Star actors join forces for the release of the trailer of the border love story “Elumale”

ಗಡಿನಾಡ ಪ್ರೇಮಕಥೆಯ “ಏಳುಮಲೆ” ಟ್ರೇಲರ್ ಬಿಡುಗಡೆಗೆ ತಾರಾ ನಟರ ಬಲ - CineNewsKannada.com

ಗಡಿನಾಡ ಪ್ರೇಮಕಥೆಯ “ಏಳುಮಲೆ” ಟ್ರೇಲರ್ ಬಿಡುಗಡೆಗೆ ತಾರಾ ನಟರ ಬಲ

ಕಾಟೇರ ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ತರುಣ್ ಸುಧೀರ್ ನಿರ್ಮಾಣದ “ಎಳುಮಲೈ” ಚಿತ್ರ ಸೆಪ್ಟಂಬರ್ 5 ರಂದು ಬಿಡುಗಡೆಗೆ ಸಜ್ಜಾಗಿದೆ, ಈ ನಡುವೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಗಡಿ ಭಾಗ ಪ್ರೇಮಕಥೆ ಹೊಂದಿರುವ ಎಳುಮಲೆ ಚಿತ್ರಕ್ಕೆ ತಾರಾ ನಟರಾದ ಡಾಲಿ ಧನಂಜಯ, ಶರಣ್, ನವೀನ್ ಶಂಕರ್ ಸಾಥ್ ನೀಡಿದ್ದು ಚಿತ್ರದ ಬಗೆಗಿನ ಕುತೂಹಲ ಮತ್ತಷ್ಟು ಹೆಚ್ಚು ಮಾಡಿದೆ

ಕರ್ನಾಟಕ – ತಮಿಳುನಾಡು ಗಡಿಭಾಗದ ಪ್ರೇಮಕಥೆಯ ತಿರುವ ಹೊಂದಿರುವ “ಏಳುಮಲೆ” ಚಿತ್ರದಲ್ಲಿ ಏಕ್ ಲವ್ ಯಾ ಚಿತ್ರ ಬಳಿಕ ನಟ ರಾಣಾ ಎರಡನೇ ಬಾರಿಗೆ ನಾಯಕನಾಗಿ ಕಾಣಿಸಿಕೊಂಡಿರುವ ಚಿತ್ರ ಇದು. ಜೊತೆಗೆ ಖಾಸಗೀ ವಾಹಿನಿಯಲ್ಲಿ ಮೂಡಿ ಬಂದ ಮಹಾನಟಿ ವಿಜೇತ ಪ್ರಿಯಾಂಕ ಆಚಾರ್ ಚಿತ್ರಕ್ಕೆ ನಾಯಕಿ. ಈಕೆಗೆ ಇದು ಮೊದಲ ಚಿತ್ರ.

ಆಕ್ಷನ್, ಎಮೋಷನ್, ಒಂದೊಳ್ಳೆ ಲವ್ ಸ್ಟೋರಿ ಜೊತೆಗೆ ಥ್ರಿಲ್ಲಿಂಗ್ ಅಂಶಗಳನ್ನು ಹದಗೊಳಿಸಿ ಟ್ರೈಲರ್ ಕಟ್ ಮಾಡಿದ್ದು ಪ್ರೇಕ್ಷಕರನ್ನು ನಿರಾಸೆ ಮೂಡಿಸುವುದಿಲ್ಲ ಎನ್ನುವ ನಂಬಿಕೆ ಚಿತ್ರತಂಡದ್ದು

ನಿರ್ದೇಶಕ- ನಿರ್ಮಾಪಕ ತರುಣ್ ಸುಧೀರ್ ಜೊತೆಯಲ್ಲಿ ಕೆಲಸ ಮಾಡಿದ ಪುನೀತ್ ರಂಗಸ್ವಾಮಿಗೆ ಮೊದಲ ಬಾರಿಗೆ ನಿರ್ದೇಶನ ಮಾಡುವ ಅವಕಾಶ ನೀಡಲಾಗಿದೆ. ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದ ಚಿತ್ರದ ಬಗೆಗೆ ಇರುವ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ

ನಟ ಡಾಲಿ ಧನಂಜಯ್ ಮಾತನಾಡಿ, ಏಳುಮಲೆ ಟೀಸರ್ ನೋಡಿದಾಗಿನಿಂದಲೂ ಚಿತ್ರದ ಬಗ್ಗೆ ಆಕರ್ಷಿತನಾಗಿದ್ದೆ. ಶ್ರದ್ಧೆ ಮತ್ತು ಕಥೆಗೆ ಒತ್ತು ನೀಡುವ ಯಾವುದೇ ಸಿನಿಮಾ ಸೋತಿಲ್ಲ. ಪ್ರಾಮಾಣಿಕತೆಯೇ ಈ ಸಿನಿಮಾ ಗೆಲ್ಲಿಸುತ್ತದೆ ಎಂಬ ನಂಬಿಕೆ ಇದೆ. ಸಿನಿಮಾವನ್ನೇ ನಂಬಿಕೆಕೊಂಡು ಸಿನಿಮಾದಿಂದ ದುಡಿದು ಮತ್ತೆ ಸಿನಿಮಾ ಮಾಡುವುದು ಸವಾಲು. ಸಿನಿಮಾದಲ್ಲಿ ಕನಸು ಮಾತ್ರ ತೋರಿಸಲಾಗುತ್ತದೆ. ಅದಕ್ಕಾಗಿ ಫ್ಯಾಷನ್, ರಿಸ್ಕ್ ತೆಗೆದುಕೊಳ್ಳಬೇಕು. ಅದನ್ನು ತರುಣ್ ಮಾಡುತ್ತಿದ್ದಾರೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು.

ನಟ ಶರಣ್ ಮಾತನಾಡಿ, ನಿರ್ದೇಶಕ ತರುಣ್ ನನ್ನ ಸಿನಿಮಾಗಳ ಕಥೆ ಆಯ್ಕೆ ಮಾಡುತ್ತಾರೆ. ಏಳುಮಲೆ ಟ್ರೇಲರ್ ನೋಡಿದರೆ ಸಿನಿಮಾ ನೋಡ್ಲೇಬೇಕು ಎನಿಸುತ್ತದೆ. ಕಂಟೆಂಟ್ ಸಿನಿಮಾ. ದೊಡ್ಡ ಹಿಟ್ ಆಗಲಿದೆ ಎಂಬ ನಂಬಿಕೆ ಇದೆ ಎಂದು ಭವಿಷ್ಯ ನುಡಿದರು

ನಟ ನವೀನ್ ಶಂಕರ್ ಮಾತನಾಡಿ, ಟ್ರೇಲರ್ ಬಹಳ ಚೆಂದ ಇದೆ. ಪೆÇೀಸ್ಟರ್, ಟೀಸರ್ ನೋಡಿದಲೂ ಇಷ್ಟವಾಗಿತ್ತು. ಇಂಟೆನ್ಸ್ ಎಮೋಷನ್, ಮುದ್ದಾದ ಜೋಡಿ, ಹೋರಾಟದ ಜರ್ನಿ, ಒಳ್ಳೊಳ್ಳೆ ನಟರು, ಒಳ್ಳೆ ಮ್ಯೂಸಿಕ್ ಇದೆ. ನಮ್ಮ ಟೂರಿಸ್ಟ್ ನ ಟ್ಯಾಗ್ ಲೈನ್ ಒಂದು ರಾಜ್ಯ , ಹಲವು ಜಗತ್ತು. ಈ ಸಿನಿಮಾದಲ್ಲಿ ನೀವು ಇನ್ನೊಂದು ಜಗತ್ತು ನೋಡುತ್ತೀರಾ. ಎಲ್ಲಾ ಭಾಗದ ಕಥೆಗಳು ತೆರೆಗೆ ಬರಬೇಕು. ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದರು.

ನಿರ್ಮಾಪಕ ತರುಣ್ ಸುಧೀರ್ ಮಾತನಾಡಿ,ನಿರ್ದೇಶಕನಾಗಿ ನನಗೆ ಏನೂ ದುಡಿಮೆ ಬರುತ್ತದೆ ಅದನ್ನು ಇಟ್ಕೊಂಡು ಸಿನಿಮಾ ಮಾಡುತ್ತೇನೆ. ಅದಕ್ಕೆ ಅಟ್ಲಾಂಟಾ ನಾಗೇಂದ್ರ ನೈತಿಕ ಬೆಂಬಲವಾಗಿ ನಿಲ್ಲುತ್ತಾರೆ. ತುಂಬಾ ಶ್ರಮ ಹಾಕಿ ಸಿನಿಮಾ ಮಾಡಿದ್ದೇವೆ. ಎಲ್ಲರೂ ಪ್ರೀತಿಯಿಂದ ಚಿತ್ರ ಮಾಡಿದ್ದಾರೆ. ಇದು ಪುನೀತ್ ಸಿನಿಮಾ. ಏಳುಮಲೆ ಪ್ರೀತಿಯೇ ಪರಮ ಶ್ರೇಷ್ಠ ಎಂದು ಹೇಳುತ್ತದೆ. ಥ್ರಿಲ್ಲರ್ ಮೂಲಕ ಹೇಳುತ್ತಿದ್ದೇವೆ. ಪ್ರೇಕ್ಷಕರನ್ನು ನಿರಾಸೆ ಮೂಡಿಸುವುದಿಲ್ಲ ಎನ್ನುವ ಭರವಸೆ ನೀಡಿದರು

ನಟಿ ರಕ್ಷಿತಾ ಸಹೋದರ ರಾಣಾ ನಾಯಕನಾಗಿ, ಮಹಾನಟಿ ಖ್ಯಾತಿಯ ಪ್ರಿಯಾಂಕಾ ಆಚಾರ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಜಗಪತಿ ಬಾಬು, ನಾಗಾಭರಣ, ಕಿಶೋರ್ ಕುಮಾರ್, ಸರ್ದಾರ್ ಸತ್ಯ, ಜಗಪ್ಪ ಏಳುಮಲೆಯ ಭಾಗವಾಗಿದ್ದಾರೆ.

ಕರ್ನಾಟಕ – ತಮಿಳುನಾಡು ನಡುವಿನ ಗಡಿಭಾಗದ ಪ್ರೇಮಕಥೆ ಹೊಂದಿರುವ ಚಿತ್ರಕ್ಕೆ ತರುಣ್ ಕಿಶೋರ್ ಸುಧೀರ್ ಬಂಡವಾಳ ಹೂಡಿದ್ದಾರೆ. ಅಟ್ಲಾಂಟಾ ನಾಗೇಂದ್ರ ಸಹ ನಿರ್ಮಾಪಕರಾಗಿ ಜೊತೆಯಾಗಿ ನಿಂತಿದ್ದಾರೆ. ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ನಾಗಾರ್ಜುನ ಶರ್ಮಾ ಸಾಹಿತ್ಯ ಹಾಗೂ ಪುನೀತ್ ರಂಗಸ್ವಾಮಿ ಸಂಭಾಷಣೆ, ಡಿ.ಇಮ್ಮಾನ್ ಸಂಗೀತ ಸಿನಿಮಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin