ಯವ ಪ್ರತಿಭೆಯ ಸುನಿಧಿಯ ” ನಿಲ್ಲಬೇಡ” ಡ್ಯಾನ್ಸ್ ಮ್ಯೂಸಿಕ್ ಆಲ್ಬಂ ಬಿಡುಗಡೆ
ಉತ್ತರ ಕರ್ನಾಟಕದ ಯುವ ಪ್ರತಿಭೆ ಸುನಿಧಿ ನಿಲೋಪಂತ್ ನಟಿಸಿರುವ ” ನಿಲ್ಲಬೇಡ” ಡ್ಯಾನ್ಯ್ ಮ್ಯೂಸಿಕ್ ಆಲ್ಬಂ ಬಿಡುಗಡೆಯಾಗಿದೆ. ಕಪ್ ಗೆಲ್ಲೋದು ಮುಖ್ಯ ಅಲ್ಲ. ಮನಸ್ಸುಗಳನ್ನು ಗೆಲ್ಲೋದು ಮುಖ್ಯ ಎನ್ನುವ ಅಡಿ ಬರಬರಹದೊಂದಿಗೆ ಆಲ್ಬಂ ತಯಾರು ಮಾಡಲಾಗಿದೆ.
ಅಭಿಷೇಕ್ ಮಠದ್ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಹಾಡಿಗೆ ಸುನಿಧಿ ಅಜ್ಜಿ ಪ್ರತಿಭಾ ನಿಲೋಪಂತ್ ಬಂಡವಾಳ ಹಾಕಿದ್ದಾರೆ. ಹಾಡಿಗೆ ರಾಪರ್ ಚಂದನ್ ಶೆಟ್ಟಿ ಧ್ವನಿಯಾಗಿದ್ದಾರೆ.
ಆಲ್ಬಂ ಹಾಡಿನಲ್ಲಿ ಹರಣಿ ಶ್ರೀಕಾಂತ್, ಅನುಪ್ರಭಾಕರ್ ಆಸ್ಗರ್ , ಶಶಿ ಮಾಸ್ಟರ್ ,ಅಭಿಷೇಕ್ ಮಠದ್ ,ಸೇರಿದಂತೆ ಮತ್ತಿತರರು ಸುನಿಧಿಗೆ ಸಾಥ್ ನೀಡಿದ್ದಾರೆ.
ಅಲ್ಬಂ ಹಾಡಿನ ಬಿಡುಗಡೆಗೆ ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ನಟರಾದ ನವೀನ್ ಶಂಕರ್ ,ಚಂದನ್ ಶೆಟ್ಟಿ, ನಟಿ ಹರಿಣಿ ಶ್ರೀಕಾಂತ್ ಸೇರಿದಂತೆ ಮತ್ತಿತತರು ಭಾಗಿಯಾಗಿ ಹೊಸ ಪ್ರತಿಭೆಯ ಪ್ರಯತ್ನಕ್ಕೆ ಬೆಂಬಲ ವ್ಯಕ್ತಪಡಿಸಿದರು
ನಿರ್ಮಾಪಕರ ಸಂಘದ ಆದ್ಯಕ್ಷ ಉಮೇಶ್ ಬಣಕಾರ್ ಮಾತನಾಡಿ, ಯುವ ಪ್ರತಿಭೆ ಸುನಿಧಿ ಮೈನಲ್ಲಿ ಮೂಳೆ ಇಲ್ಲದವರಂತೆ ನಟಿಸಿದ್ದಾರೆ. ಚಂದನ್ ಶೆಟ್ಟಿ ಹಾಡಿಗೆ ವಯಸ್ಸಾದವರೂ ಹೆಜ್ಜೆ ಹಾಕುವಂತಹ ದ್ವನಿ, ಹಾಗು ನೃತ್ಯ ಮಾಡ್ತಾರೆ . ಬಳೆಪೇಟೆ ಚಿತ್ರೀಕರಣದ ವೇಳೆ ಅಭಿಷೇಕ್ ಮಠದ್ ಅವರ ಕೆಲಸ ನೋಡಿದ್ದೆ. ಒಳ್ಳೆಯ ಕೆಲಸಗಾರ, ಇನ್ನು “ನಿಲ್ಲಬೇಡ ” ಆಲ್ಬಂ ಯುವ ಪ್ರತಿಭೆಗಳಿಗೆ ಮತ್ತಷ್ಟು ಪ್ರೋತ್ಸಾಹ ಸಿಗಲಿ, ರಾಜ್ಯದಲ್ಲಿ ಅಮದು ಮಾಡಿಕೊಂಡವರಿಗೆ ರೆಡ್ ಕಾರ್ಪೆಟ್ ಹಾಕ್ತಾರೆ ಆದರೆ ಇಲ್ಲಿನ ಪ್ರತಿಭೆಗಳಿಗೆ ಅವಕಾಶ ಕಡಿಮೆ, ದೇಶದ ಯಾವುದೇ ಭಾಷೆಯಲ್ಲಿ ಅವಕಾಶ ಸಿಕ್ಕರೂ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಈ ವೇಳೆ ನಿರ್ದೇಶಕ ಅಭಿಷೇಕ್ ಮಠದ್ ಮಾತನಾಡಿ, ಹಾಡು ಮೂಡಿ ಬರಲು ಸುನಿಧಿ ಅವರ ಪ್ರತಿಭೆಯೇ ಕಾರಣ. ಹಾಡು ಚೆನ್ನಾಗಿ ಬಂದಿದೆ. ಯುವ ಪ್ರತಿಭೆಗೆ ಮತ್ತಷ್ಟು ಅವಕಾಶ ಮತ್ತಷ್ಟು ಸಿಗಲಿ , ಡಾಲಿ ಧನಂಜಯ, ನೃತ್ಯ ನಿರ್ದೇಶಕ ಹರ್ಷ ಮತ್ತಿತತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು
ಹಾಡಿನಲ್ಲಿ ಕಾಣಿಸಿಕೊಂಡಿರುವ ಸುನಿಧಿ ನಿಲೋಪಂತ್ ಮಾತನಾಡಿ, ಮೊದಲು ಚಿತ್ರೀಕರಣಕ್ಕೆ ಹೋದಾಗ ಭಯವಾಗಿತ್ತು. ಈ ಹಾಡನ್ನು ಎಲ್ಲಾ ನೃತ್ಯಪಟುಗಳಿಗೆ ಅರ್ಪಣೆ ಮಾಡುತ್ರೇನೆ. ನಿಮ್ಮ ಕನಸನ್ನು ನನಸು ಮಾಡಲು ಮುನ್ನುಗ್ಗಿ ಎಂದರು
ಹಾಡಿಗೆ ದ್ವನಿಯಾಗಿರುವ ಚಂದನ್ ಶೆಟ್ಟಿ ಮಾತನಾಡಿ , ಆಗಿನ್ನು ವಿಚ್ಚೇಧನ ಆಗಿ ಮೂರು ನಾಲ್ಕು ವಾರವಾಗಿತ್ತು. ಆ ಸಮಯದಲ್ಲಿ ಅಭಿಷೇಕ್ ಹಾಡು ಬರೆಯುವಂತೆ ಮನವಿ ಮಾಡಿದರು. ಖಿನ್ನತೆಗೆ ಒಳಗಾದ ಸಮಯದಲ್ಲಿ ನಿಲ್ಲಬೇಡ ಹಾಡು ಬರೆದಿದ್ದೇನೆ. ಜೀವನದಲ್ಲಿ ಏನೇ ಕಷ್ಟ ಬಂದರೂ ನಿಲ್ಲಬೇಡ ಮುಂದುವರಿಯಬೇಕು ಎಂದು ಹೇಳಿದರು
ನಟ ನವೀನ್ ಶಂಕರ್ ಮಾತನಾಡಿ, ಹಾಡು ಚೆನ್ನಾಗಿ ಮೂಡಿ ಬಂದಿದೆ. ಕಲಾವಿದರು ಸೇರಿದಂತೆ ತಂತ್ರಜ್ಞರು ಅಮದು ಮಾಡಿಕೊಳ್ಳುವ ಸಮಯದಲ್ಲಿ ಇಲ್ಲಿನ ಪ್ರತಿಭೆಗಳು ಬೇರೆ ಭಾಷೆಗೆ ಹೋಗುವಂತಾಗಲಿ.ಡ್ಯಾನ್ಸ್ ಮಾಡಿದಾಗ ಕುಣಿಸುವ ಕಲೆ ಎಲ್ಲರಿಗೂ ಬರಲ್ಲ ನಿಲ್ಲಬೇಡ ಮುಂದುವರಿಯಲಿ.. ಉತ್ತರ ಕರ್ನಾಟಕ ,ದಕ್ಷಿಣ ಕರ್ನಾಟಕ ಎನ್ನುವ ಬೇಧ ಬಾವ ಇಲ್ಲ ಎಲ್ಲ ಪ್ರತಿಭೆಗಳಿಗೆ ಅವಕಾಶ ಸಿಗುವಂತಾಗಲಿ ಎಂದು ಕೇಳಿಕೊಂಡರು
ಕಲಾವಿದೆ ಹರಿಣಿ ಮಾತನಾಡಿ, ಹಾಡು ಚೆನ್ನಾಗಿ ಬಂದಿದೆ. ಚಿತ್ರೀಕರಣದ ಸಮಯದಲ್ಲಿ ಪ್ರತಿಭೆ ನೋಡಿದ್ದೆ, ಸುನಿಧಿಗೆ ಒಳ್ಳೆಯದಾಗಲಿ, ಚಂದನ್ ಶೆಟ್ಟಿ ಅವರ ಜೊತೆ ಮುಂದಿನ ದಿನಗಳಲ್ಲಿ ಮತ್ತಷ್ಡು ಕೆಲಸ ಮಾಡುವ ವಿಶ್ವಾಸ ವ್ಯಕ್ತಪಡಿಸಿದರು
ನಿರ್ಮಾಪಕಿ ಪ್ರತಿಭಾ ನೀಲೋಪಂತ್ ಮಾತನಾಡಿ ಹಾಡಿನ ಚಿತ್ರೀಕರಣ ಚೆನ್ನಾಗಿ ಮೂಡಿಬಂದಿದೆ. ಮೊಮ್ಮೊಗಳು ಚಿಕ್ಕ ವಯಸ್ಸಿನಿಂದಲೇ ಕಲೆ ಮೈಗೂಡಿಸಿಕೊಂಡಿದ್ದಳು, ಹೀಗಾಗಿ ಆಲ್ಬಂ ಹಾಡು ಚೆನ್ನಾಗಿ ಮೂಡಿ ಬಂದಿದೆ ಸಹಕಾರ ಇರಲಿ ಎಂದು ಕೇಳಿಕೊಂಡರು
ಸುನಿಧಿ ತಾಯಿ ಶೀತಲ್,ತಂದೆ ಶ್ರೀಹರ್ಷ ನಿಲೋಪಂತ್ ಮಗಳ ಸಾಧನೆಗೆ ಸಂಸತಸ ಹಂಚಿಕೊಂಡರು
ಹಾಡಿಗೆ ವಿಜಯ್ ಈಶ್ವರ್ ಸಾಹಿತ್ಯ ಬರೆದಿದ್ದಾರೆ. ಛಾಯಾಗ್ರಾಹಕ ಸಂಕೇತ್, ಸಂಕಲನಕಾರ ರಂಜೀತ್ ರಾಸ ಸೇರಿದಂತೆ ಮತ್ತಿತರು ಹಾಡಿನ ಬಗ್ಗೆ ಮಾಹಿತಿ ಹಂಚಿಕೊಂಡರು.