Television actress Bhumika Ramesh enters the silver screen

ಕಿರುತೆರೆ ನಟಿ ಭೂಮಿಕಾ ರಮೇಶ್ ಬೆಳ್ಳಿ ತೆರೆಗೆ ಪ್ರವೇಶ - CineNewsKannada.com

ಕಿರುತೆರೆ ನಟಿ ಭೂಮಿಕಾ ರಮೇಶ್ ಬೆಳ್ಳಿ ತೆರೆಗೆ ಪ್ರವೇಶ

ಭಾಗ್ಯಲಕ್ಷ್ಮಿ ಧಾರಾವಾಹಿಯ ಲಕ್ಷ್ಮಿ ಪಾತ್ರದ ಮೂಲಕ ನಾಡಿನ ಮನೆಮಗಳಾಗಿ ಗುರುತಿಸಿಕೊಂಡಿರುವ ನಟಿ ಭೂಮಿಕಾ ರಮೇಶ್ ಈಗ “ಡಿಸೆಂಬರ್ 24” ಚಿತ್ರದ ಮೂಲಕ ನಾಯಕಿಯಾಗಿ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.

ಮೆಡಿಕಲ್ ರಿಸರ್ಚ್ ಗೆ ಸಂಬಂಧಪಟ್ಟ ಘಟನೆಗಳನ್ನಿಟ್ಟುಕೊಂಡು ನಿರ್ಮಾಣವಾದ ಈ ಚಿತ್ರಕ್ಕೆ ನಾಗರಾಜ್ ಎಂ.ಜಿ.ಗೌಡ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಫೆಬ್ರವರಿ ಮೊದಲವಾರ ಈ ಚಿತ್ರ ತೆರೆಕಾಣಲಿದೆ.
ಭಾರತದಲ್ಲಿ ಸಾಕಷ್ಟು ನವಜಾತ ಶಿಶುಗಳು ಉಸಿರಾಟದ ಸಮಸ್ಯೆಯಿಂದಾಗಿಯೇ ಮರಣ ಹೊಂದುತ್ತಿವೆ. ಇದಕ್ಕೆ ಮೆಡಿಸಿನ್ ಕಂಡುಹಿಡಿಯುವುದೆ ಚಿತ್ರದ ಮುಖ್ಯಕಥೆ. ೨೦೧೫ರಿಂದ ೨೦೧೯ರ ನಡುವೆ ಹುಲಿಯೂರುದುರ್ಗದಲ್ಲಿ ನಡೆದ ನೈಜ ಘಟನೆಯನ್ನು ಪ್ರೇರಣೆಯಾಗಿಟ್ಟುಕೊಂಡು ಫ್ಯಾಮಿಲಿ, ಲವ್, ಫ್ರೆಡ್‌ಷಿಪ್ ಹಾಗೂ ಹಾರರ್, ಥ್ರಿಲ್ಲರ್ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗಿದೆ.


ಈ ಸಂಕಷ್ಟದಿಂದ ಮಕ್ಕಳನ್ನು ಹೇಗಾದರೂ ಪಾರು ಮಾಡಬೇಕೆಂದು ಎಂಟು ಜನ ವೈದ್ಯಕೀಯ ವಿದ್ಯಾರ್ಥಿಗಳ ತಂಡ ಔಷಧಿ ಹುಡುಕಿಕೊಂಡು ಕಾಡಿಗೆ ತೆರಳುತ್ತಾರೆ. ಅಲ್ಲಿ ಅವರು ಅನೇಕ ಕಷ್ಟಕರ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ, ಆ ತಂಡ ಎದುರಿಸಿದ ತೊಂದರೆ, ಸಮಸ್ಯೆಗಳೇನು, ಆ ತಂಡಕ್ಕೆ ಮೆಡಿಸಿನ್ ಸಿಕ್ಕಿತೇ, ಇಲ್ಲವೇ ಎನ್ನುವುದೇ ಚಿತ್ರದ ಕ್ಲೈಮ್ಯಾಕ್ಸ್.

ಮೆಡಿಕಲ್ ವಿದ್ಯಾರ್ಥಿನಿಯಾಗಿ ಭೂಮಿಕಾ ರಮೇಶ್ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಉಳಿದ ಪಾತ್ರಗಳಲ್ಲಿ ಅಪ್ಪು ಬಡಿಗೇರ್, ರವಿ ಕೆ.ಆರ್.ಪೇಟೆ, ರಘುಶೆಟ್ಟಿ, ಸಾಗರ್ ರಾಮಾಚಾರಿ, ಜಗದೀಶ್ ಎಚ್.ಜಿ.ದೊಡ್ಡಿ, ಮಿಲನ ರಮೇಶ್, ದಿವ್ಯ, ಅಭಿನಯ, ಭಾಸ್ಕರ್, ಅನುಪಮ, ಮೈಕೋ ದೇವರಾಜ್, ಆನಂದ್ ಪಟೇಲ್ ಹುಲಿಕಟ್ಟೆ, ಅನಿಲ್‌ಗೌಡ್ರು, ಕುಮಾರ ಗೌಡ್ರು, ವಿ.ಬೆಟ್ಟೇಗೌಡ, ನಾಗರಾಜ್ ಎಂ.ಜಿ. ಗೌಡ, ದೇವು ಹಾಸನ್, ಸಂಜಯ್, ಪ್ರಜ್ವಲ್, ರಮೇಶ್ ಗೌಡ್ರು, ಚೇತನ್ ಮುಂತಾದವರಿದ್ದಾರೆ.

ಭೂಮಿಕಾ ರಮೇಶ್
ಭೂಮಿಕಾ ರಮೇಶ್


ರಘು ಎಸ್. ಈ ಚಿತ್ರದ ನಿರ್ಮಾಪಕರಾಗಿದ್ದು, ಮಂಜು ಡಿ.ಟಿ, ಸಿದ್ದಮ್ಮ ಕಂಬಾರ, ಮಾಂತೇಶ ನೀಲಪ್ಪ ಚೌಹಾಣ್, ವಿ.ಬೆಟ್ಟೇಗೌಡ ಸಹನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ವೆಂಕಿ ಯು.ಡಿ.ವಿ.ಅವರ ಸಂಕಲನ. ವಿನಯ್‌ಗೌಡ ಅವರ ಛಾಯಾಗ್ರಹಣ, ಪ್ರವೀಣ್ ನಿಕೇತನ, ವಿಶಾಲ್ ಆಲಾಪ್ ಅವರ ಸಂಗೀತ, ಮಂಜು ಮಹದೇವ್ ಅವರ ಹಿನ್ನೆಲೆ ಸಂಗೀತ, ಡಾ.ವಿ.ನಾಗೇಂದ್ರ ಪ್ರಸಾದ್, ವಿಶಾಲ್ ಆಲಾಪ ಗೀತಾ ಆನಂದ್ ಪಟೇಲ್ ಅವರ ಸಾಹಿತ್ಯ, ಕೌರವ ವೆಂಕಟೇಶ್, ಚಂದ್ರು ಬಂಡೆ ಅವರ ಸಾಹಸ, ಹೈಟ್ ಮಂಜು, ಬಾಲ ಮಾಸ್ಟರ್, ಸೂರಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin