Suchendra Prasad's directorial venture "Padmagandhi" is all set to hit the screens in August.

ಸುಚೇಂದ್ರ ಪ್ರಸಾದ್ ನಿರ್ದೇಶನದ “ಪದ್ಮಗಂಧಿ” ಚಿತ್ರ ಆಗಸ್ಟ್ ತಿಂಗಳಲ್ಲಿ ತೆರೆಗೆ ಬರಲು ಸಿದ್ಧ - CineNewsKannada.com

ಸುಚೇಂದ್ರ ಪ್ರಸಾದ್ ನಿರ್ದೇಶನದ “ಪದ್ಮಗಂಧಿ” ಚಿತ್ರ ಆಗಸ್ಟ್ ತಿಂಗಳಲ್ಲಿ ತೆರೆಗೆ ಬರಲು ಸಿದ್ಧ

ಭಾಷಾ ಪ್ರವೀಣ, ಹಿರಿಯ ನಟ ಸುಚೇಂದ್ರ ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬಂದಿರುವ “ಪದ್ಮಗಂಧಿ” ಚಿತ್ರ ಬಿಡುಗಡೆಗೆ ಸಜ್ಜಾಗಿದೆ.

ಚಿತ್ರದ ನಿರ್ಮಾಪಕರೂ, ಕಥೆಗಾರರೂ ಆಗಿರುವ ಪ್ರೊ ಎಸ್ ಆರ್ ಲೀಲಾ , ಸಿನಿಮಾ ಶುರು ಆದ ಬಗ್ಗೆ, ಕಥೆ ಹುಟ್ಟಿನ ಹಿಂದಿರುವ ಬೆರಗು ಸೇರಿದಂತೆ ಹಲವು ಕುತೂಹಲಕಾರಿ ಸಂಗತಿಯನ್ನು ಅನಾವರಣ ಮಾಡಲಾಯಿತು, ಇದೇ ವೇಳೆ ಹಾಡುಗಳ ತುಣುಕು ಪ್ರದರ್ಶಿಸಲಾಯಿತು.

ಈ ವೇಳೆ ಮಾತನಾಡಿದ ನಿರ್ಮಾಪಕಿ ಎಸ್ .ಆರ್ ಲೀಲಾ, ‘ಪದ್ಮಗಂಧಿ’ಯ ಹಾಡುಗಳೆಲ್ಲವೂ ತಯಾರಾಗಿವೆ. ಅವುಗಳ ಒಂದಷ್ಟು ಝಲಕ್ಕುಗಳನ್ನು ಮಾಧ್ಯಮದವರ ಮುಂದೆ ಪ್ರದರ್ಶಿಸಲಾಗಿದೆ. ಕೆಲವೇ ದಿನಗಳಲ್ಲಿ ಪದ್ಮಗಂಧಿ ಹಾಡು ಚಿತ್ರ, ಪ್ರೇಕ್ಷಕರ ಮುಂದೆ ಬರಲಿವೆ. ಉತ್ತಮ ಮತ್ತು ಸಧಬಿರುಚಿಯ ಚಿತ್ರ ಇದಾಗಿದೆ ಎಂದರು

ನಿರ್ದೇಶಕ ಸುಚೇಂದ್ರ ಪ್ರಸಾದ್ ಮಾತನಾಡಿ ಕನಸಿನ ಕೂಸನ್ನು ಪ್ರೇಕ್ಷಕರ ಮಡಿಲಿಗಿಡುವ ಸಡಗರದಿಂದಲೇ ಸಿನಿಮಾ ಮತ್ತು ತಂಡದ ಬಗ್ಗೆ ಮಾತಾಡಿ ಪದ್ಮಗಂಧಿ ಆಗಸ್ಟ್ ತಿಂಗಳು ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ. ಎಂಎಲ್‍ಸಿಯಾಗಿ, ಪ್ರಾಧ್ಯಾಪಕಿಯಾಗಿ, ಅಂಕಣಕಾರ್ತಿಯಾಗಿ ಪ್ರಸಿದ್ಧರಾಗಿರುವ ಎಸ್ ಆರ್ ಲೀಲಾ ಅವರು ಬಹು ವರ್ಷಗಳ ಅಧ್ಯಯಯನದ ನಂತರ ಈ ಕಥೆ ರೂಪಿಸಿದ್ದಾರೆ ಎಂದು ಹೇಳಿದರು

#SuchendraPrasasad

ಪರಿಕಲ್ಪನೆ, ನಿರ್ಮಾಣ ಡಾ. ಎಸ್.ಆರ್ ಲೀಲಾ, ಚಿತ್ರಕಥೆ-ಸಂಭಾಷಣೆ-ನಿರ್ದೇಶನ ಕ. ಸುಚೇಂದ್ರ ಪ್ರಸಾದ, ಡಾ. ದೀಪಕ್ ಪರಮಶಿವನ್ ಸಂಗೀತ, ಎನ್. ನಾಗೇಶ್ ನಾರಾಯಣಪ್ಪ ಸಂಕಲನ, ಮನು ಯಾಪ್ಲಾರ್ ಮತ್ತು ನಾಗರಾಜ್ ಅದ್ವಾನಿ ಛಾಯಾಗ್ರಹಣವಿರುವ ಚಿತ್ರ ಮಹಾಪದ್ಮ, ಮೃತ್ಯುಂಜಯ ಶಾಸ್ತ್ರಿ ಪರಿಪೂರ್ಣ, ಪಂಡಿತ ಪ್ರಸನ್ನ ವೈದ್ಯ, ಡಾ. ದೀಪಕ್ ಪರಮಶಿವನ್, ಹೇಮಂತ ಕುಮಾರ ಜಿ, ಮುಂತಾದವರ ತಾರಾಗಣವಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin