Bhageera Film Review : “ಬಘೀರ” ಮೇಕಿಂಗ್ ಮೂಲಕ ಮೋಡಿ; ಗಮನ ಸೆಳೆದ ಶ್ರೀಮರುಳಿ
![Bhageera Film Review : “ಬಘೀರ” ಮೇಕಿಂಗ್ ಮೂಲಕ ಮೋಡಿ; ಗಮನ ಸೆಳೆದ ಶ್ರೀಮರುಳಿ](https://www.cininewskannada.com/wp-content/uploads/2024/11/2.jpg?v=1730436897)
ಚಿತ್ರ: ಭಘೀರ
ನಿರ್ದೇಶನ: ಡಾ. ಸೂರಿ
ನಿರ್ಮಾಣ : ಹೊಂಬಾಳೆ ಫಿಲ್ಮ್
ತಾರಾಗಣ: ಶ್ರೀಮರುಳಿ, ರುಕ್ಮಿಣಿ ವಸಂತ್, ಪ್ರಕಾಶ್ ರೈ,ಸುಧಾರಾಣಿ, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಗರುಡ ರಾಮ್, ರಂಗಾಯಣ ರಘು, ಶರತ್ ಲೋಹಿತಾಶ್ವ, ಸಿದ್ಲಿಂದು ಶ್ರೀಧರ್ ಮತ್ತಿತರರು
ರೇಟಿಂಗ್ : **** 4/5
![](https://www.cininewskannada.com/wp-content/uploads/2024/11/1-1024x593.jpg?v=1730437068)
ಕಾಂತಾರ ಮತ್ತು ಕೆಜಿಎಫ್-2 ಚಿತ್ರಗಳಿಗೆ ರಾಷ್ಟ್ರಪ್ರಶಸ್ತಿ ಪಡೆದ ಹೊಂಬಾಳೆ ಸಂಸ್ಥೆ ಇದೀಗ, ಭಘೀರನ ಮೂಲಕ ಮತ್ತೊಂದು ಅದ್ದೂರಿ ಮೇಕಿಂಗ್ ಮೂಲಕ ಕನ್ನಡದ ಪ್ರೇಕ್ಷಕರಿಗೆ ವಿಭಿನ್ನ ಚಿತ್ರ ನೀಡಿದೆ.
ಪ್ರಾಮಾಣಿಕ ಪೊಲೀಸ್ ಅಧಿಕಾರಿ, ಆತ ತನ್ನ ಕರ್ತವ್ಯ ನಿರ್ವಹಿಸುವಾಗ ಎದುರಾಗುವ ಅಡೆ ತಡೆಗಳು, ಜನ ಹಿತ ಕಾಪಾಡಲು ಮುಂದಾದಾಗ ಎದುರಾಗುವ ಸಂಕಷ್ಠ, ಕೈಯಲ್ಲಿ ಅಧಿಕಾರವಿದ್ದರೆ ಯಾವುದೇ ಕೆಲಸ ಮಾಡದಂತೆ ಕೈ ಕಟ್ಟಿ ಹಾಕುವ ಸನ್ನಿವೇಶ, ಕೊನೆಗೆ ಸಿಡಿದೆಳುವ ಆತ ಮಾಡುವ ನಾನಾ ಕಸರತ್ತುಗಳ ಕಥೆಗಳು ತೆರೆಗೆ ಬಂದಿದೆ.
ಇಂತಹುದೇ ಕತೆ ಮುಂದಿಟ್ಟುಕೊಂಡು ನಿರ್ದೇಶಕ ಡಾ, ಸೂರಿ, ಚಿತ್ರದ ನಿರೂಪಣಾ ಶೈಲಿ, ಮೇಕಿಂಗ್, ಕಥೆ ಹೇಳಿರುವ ರೀತಿ, ನೀತಿಯ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಈ ಮೂಲಕ ಬಹುದಿನಗಳ ನಂತರ ಮತ್ತೊಂದು ವಿಭಿನ್ನ ಚಿತ್ರ ವೀಕ್ಷಿಸುವ ಅವಕಾಶ ಸಿಕ್ಕಿದೆ.ಈ ಮೂಲಕ ಸೂರಿ ಮೋಡಿ ಮಾಡಿದ್ದಾರೆ
ಪ್ರಾಮಾಣಿಕ ಪೊಲೀಸ್ ಅಧಿಕಾರಿ ವೇದಾಂತ್ (ಶ್ರೀಮುರಳಿ) ಸೂಪರ್ ಹೀರೋ ಆಗುವ ಕಥೆ, ಆತ ಯಾಕೆ ಹೀಗ್ಯಾದ ಎನ್ನುವುದು ಚಿತ್ರದ ಕಥನ ಕುತೂಹಲಕಾರಿ ಸಂಗತಿ. ಸೂಪರ್ ಹೀರೋ ಅಂದಾಕ್ಷಣ ಅಲ್ಲಿ ಯಾವುದೇ ಅತೀಂದ್ರಿಯ ಶಕ್ತಿ ಇಲ್ಲ, ಬದಲಾಗಿ ಸಾಮಥ್ರ್ಯ ಮತ್ತು ಬುದ್ಧಿಶಕ್ತಿಯನ್ನೇ ಬಂಡವಾಳ ಮಾಡಿಕೊಂಡು ಸಮಾಜಘಾತುಕರನ್ನು ಅಂತ್ಯಗೊಳಿಸುವ ಕತೆ ಇದು.
ಬಾಲ್ಯದಿಂದಲೇ ತಾಯಿ (ಸುಧಾರಾಣಿ) ಅವರಿಂದ ಸೂಪರ್ ಹೀರೋ ಸಾಹಸಗಾಥೆಗಳ ಬಗ್ಗೆ ಕೇಳಿ ತಿಳಿದುಕೊಳ್ಳುವ ವೇದಾಂತ್. ಐಪಿಎಸ್ ತರಬೇತಿ ಮುಗಿಸಿ ಅಸಿಸ್ಟೆಂಟ್ ಪೆÇಲೀಸ್ ಕಮೀಷನರ್ ಆಗಿ ಮಂಗಳೂರು ನಗರಕ್ಕೆ ಎಂಟ್ರಿ ಕೊಡುತ್ತಾನೆ, ಹಣದಿಂದ ಇಡೀ ಪೊಲೀಸ್ ವ್ಯವಸ್ಥೆಯನ್ನೇ ತನ್ನ ಕಪಿಮುಷ್ಟಿಯಲ್ಲಿಟ್ಟುಕೊಂಡಿದ್ದ ಪೂಜಾರಿ, ಕೊಟ್ಯಾನ್ (ಪ್ರಮೋದ್ ಶೆಟ್ಟಿ), ಕಿಂಗ್ ಪಿನ್ ರಾಣಾ(ಗರುಡರಾಮ್) ನಂತಹ ಡಾನ್ ಗಳನ್ನು ಬಘೀರನ ಅವತಾರದಲ್ಲಿ ಹೆಡೆಮುರಿ ಕಟ್ಟಿ ಹಾಕುತ್ತಾನೆ
ಅನ್ಯಾಯಕ್ಕೊಳಗಾದ ಜನರ ರಕ್ಷಣೆಗೆ ತನ್ನದೇ ಆದ ಮಾರ್ಗ ಹುಡುಕಿಕೊಳ್ಳುವ ವೇದಾಂತ್, ಬಘೀರನ ಅವತಾರ ತಾಳುತ್ತಾನೆ. ಈತನ ಕೆಲಸಕ್ಕೆ ವೈದ್ಯೆ ಸ್ನೇಹ (ರುಕ್ಮಿಣಿ ವಸಂತ್) ಸಾಥ್ ನೀಡುತ್ತಾಳೆ. ಪ್ರೇಮಿಯಾಗಿ ಬಂದ ಸ್ನೇಹಾ ಜೀವವನ್ನೇ ತೊರೆಯುವ ದೇಶಪ್ರೇಮಿಯಾಗಿ ನೋಡುಗರ ಮನಕಲಕುವ ಕಥೆ.
ನಿರ್ದೇಶಕ ಪ್ರಶಾಂತ್‍ನೀಲ್ ಚಿತ್ರಕ್ಕೆ ಕಥೆ ಬರೆದಿದ್ದು ಈ ಬಾರಿ ಮಂಗಳೂರು ಬಂದರಲ್ಲಿ ಇಡೀ ಕಥೆ ಹೇಳಿ ಮುಗಿಸಿದ್ದಾರೆ. ಜೊತೆಗೆ ಮಾನವ ಕಳ್ಳಸಾಗಾಣೆಯ ಕರಾಳ ಕತೆಯನ್ನು ಬಿಚ್ಚಿಟ್ಟಿದ್ದಾರೆ.
ನಿರ್ದೇಶಕ ಡಾ.ಸೂರಿ, ಕತೆಯನ್ನು ಅಷ್ಟೇ ಅಚ್ಚುಕಟ್ಟಾಗಿ ತೆರೆಮೇಲೆ ಮೂಡಿಸಿದ್ದಾರೆ. ಈ ಮೂಲಕ ಕನ್ನಡಕ್ಕೆ ಮತ್ತೊಂದು ಸದಭಿರುಚಿಯ ಚಿತ್ರವನ್ನು ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ. ಇಡೀ ಚಿತ್ರದಲ್ಲಿ ಸೂರಿ ಮತ್ತವರ ತಂಡ ಶ್ರಮ ಎದ್ದು ಕಾಣುತ್ತದೆ.
ನಟ ಶ್ರೀಮುರುಳಿ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ, ರುಕ್ಮಿಣಿ ವಸಂತ್ ಸಿಕ್ಕ ಪಾತ್ರಕ್ಕೆ ಜೀವ ತುಂಬುವ ಕೆಲಸ ಮಾಡಿದ್ದಾರೆ. ಉಳಿದಂತೆ ಸಿಬಿಐ ಅಧಿಕಾರಿಯಾಗಿ ಪ್ರಕಾಶ್‍ರಾಜ್ ,ಕಾನ್ಸ್ಟೇಬಲ್ ರಂಗಾಯಣ ರಘು ತಮ್ಮ ಪಾತ್ರದ ಮೂಲಕ ಗಮನ ಸೆಳೆದಿದ್ಧಾರೆ, ಜೊತೆಗೆ ಅಚ್ಯುತ್‍ಕುಮಾರ್, ಸುಧಾರಾಣಿ ,ಶರತ್ ಲೋಹಿತಾಶ್ವ, ಸಿದ್ಲಿಂಗು ಶ್ರೀಧರ್, ಅಶ್ವಿನ್‍ಹಾಸನ್ ಸಿಕ್ಕ ಪಾತ್ರಕ್ಕೆ ಜೀವ ತುಂಬಿದ್ದಾರೆ
ಅಜನೀಶ್ ಲೋಕನಾಥ್ ಸಂಗೀತ ಗಮನ ಸೆಳೆದಿದೆ.
ರೇಟಿಂಗ್ : ಕಳೆಪೆ – * / ಅಷ್ಟಕಷ್ಟೆ – ** / ಪರವಾಗಿಲ್ಲ – ***/ ಉತ್ತಮ – **** / ಅತ್ಯುತ್ತಮ – *****