Soul of “Naa Ninna Bidalare” music video released

ಸೋಲ್ ಆಫ್ “ನಾ ನಿನ್ನ ಬಿಡಲಾರೆ” ಸಂಗೀತಮಯ ವಿಡಿಯೋ ಬಿಡುಗಡೆ - CineNewsKannada.com

ಸೋಲ್ ಆಫ್ “ನಾ ನಿನ್ನ ಬಿಡಲಾರೆ” ಸಂಗೀತಮಯ ವಿಡಿಯೋ ಬಿಡುಗಡೆ

ದೀಪಾವಳಿ ಸಂಭ್ರಮದ ಈ ಹೊತ್ತಲ್ಲಿ “ನಾ ನಿನ್ನ ಬಿಡಲಾರೆ” ಚಿತ್ರತಂಡದಿಂದ sಸೋಲ್ ಆಫ್ ನಾನಿನ್ನ ಬಿಡಲಾರೆ ಅನ್ನೋ ಒಂದು ಅದ್ಭುತ ಡಿವೈನ್ ಮ್ಯೂಸಿಕಲ್ ವಿಡಿಯೋ ಬಿಡುಗಡೆ

ನವೆಂಬರ್ 29ಕ್ಕೆ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಈ ನಡುವೆ ದೀಪಾವಳಿಗೆ ರಾಯರ ಶ್ಲೋಕವನ್ನ ಬಿಡುಗಡೆ ಮಾಡಿದೆ.. ಈ ವಿಡಿಯೋದೊಳಗಿನ ಕಂಟೆಂಟ್ ಸಿನಿಮಾ ಮೇಲೆ ದೊಡ್ಡ ನಿರೀಕ್ಷೆ ಹುಟ್ಟಿಸ್ತಿದ್ದು, ಸಿನಿಮಾ ತುಂಬಾ ಪಾಸಿಟೀವ್ ಆಗಿ ಕಾಣ್ತಿದೆ. ನಾನಿನ್ನ ಬಿಡಲಾರೆ ಚಿತ್ರದಲ್ಲಿ ಬಿಡಿನು ನಿನ್ನ ಪಾದ ಹಾಡು ಆ ಚಿತ್ರದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿತ್ತು.. ಇದೀಗ ಈ ಚಿತ್ರದಲ್ಲಿ ಗುರು ಸಾರ್ವಭೌಮಂ..ಗುರು ರಾಘವೇಂದ್ರಂ ಆ ಭರವಸೆಯನ್ನ ಮೂಡಿಸ್ತಿದೆ.

ಅಂದ್ಹಾಗೆ,ಕಮಲ ಉಮಾ ಭಾರತಿ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ, ಭಾರತಿ ಬಾಳಿಯವರು ಚಿತ್ರವನ್ನ ನಿರ್ಮಿಸಿದ್ದಾರೆ. ಅಂಬಾಲಿ ಭಾರತಿ ನಾಯಕಿಯಾಗಿ ನಟಿಸಿದ್ದಾರೆ.. ನಾ ನಿನ್ನ ಬಿಡಲಾರೆ ಚಿತ್ರವನ್ನ ನವೀನ್ ಜಿ.ಎಸ್ ನಿರ್ದೇಶಿಸಿದ್ದಾರೆ. ವೀರೇಶ್ ಎಸ್.ಛಾಯಾಗ್ರಹಣ, ಎಮ್.ಎಸ್.ತ್ಯಾಗರಾಜು ಸಂಗೀತವಿರೋ ಈ ಚಿತ್ರಕ್ಕೆ ದೀಪಕ್ ಸಿ.ಎಸ್ ಸಂಕಲನವಿದೆ.

ಅಂಬಾಲಿ ಭಾರತಿಗೆ ಜೊತೆಯಾಗಿ ಪಂಚಿ ನಾಯಕನಾಗಿ ಅಭಿನಯಿದ್ದಾರೆ.. ಸೀರುಂಡೆರಘು,ಕೆ .ಸ್.ಶ್ರೀಧರ್, ಮಹಂತೇಶ್, ಶ್ರೀನಿವಾಸ್ ಪ್ರಭು,ಹರಿಣಿ,ಲಕ್ಷ್ಮೀ ಸಿದ್ದಯ್ಯ,ಮಂಜುಳಾರೆಡ್ಡಿ ಮುಖ್ಯಭೂಮಿಕೆಯಲ್ಲಿದ್ದಾರೆ.ಲೈಲಾಕ್ ಎಂಟರ್ಟೈನ್ಮೆಂಟ್ ನ ಹೇಮಂತ್ ಈ ಚಿತ್ರವನ್ನ ರಾಜ್ಯದಾದ್ಯಂತ ವಿತರಿಸಿದ್ದು, ನವೆಂಬರ್ 29ರಂದು ನಾ ನಿನ್ನ ಬಿಡಲಾರೆ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin