ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರದ “ ನಾ ನಿನ್ ಬಿಡಲಾರೆ” ಚಿತ್ರ ನವಂಬರ್ 29ಕ್ಕೆ ಬಿಡುಗಡೆ
ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ “ನಾ ನಿನ್ನ ಬಿಡಲಾರೆ..” ಚಿತ್ರ ಟೀಸರ್ ಮತ್ತು ಕಥಾವಸ್ತುವಿನಿಂದ ಈಗಾಗಲೇ ಸಿನಿ ಪ್ರೇಕ್ಷಕರ ಕುತೂಹಲ ಹೆಚ್ಚು ಮಾಡಿದ್ದು, ಇದೇ ಶುಕ್ರವಾರ ನವಂಬರ್ 29ರಂದು ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗುತ್ತಿದೆ.
ಕನ್ನಡ ಚಿತ್ರರಂಗದ ಇತಿಹಾಸ ಪುಟಗಳಲ್ಲಿ ದಾಖಲಾಗಿರುವ ಪವರ್ ಹಿಟ್ ಸಿನಿಮಾ ಎನ್ನುವ ಖ್ಯಾತಿ ಪಡೆದಿರುವ “ನಾ ನಿನ್ನ ಬಿಡಲಾರೆ” ಚಿತ್ರ ಇದೀಗ ಅದೇ ಹೆಸರಲ್ಲಿ ಹೊಸ ರೀತಿಯ ಕಥಾವಸ್ತುವಿನಿನೊಂದಿಗೆ ತೆರೆಗೆ ಬರುತ್ತಿದೆ.
ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದ ನಟ ಶರಣ್, ಚಿತ್ರದ ಕಥೆ ಮತ್ತು ಮೇಕಿಂಗ್ ನೋಡಿ ಥ್ರಿಲ್ ಆಗಿ, ಕನ್ನಡ ಚಿತ್ರರಂಗದಲ್ಲಿ ಅದ್ದೂರಿ ಸಿನಿಮಾವಾಗಲಿದೆ ಎನ್ನುವ ಮೆಚ್ಚುಗೆ ಮತ್ತು ಭವಿಷ್ಯ ನುಡಿದಿದ್ದಾರೆ. ಇದು ಸಹಜವಾಗಿ ಚಿತ್ರತಂಡದ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಕಮಲ ಉಮಾ ಭಾರತಿ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ, ಅಂಬಾಲಿ ಭಾರತಿ ನಾಯಕಿಯಾಗಿ ನಟಿಸಿ ನಿರ್ಮಿಸಿರುವ ನಾ ನಿನ್ನ ಬಿಡಲಾರೆ ಚಿತ್ರವನ್ನು ನವೀನ್ ಜಿ.ಎಸ್ ನಿರ್ದೇಶಿಸಿದ್ದಾರೆ. ವೀರೇಶ್ ಎಸ್.ಛಾಯಾಗ್ರಹಣ, ಎಮ್.ಎಸ್.ತ್ಯಾಗರಾಜು ಸಂಗೀತ ಈ ಚಿತ್ರಕ್ಕೆ ದೀಪಕ್ ಜಿ.ಎಸ್ ಸಂಕಲನವಿದೆ.
ಅಂಬಾಲಿ ಭಾರತಿಗೆ ಜೊತೆಯಾಗಿ ಪಂಚಿ, ಸೀರುಂಡೆ ರಘು, ಕೆ.ಸ್.ಶ್ರೀಧರ್, ಮಹಂತೇಶ್, ಶ್ರೀನಿವಾಸ್ ಪ್ರಭು,ಹರಿಣಿ,ಲಕ್ಷ್ಮೀ ಸಿದ್ದಯ್ಯ,ಮಂಜುಳಾರೆಡ್ಡಿ ಮುಖ್ಯಭೂಮಿಕೆಯಲ್ಲಿದ್ದಾರೆ..ಹೊಸ ನಿರ್ದೇಶಕ, ಹೊಸ ನಿರ್ಮಾಪಕಿ, ಹೊಸ ನಾಯಕಿ ಹೀಗೆ ಬಹುತೇಕ ಹೊಸಬರೇ ಕೂಡಿ ಹಳೇ ತಂತ್ರಜ್ಞರ ಜೊತೆಗೆ ಮಾಡಿರುವ ಈ ಸಿನಿಮಾದ ಟ್ರೈಲರ್ ಸಿನಿಮಾ ಮೇಲಿನ ನಿರೀಕ್ಷೆ, ನಂಬಿಕೆ ಧ್ವಿಗುಣ ಮಾಡಿದೆ.
ಚಿತ್ರರಂಗದ ಭರವಸೆಯ ನಿರ್ದೇಶಕರಾದ ಕಾಟೇರ ತರುಣ್ ಸುಧೀರ್, ಜೇಮ್ಸ್ ಚೇತನ್ ಕುಮಾರ್, ಸಿಂಪಲ್ ಸುನಿ ಪ್ರಶಂಸಿದದ್ದು ಎಲ್ಲ ಆಂಗಲ್‍ನಲ್ಲಿಯೂ ಚಿತ್ರ ಪ್ರಾಮಿಸಿಂಗ್ ಆಗಿ ಮೂಡಿ ಬಂದಿದೆ. ಚಿತ್ರವನ್ನು ಲೈಲಾಕ್ ಎಂಟರ್ಟೈನ್ಮೆಂಟ್ ನ ಹೇಮಂತ್ ಈ ಚಿತ್ರವನ್ನ ರಾಜ್ಯದಾದ್ಯಂತ ವಿತರಿಸಿದ್ದು, ಅತ್ತುತ್ತಮ ಥಿಯೇಟರ್‍ಗಳೋಂದಿದೆ ಚಿತ್ರ ಈ ವಾರ ಅಂದ್ರೆ ನವೆಂಬರ್ 29ರಂದು ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದ್ದು ಚಿತ್ರತಂಡದ ಹುಮ್ಮಸ್ಸಿಗೆ ಮತ್ತಷ್ಟು ಸ್ಪೂರ್ತಿ ನೀಡಿದೆ.