"Tamate" movie teaser and song release: To be released on November 29th

“ತಮಟೆ” ಚಿತ್ರದ ಟೀಸರ್ ಹಾಗೂ ಹಾಡು ಬಿಡುಗಡೆ : ನವಂಬರ್ 29ಕ್ಕೆ ಸಿನಿಮಾ ತೆರೆಗೆ - CineNewsKannada.com

“ತಮಟೆ” ಚಿತ್ರದ ಟೀಸರ್ ಹಾಗೂ ಹಾಡು ಬಿಡುಗಡೆ : ನವಂಬರ್ 29ಕ್ಕೆ ಸಿನಿಮಾ ತೆರೆಗೆ

ವಂದನ್ ಎಂ ನಿರ್ಮಾಣದ, ಮಯೂರ್ ಪಟೇಲ್ ಚೊಚ್ಚಲ ನಿರ್ದೇಶನದ ಹಾಗೂ ಮದನ್ ಪಟೇಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ “ತಮಟೆ” ಚಿತ್ರದ ಟೀಸರ್ ಹಾಗೂ ಹಾಡನ್ನು ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ ವೆಂಕಟೇಶ್ ಬಿಡುಗಡೆ ಮಾಡಿ ಶುಭ ಹಾರೈಸಿದರು

ಈ ವೇಳೆ ಮಾತನಾಡಿದ ಮಲ್ಲೇಪುರಂ ಜಿ ವೆಂಕಟೇಶ್. ಮದನ್ ಪಟೇಲ್ ಬಹುಕಾಲದ ಗೆಳೆಯರು. ಅವರ “ತಮಟೆ” ಕಾದಂಬರಿ ಸಿನಿಮಾ ರೂಪ ಪಡೆದುಕೊಂಡಿದೆ. ಮಯೂರ್ ಪಟೇಲ್ ನಿರ್ದೇಶಿಸಿರುವ ಚಿತ್ರದ ಮುಖ್ಯಪಾತ್ರದಲ್ಲಿ ಮದನ್ ಪಟೇಲ್ ಅವರೆ ಅಭಿನಯಿಸಿದ್ದಾರೆ. ಹಾಡು ಹಾಗೂ ಟೀಸರ್ ತುಂಬಾ ಚೆನ್ನಾಗಿದೆ. ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಈ ಚಿತ್ರ ನವೆಂಬರ್ 29 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಹಾರೈಸಿ ಎಂದರು

ಮದನ್ ಪಟೇಲ್ ಮಾತನಾಡಿ. “ತಮಟೆ” ವಾದ್ಯಗಾರನೊಬ್ಬನ ಜೀವನಾಧಾರಿತ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಮಯೂರ್ ಪಟೇಲ್ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಚಿತ್ರಕಥೆ ಬರೆಯುವುದರೊಂದಿಗೆ ಸಂಗೀತವನ್ನು ನೀಡಿದ್ದೇನೆ. ಈಗಾಗಲೇ ಅನೇಕ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿ ಪ್ರಶಂಸೆ ಪಡೆದಿದೆ.ಚಿತ್ರರಂಗಕ್ಕೆ ಅವಶ್ಯಕತೆಯಿರುವ ಹಲವಾರು ವಿಷಯಗಳ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿರುವುದಾಗಿ ಹೇಳಿದರು.

ನಟಿ ತೇಜಸ್ವಿನಿ ಮಾತನಾಡಿ ಚಿತ್ರದಲ್ಲಿ ಪಾತ್ರ ಕೂಡ ಚೆನ್ನಾಗಿದೆ. ಒಳ್ಳೆಯ ಪಾತ್ರ ನೀಡಿದ ಮದನ್ ಪಟೇಲ್ ಅವರಿಗೆ ಧನ್ಯವಾದ ಎಂದರು ನಟಿ ತೇಜಸ್ವಿನಿ.

ಅತಿಥಿಗಳಾಗಿ ಆಗಮಿಸಿದ್ದ ದಿನಕರ್ ಅವರು ಸಹ ಚಿತ್ರಕ್ಕೆ ಯಶಸ್ವಿಯಾಗಲೆಂದು ಹಾರೈಸಿದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin