"Su From So..." quietly completes shooting: Raj B Shetty invests in innovative content for the film

“ಸು ಫ್ರಮ್ ಸೋ…” ಸದ್ದಿಲ್ಲದೆ ಚಿತ್ರೀಕರಣ ಪೂರ್ಣ: ಹೊಸತನದ ಕಂಟೆಂಟು ಸಿನಿಮಾಗೆ ರಾಜ್ ಬಿ ಶೆಟ್ಟಿ ಬಂಡವಾಳ - CineNewsKannada.com

“ಸು ಫ್ರಮ್ ಸೋ…” ಸದ್ದಿಲ್ಲದೆ ಚಿತ್ರೀಕರಣ ಪೂರ್ಣ: ಹೊಸತನದ ಕಂಟೆಂಟು ಸಿನಿಮಾಗೆ ರಾಜ್ ಬಿ ಶೆಟ್ಟಿ ಬಂಡವಾಳ

ವಿಭಿನ್ನ ಕಥಾ ಹಂದರದ “ಟೋಬಿ” ಚಿತ್ರದ ಬಳಿಕ ನಟ
ರಾಜ್ ಬಿ ಶೆಟ್ಟಿ ಅವರ ಲೈಟರ್ ಬುದ್ಧ ಫಿಲಂಸ್ ನಿರ್ಮಾಣ ಸಂಸ್ಥೆ ಸದ್ದಿಲ್ಲದೆ ” ಸು ಫ್ರಮ್ ಸೋ” ಚಿತ್ರೀಕರಣ ಪೂರ್ಣಗೊಂಡಿದ್ದು ಬಿಡುಗಡೆಯ ಹಂತಕ್ಕೆ ಬಂದಿದೆ

ಮಂಗಳೂರು ಸುತ್ತಮುತ್ತಲಿನ ಊರಾದ ವೇಣೂರು , ಕಕ್ಯಪದವು ಹಾಗು ಇತರ ಕಡೆ ಸಿನಿಮಾ 50 ದಿನಗಳ ಕಾಲ ಚಿತ್ರಕರಣ ಮಾಡಲಾಗಿದ್ದು ಎಲ್ಲಾ ಅಂದುಕೊಂಡಂತೆ ಆದರೆ ಜುಲೈ 25ರಂದು ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನ ಕಾಣಲು ಸಿದ್ದತೆ ನಡೆಸಿದೆ.

ಚಿತ್ರದ ಬಿಡುಗಡೆಗೆ ಸಜ್ಜಾಗಿರುವ ಹಿನ್ನೆಲೆಯಲ್ಲಿ ಸಿನಿಮಾದ “ಡ್ಯಾಂಕ್ಸ್ ಅಂಥಮ್” ವಿಡಿಯೋ ಸಾಂಗ್ ಬಿಡುಗಡೆ ಆಗಿ ಜನರ ಮನ ಸೆಳೆಯುತ್ತಿದೆ. ಎಲ್ಲಾ ಪಾರ್ಟಿ ಹಾಗು ಇತರೆ ಕಾರ್ಯಕ್ರಮದಲ್ಲಿ ಹಾಡು ಕೇಳಿ ಬರುವುದು ಪಕ್ಕಾ ಆಗಿದೆ.ಈ ಹಾಡಿಗೆ ಸಾಹಿತ್ಯ ರಾಜ್ ಬಿ ಶೆಟ್ಟಿ ಅವರದ್ದು ಅನುರಾಗ್ ಕುಲಕರ್ಣಿ ಸೊಗಸಾಗಿ ಹಾಡಿದ್ದಾರೆ ಹಾಗು ಸುಮೇಧ್ ಕೆ ಉತ್ತಮ ಸಂಗೀತ ನೀಡಿದ್ದಾರೆ..ನೃತ್ಯ ಸಂಯ್ಯೋಜನೆಯನ್ನು ವಿನಾಯಕ ಆಚಾರ್ಯ ಮಾಡಿದ್ದಾರೆ.

ಹಾಡಿನಲ್ಲಿ ಜೆಪಿ ತುಮಿನಾಡು,ಶನೀಲ್ ಗೌತಮ್,ಪ್ರಕಾಶ್ ಕೆ ತುಮಿನಾಡು,ದೀಪಕ್ ರೈ ಪಣಜೆ, ಮೈಮ್ ರಾಮದಾಸ್,ಅರ್ಜುನ್ ಕಜೆ, ಹಾಗೂ ಇತರರು ಹೆಜ್ಜೆ ಹಾಕಿದ್ದಾರೆ
“ಸು ಫ್ರಮ್ ಸೋ” ಸಿನಿಮಾವನ್ನು ಜೆಪಿ ತುಮಿನಾಡು ನಟಿಸಿ ಮೊಟ್ಟ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಛಾಯಾಗ್ರಾಹಕರಾಗಿ ಎಸ್ ಚಂದ್ರಸೆಕರನ್ ಕಾರ್ಯ ನಿರ್ವಹಿಸಿದ್ದಾರೆ.

ಸಿನಿಮಾವನ್ನು ಶಶಿಧರ್ ಶೆಟ್ಟಿ ಬರೋಡಾ, ರವಿ ರೈ ಕಳಸ, ರಾಜ್ ಬಿ ಶೆಟ್ಟಿ ಮೂವರು ಸೇರಿ ಅದ್ದೂರಿ ಯಾಗಿ ನಿರ್ಮಿಸಿದ್ದಾರೆ.. ಸಂದೀಪ್ ತುಳಸಿದಾಸ್ ಹಿನ್ನೆಲೆ ಸಂಗೀತ ಇರುವ ಈ ಚಿತ್ರಕ್ಕಿದೆ ಅರ್ಜುನ್ ರಾಜ್ ಸಾಹಸ ಸಂಯೋಜನೆ ಮಾಡಿದ್ದಾರೆ.

ಚಿತ್ರದ ಕುರಿತು ಮಾಹಿತಿ‌ ಹಂಚಿಕೊಂಡ ಕಾರ್ಯಕಾರಿ‌ ನಿರ್ಮಾಪಕ ಬಾಲು ಅರವಣಕರ್ , ಹೊಸಬರೊಂದಿಗೆ ಸಿನಿಮಾ‌ ಮಾಡಲಾಗಿದೆ. ಈ ಬಾರಿ ಗಟ್ಟಿ ಕಥೆಯ ಮೂಲಕ ಚಿತ್ರವನ್ನು ತೆರೆಯ ಮೇಲೆ ಕಟ್ಟಿಕೊಡಲಾಗುತ್ತಿದೆ.ಹೀಗಾಗಿ ಚಿತ್ರದ ಮೇಲೆ ನಿರೀಕ್ಷೆ ಸಹಜವಾಗಿ ಹೆಚ್ಚಾಗಿದೆ. ಚಿತ್ರಕ್ಕೆ ಅಂದುಕೊಂಡದಕ್ಕಿಂತ ತುಸು ಹೆಚ್ಚಿಗೆ ಬಜೆಟ್ ಆಗಿದೆ. ಆದರೆ ಅಂದುಕೊಂಡದಕ್ಕಿಂತ ಚಿತ್ರ ಮೂಡಿ ಬಂದಿದೆ. ಈ ಬಾರಿ ಚಿತ್ರ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.

ಆರಂಭದಲ್ಲಿ ನಾವೂ ಹೊಸಬರಾಗಿದ್ದೆವು. ಹೀಗಾಗಿ ಹೊಸಬರಿಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಸದ್ಯದಲ್ಲೇ ಚಿತ್ರದ ಟ್ರೈಲರ್ ಬಿಡುಗಡೆ ಮಾಡುತ್ತೇವೆ. ಎಕ್ಕ ಮತ್ತು ಜೂನಿಯರ್ ಚಿತ್ರಗಳು‌ ಈ ತಿಂಗಳಲ್ಲಿ ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ ಅವುಗಳನ್ನು ‌ನೋಡಿಕೊಂಡು ಚಿತ್ರವನ್ನು ತೆರೆಗೆ ತರುವ ಉದ್ದೇಶವಿದೆ. 50 ದಿನಗಳ ಕಾಲ ಚಿತ್ರವನ್ನು ಚಿತ್ರೀಕರಣ ಮಾಡಲಾಗಿದೆ. ಒಳ್ಳೆಯ ಸಿನಿಮಾ ನೀಡುವ ಉದ್ದೇಶ ಹೊಂದಲಾಗಿದೆ ಎಂದರು.

“ಸು ಫ್ರಮ್ ಸೋ…” ಅಂದರೇನು ಏನು ಎನ್ನುವುದು ಕುತೂಹಲದ‌ ವಿಷಯ.ಅದು ಸದ್ಯಕ್ಕೆ ರಹಸ್ಯವಾಗಿರಲಿ. ಚಿತ್ರ ಬಿಡುಗಡೆಯ ಸನಿಹಕ್ಕೆ ಬಂದ ನಂತರ ತಿಳಿಯಲಿದೆ ಎಂದು ಹೇಳುವ ಮೂಲಕ ಮತ್ತಷ್ಟು ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin