Talented actor Dixit Shetty's film 'KTM' completed in 25 days

ಪ್ರತಿಭಾನ್ವಿತ ನಟ ದೀಕ್ಷಿತ್ ಶೆಟ್ಟಿ ನಟನೆಯ ‘ಕೆಟಿಎಂ’ ಚಿತ್ರ 25 ದಿನ ಪೂರ್ಣ - CineNewsKannada.com

ಪ್ರತಿಭಾನ್ವಿತ ನಟ ದೀಕ್ಷಿತ್ ಶೆಟ್ಟಿ ನಟನೆಯ ‘ಕೆಟಿಎಂ’ ಚಿತ್ರ 25 ದಿನ ಪೂರ್ಣ

ದಿಯಾ ಚಿತ್ರದಿಂದ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿ ಇದೀಗ ಪರಭಾಷೆಯಲ್ಲಿಯೂ ಮೋಡಿ ಮಾಡುತ್ತಿರುವ ಕನ್ನಡದ ಪ್ರತಿಭಾನ್ವಿತ ನಟ ದೀಕ್ಷಿತ್ ಶೆಟ್ಟಿ ನಟನೆಯ “ ಕೆಟಿಎಂ” ಚಿತ್ರ 25 ದಿನ ಪೂರೈಸಿ ಮುನ್ನೆಡೆದಿದೆ.

ನಟ ದೀಕ್ಷಿತ್ ಶೆಟ್ಟಿಗೆ ಜೋಡಿಯಾಗಿ ಸಂಜನಾ ದಾಸ್ ಮತ್ತು ಕಾಜಲ್ ಕುಂದರ್ ಕಾಣಿಸಿಕೊಂಡಿದ್ದು ಇಬ್ಬರೂ ನಟಿಯರಿಗೆ ಚಿತ್ರದ ಮೂಲಕ ಒಂದಷ್ಟು ಮೆಚ್ಚುಗೆ ಮಾತುಗಳು ಕೇಳಿಬಂದಿವೆ. ಇದು ಯುವ ನಟಿಯರಿಗೆ ಚಿತ್ರರಂಗದಲ್ಲಿ ತಳವೂರಲು ಸಹಕಾರಿಯಾಗಿದೆ.

25ನೇ ದಿನದ ಕಾರ್ಯಕ್ರಮದಲ್ಲಿ ಫಲಕ ಸ್ವೀಕರಿಸಿ ಮಾತನಾಡಿದ ನಟ ದೀಕ್ಷಿತ್ ಶೆಟ್ಟಿ, ಈ ಟ್ರೋಫಿ ನೋಡ್ತಾ ಇದ್ರೆ, ನನ್ನ ಮೊದಲ 25 ದಿನ..ಇದು ಕೈ ಸೇರೋದಿಕ್ಕೆ 10 ವರ್ಷ ಬೇಕಾಯ್ತು. 20214ರಲ್ಲಿ ಶುರುವಾದ ಪ್ರಯಾಣ. ಇದು ನೋಡ್ತಾ ಇದ್ದಾರೆ ನನಗೊಂದು ಹಾಡು ನೆನಪು ಆಗುತ್ತದೆ. ನನಗೆ ನಾನು ಹೇಳಿಕೊಳ್ಳುತ್ತಿದ್ದ ಹಾಡು. ಏನೇ ಮಾಡು ಎದುರುವೇನೇನೂ ಬಾಳುವೆನು ನೋಡು, ಬದುಕುವೆನೇನೂ ನೋಡು,. ನನ್ನ ಪ್ರಾರಂಭದ ದಿನದಲ್ಲಿ ಈ ಹಾಡನ್ನು ಯಾವಾಗಲೂ ಕೇಳ್ತಾ ಇದ್ದೆ. ನನ್ನನ್ನು ನಾನು ಕಟ್ಟಿ ಮಾಡಿಕೊಳ್ಳುತ್ತಿದ್ದೆ.

ಸಿನಿಮಾ ಜರ್ನಿ ಏನಿದೆ 25 ದಿನ ಮೇಲೆ. ಆದರೆ ಹಿಂದೆ 4 ವರ್ಷಗಳ ಜರ್ನಿ. ಈ 4 ವರ್ಷ ಸಾಕಷ್ಟು ಕಲಿತಿದ್ದೇನೆ. ಸಿನಿಮಾ ಮಾಡ್ತಾ, ಮಾಡ್ತಾ ಮಧ್ಯೆದಲ್ಲಿ ಬೇರೆಯದ್ದನ್ನೂ ಮಾಡಿದೆ. ಈ ಸಿನಿಮಾ ಇಲ್ಲಿ ನೋಡುತ್ತಾ ಇತ್ತು. ಎದೆಗೆ ಒತ್ತಿಕೊಂಡು ಮಾಡಿದ ಸಿನಿಮಾ ಇದು. ಎಲ್ಲಿ ಹೋದರು ಈ ಚಿತ್ರದ ಬಗ್ಗೆ ಹೇಳುತ್ತಿದ್ದೆ. ಕೆಟಿಎಂ ಬರುತ್ತದೆ. ಅಂತಾ. ಈ ರೂಪದಲ್ಲಿ ಇದು ಸೇರಿಕೊಂಡಿದೆ ಎಂದರು.

ನಿರ್ದೇಶಕ ಅರುಣ್ ಕುಮಾರ್ ಮಾತನಾಡಿ, ಕೆಟಿಎಂ 25 ದಿನ ಪೂರೈಸಿದೆ. ಇನ್ನೂ ಶೋ ಇದೆ. 12 ಸಿನಿಮಾ ರಿಲೀಸ್ ಆಯ್ತು. 12 ಸಿನಿಮಾದಲ್ಲಿ ನಮ್ಮ ಸಿನಿಮಾ 25 ದಿನ ಆಗಿದೆ. ಅದೇ ಸಂತೋಷ. ಈಗ 2 ವಾರ ಉಳಿಯುವುದೇ ಕಷ್ಟ. ನಮ್ಮದು 25 ದಿನ ಆಗಿದೆ. ಕಾರಣ ಮೀಡಿಯಾ, ಜನರು ಸಪೆÇೀರ್ಟ್ ನಿಂದ ಇದು ಆಗಿದೆ. ಈ ಚಿತ್ರ ಆಗೋದಿಕ್ಕೆ ಮುಖ್ಯ ಕಾರಣ ನನ್ನ ಟೆಕ್ನಿಷಿಯನ್ಸ್. ಅವರನ್ನು ನೆನಪಿಸಿಕೊಳ್ಳೋದಿಕ್ಕೆ ಇಷ್ಟಪಡುತ್ತೇನೆ. ಕಲಾವಿದರ ನಟನೆ ಬಗ್ಗೆ ಎಲ್ಲರೂ ಮಾತನಾಡಿದ್ದಾರೆ ಎಂದರು.

ಕೆಟಿಎಂ ಸಿನಿಮಾದಲ್ಲಿ ನಾಯಕನಾಗಿ ನಟಿಸಿರುವ ದೀಕ್ಷಿತ್ ಶೆಟ್ಟಿಗೆ ಸಂಜನಾ ದಾಸ್, ಕಾಜಲ್ ಕುಂದರ್ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ಉಷಾ ಭಂಡಾರಿ, ರಘು ರಮಣಕೊಪ್ಪ, ಪ್ರಕಾಶ್ ತುಮ್ಮಿನಾಡು, ಬಾಬು ಹಿರಣ್ಣಯ್ಯ, ಶಾನಿಲ್ ಗುರು, ದೇವ್ ದೇವಯ್ಯ, ಅಭಿಷೇಕ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತೋಷ್ ಈ ಸಿನಿಮಾದಲ್ಲಿದ್ದಾರೆ.

ಅರುಣ್ ಕೆಟಿಎಂ' ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದು ಇವರ ಎರಡನೇ ಪ್ರಯತ್ನ. ಈ ಮೊದಲುಅಥರ್ವ’ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದರು. ಈ ಚಿತ್ರವನ್ನು `ಮಹಾಸಿಂಹ ಮೂವೀಸ್’ ಬ್ಯಾನರ್ ಅಡಿಯಲ್ಲಿ ವಿನಯ್ ಅವರು ಸಿನಿಮಾ ನಿರ್ಮಾಣ ಮಾಡಿದ್ದಾರೆ. ರಕ್ಷಯ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ನವೀನ್ ಛಾಯಾಗ್ರಹಣ, ಚೇತನ್ ಅವರ ಸಂಗೀತ ಸಂಯೋಜನೆ, ಅರ್ಜುನ್ ಕಿಟ್ಟು ಸಂಕಲನ ಇದೆ. ಅಭಿನಂದನ್ ದೇಶಪ್ರಿಯ ಅವರು ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.

`ಕೆಟಿಎಂ’ ಸಿನಿಮಾದ ಕಥೆ ಶುರುವಾಗುವುದು ಕರಾವಳಿಯಿಂದ. ಉಡುಪಿ, ಕೋಟ, ಕುಂದಾಪುರ ಮುಂತಾದ ಊರುಗಳಲ್ಲಿ ಆಡಿ ಬೆಳೆದ ಹುಡುಗನ ಕಹಾನಿ ಇದು. ಇಲ್ಲಿನ ಪರಿಸರಲ್ಲಿ ಮುಗ್ಧ ಬಾಲಕನಾಗಿದ್ದ ಕಥಾನಾಯಕನ ಬದುಕಿನಲ್ಲಿ ಪ್ರೀತಿಯ ಗಾಳಿ ಬೀಸುತ್ತದೆ. ನಂತರ ಆತನ ಪಯಣ ಬೆಂಗಳೂರಿನತ್ತ ಸಾಗುತ್ತದೆ. ಬೆಂಗಳೂರಿನಲ್ಲಿ ಬದಲಾವಣೆಯ ಗಾಳಿ ಬೀಸಿದಾಗ ಮುಗ್ಧ ಯುವಕನ ಜೀವನದಲ್ಲಿ ತಲ್ಲಣಗಳು ಸೃಷ್ಟಿ ಆಗುತ್ತವೆ ಅದು ಏನುಅನ್ನೋದೇ ಕೆಟಿಎಂ ಕಥೆ ತಿರುಳು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin