿತ್ರೀಕರಣ ಮುಗಿಸಿದ ” ಶ್ರೀ ಜಗನ್ಮಾತೆ ಅಕ್ಕಮಹಾದೇವಿ” - CineNewsKannada.com

ಹಾಡುಗಳ ಚಿತ್ರೀಕರಣ ಮುಗಿಸಿದ ” ಶ್ರೀ ಜಗನ್ಮಾತೆ ಅಕ್ಕಮಹಾದೇವಿ”

“ಶ್ರೀ ಜಗನ್ಮಾತೆ ಅಕ್ಕಮಹಾದೇವಿ’ ಚಿತ್ರತಂಡ ಹಾಡುಗಳ ಚಿತ್ರೀಕರಣ ಪೂರ್ಣಗೊಳಿಸಿ ಮುಂದಿನ ಕೆಲಸ ಕಾರ್ಯಗಳಿಗೆ ಅಣಿಯಾಗಿದೆ.

ಭರತ್ ಸಿನಿ ಕ್ರಿಯೇಶನ್ಸ್ ಲಾಂಛನದಲ್ಲಿ ಸಿದ್ದವಾಗುತ್ತಿರುವ ” ಶ್ರೀ ಜಗನ್ಮಾತೆ ಅಕ್ಕ ಮಹಾದೇವಿ” ಚಿತ್ರದ ಮೂರು ಹಾಡುಗಳನ್ನು ವಿಷ್ಣುಕಾಂತ್-ಸುರಕ್ಷಾ ಅಭಿನಯದಲ್ಲಿ ಗುಲ್ಬರ್ಗಾ, ಬೀದರ್, ಶ್ರೀಶೈಲ ಹಾಗೂ ಕಾಡು ಗುಡ್ಡದ ಸರೋವರ ಜಲಪಾತಗಳಲ್ಲಿ ಚಿತ್ರೀಕರಣ ಮುಗಿಸಿದೆ.ಬಾಕಿ ವಚನಗಳ ದೃಶ್ಯಗಳನ್ನು ಸೆರೆಹಿಡಿಯಬೇಕಾಗಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಹಿರಿಯ ತಂತ್ರಜ್ಞ ವಿಷ್ಣುಕಾಂತ್.ಬಿ.ಜೆ ನಿರ್ಮಾಣ, ನಿರ್ದೇಶನ ಜತೆಗೆ ಮಹತ್ವದ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಸುಮಾರು 900 ವರ್ಷಗಳ ಹಿಂದೆ ನಡೆದ ಅಕ್ಕಮಹಾದೇವಿ ಕಥೆಯನ್ನು ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಶ್ರೀ ಬಸವಣ್ಣ ಮತ್ತು ಅಕ್ಕಮಹಾದೇವಿ ಬರೆದಿರುವ 21 ವಚನಗಳನ್ನು ಬಳಸಿಕೊಂಡು ನಿರ್ದೇಶಕರು ಮೂರು ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ.

ಆರ್.ಪಳನಿಸೇನಾಪತಿ ಸಂಗೀತ ಸಾರಥ್ಯದಲ್ಲಿ ಲೈವ್ ವಾದ್ಯಗಳೊಂದಿಗೆ ಧ್ವನಿಗ್ರಹಣ ನಡೆಸಿರುವುದು ವಿಶೇಷ. ತಾರಾಗಣದಲ್ಲಿ ಭವ್ಯ, ಶ್ವೇತಾ, ಬಿರಾದಾರ್, ಡಾ.ಹೆಲನ್. ಪಲ್ಲಕ್ಕಿ ರಾಧಾಕೃಷ್ಣ, ತಬಲಾನಾಣಿ, ಸುಚೇಂದ್ರಪ್ರಸಾದ್, ಎಂ.ಪಾಟೀಲ್ ಮುಂತಾದವರು ನಟಿಸುತ್ತಿದ್ದಾರೆ. ಛಾಯಾಗ್ರಹಣ ರವಿಸುವರ್ಣ, ನೃತ್ಯ ಮದನ್‌ ಹರಿಣಿ, ಸಂಕಲನ ಅಮಿತ್‌ಜವಳಕರ ಅವರದಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin