ಸರಳವಾದ ಪಾತ್ರ ಮಾಡುವುದೇ ದೊಡ್ಡ ಸವಾಲು : ನಟ ಡಾಲಿ ಧನಂಜಯ
“ಗುರುದೇವ್ ಹೋಯ್ಸಳ” ಚಿತ್ರ ಬಿಡುಗಡೆಯಾಗಿ ಸುಮಾರು ಒಂದು ವರ್ಷದ ನಂತರ ನಟ ರಾಕ್ಷಸ ಡಾಲಿ ಧನಂಜಯ ಪೂರ್ಣ ಪ್ರಮಾಣದ ನಟನೆಯ “ ಕೋಟಿ “ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಮೂಲಕ ತಾವೊಬ್ಬ ಜನಸಾಮಾನ್ಯರನ್ನು ಪ್ರತಿನಿಧಿಸುವ ನಟ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ಡಾಲಿ, ಸೀನ, ಮೀಠಾಯಿ ಸೀನ, ರತ್ನಾಕರ, ಇದೀಗ ಕೋಟಿ, ಹೀಗೆ ಬೇರೆ ಬೇರೆ ಪಾತ್ರಗಳಿಗೆ ಜೀವ ತುಂಬುವ ಮೂಲಕ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡುವ ಕನ್ನಡದ ಮಣ್ಣಿನ ಸೊಗಡಿನ ದೈತ್ಯ ಕಲಾವಿದ ಧನಂಜಯ. ಇದೀಗ ಅವರ ಹೊಸ ಚಿತ್ರ “ಕೋಟಿ” ಟೀಸರ್ ಬಿಡುಗಡೆಯಾಗಿದ್ದು ಬಾರಿ ಸದ್ದು ಮಾಡಿದೆ.
ಈ ವೇಳೆ ಮಾತಿಗಿಳಿದ ಡಾಲಿ ಧನಂಜಯ, ತಮಗೆ ಬರುತ್ತಿರುವ ಪಾತ್ರ, ತಮ್ಮ ಡೆಡಿಕೇಷನ್ ಸೇರಿದಂತೆ ಹಲವು ವಿಷಯಗಳ ಕುರಿತು ಮಾಹಿತಿ ನೀಡಿದರು.
ನಾನೊಬ್ಬ ವರ್ಸಟೈಲ್ ಆಕ್ಟರ್:
ಇದುವರೆಗೂ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ನಾನೊಬ್ಬ ವರ್ಸಟೈಲ್ ಆಕ್ಟರ್, ಎಲ್ಲ ರೀತಿಯ ಪಾತ್ರ ಮಾಡುವುದು ನನ್ನ ಉದ್ದೇಶ. ಅದರಲ್ಲಿಯೂ ಸರಳವಾಗಿರುವ ಇರುವ ಪಾತ್ರ ಮಾಡುವುದೇ ದೊಡ್ಡ ಸವಾಲು ಎಂದಿದ್ದಾರೆ
ನರೇಷನ್‍ಗಿಂತ ಓದುವುದು ಇಷ್ಟ:
“ಕಥೆ ಕೇಳುವುದಕ್ಕಿಂತ ಓದುವುದು ನನಗೆ ಇಷ್ಟ, ಇದೇ ಕಾರಣಕ್ಕೆ ಯಾರಾದರೂ ಕಥೆ ಹೇಳಲು ಬರುತ್ತೇನೆ ಎಂದರೆ ಸ್ಕ್ರಿಪ್ಟ್ ಕಳುಹಿಸಿ ಅನ್ನುವೆ. ಕಥೆ ಕೇಳುವಾಗ ಒಪ್ಪಿಗೆ ಆಗದಿದ್ದರೆ ತಪ್ಪಿಸಿಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆ ಕಾಡುತ್ತೆ. ಜೊತೆಗೆ ಎರಡು ಗಂಟೆ ಕಥೆ ಕೇಳುವುದೆಂದರೆ ಅದೊಂದು ಸಂಕಟ. ಇಷ್ಟವಾಗದಿದ್ದರೆ ಆಕಳಿಕೆ, ತೂಕಡಿಕೆ ಬರುತ್ತೆ, ಕಥೆಯನ್ನು ಅರ್ಧಕ್ಕೆ ನಿಲ್ಲಿಸಿ ಅಥವಾ ಮುಂದೆಕ್ಕೆ ಹೋಗಿ ಎಂದು ಹೇಳಲು ಆಗಲ್ಲ. ಈ ಕಾರಣಕ್ಕೆ ಕಥೆ ಕೇಳುವುದಕ್ಕಿಂತ ಓದುವುದು ನನ್ನ ಆಯ್ಕೆ. ಈ ರೀತಿ ಸ್ಕಿಪ್ಟ್ ಓದಿದ ಚಿತ್ರಗಳು ಯಶಸ್ಸು ಕಂಡಿವೆ ಎನ್ನುವುದಕ್ಕೆ ಉದಾಹರಣೆ ಸಮೇತ ವಿವಿರ ನೀಡಿದರು
‘ಕೋಟಿ” ಜನಸಾಮಾನ್ಯರ ಪ್ರತಿನಿಧಿ
“ಕೋಟಿ” ಯಲ್ಲಿ ನನ್ನ ಪಾತ್ರ ಜನಸಾಮಾನ್ಯರ ಪ್ರತಿನಿಧಿ, ಇದು ಜನಸಾಮಾನ್ಯರ ಕಥೆ, ನಿರ್ದೇಶಕ ಪರಮ್ ಹೇಳಿದ ಕಥೆ ಕೇಳಿ ಒಂದಷ್ಟು ಸಮಯ ಕೊಡಿ ಹೇಳುತ್ತೇನೆ ಎಂದು ವಾಪಸ್ ಬಂದೆ. ಬರುವಾಗ ಎಲ್ಲರಲ್ಲಿಯೂ ಕೋಟಿ ಕಾಡಲು ಆರಂಭಿಸಿದ. ಹೀಗಾಗಿ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ, ಕೋಟಿ ಕಾಡುವ ಕಥೆ, ಒಳ್ಳೆಯ ಕಥೆ ನಟನ್ನು ಎಕ್ಸೈಟ್ ಮಾಡಿದಷ್ಟು ಮತ್ಯಾವುದು ಮಾಡಲಾರದು, ಅಂತಹ ಶಕ್ತಿ ನಿರ್ದೇಶಕ ಮತ್ತು ಕಥೆಗಾರರಲ್ಲಿದೆ. ಕಳ್ಳತನ ಮಾಡ್ದೆ, ಮೋಸ ಮಾಡ್ದೆ , ಯಾರ್ ತಲೆನೋ ಹೊಡಿದೆ ನಿಯತ್ತಾಗಿ ಊರಲ್ಲಿ ಬದುಕಲು ಆಗಲ್ವಾ ಎನ್ನುವ ಒಂದು ಸಾಲು “ಕೋಟಿ” ಚಿತ್ರದ ಪಾತ್ರದ ಬಗ್ಗೆ ಮಾತನಾಡುತ್ತಿದೆ .
ಕೋಟಿ ನೋಡಿದ್ದೇ ಬಡವ ರಾಸ್ಕಲ್‍ನಲ್ಲಿ
ಇನ್ಫೋಸಿಸ್‍ನಲ್ಲಿ ಕೆಲಸಕ್ಕೆ ಸೇರಿದಾಗ ಮೊದಲ ಸಂಬಳ 23 ಅಥವಾ 25 ಸಾವಿರ ಬಂದಿತ್ತು. ಹಣದಲ್ಲಿ ಮನೆ ಮಂದಿಗೆ ಬಟ್ಟೆ ಕೊಡಿಸಿದ್ದೆ. ಕೋಟಿ ರೂಪಾಯಿ ನೋಡಿದ್ದೇ “ಬಡವ ರಾಸ್ಕಲ್” ಚಿತ್ರದಲ್ಲಿ ಜನ ಕೊಟ್ಟಾಗ.
ಜನರು ಕೊಡುವ ತನಕ “ಕೋಟಿ” ರೂಪಾಯಿ ನೋಡಿಯೇ ಇರಲಿಲ್ಲ. ಅಲ್ಲಿ ತನಕ ಒಂದು ಕೋಟಿ ಸಿಕ್ಕರೆ ಜೀವನ ಹೇಗೆಲ್ಲಾ ಇರುತ್ತೆ ಅಲ್ವಾ ಎನ್ನುವ ಕನಸು ಇತ್ತು ಆದರೆ ಆ “ಕೋಟಿ” ನೋಡಬೇಕಾದರೆ ಜನರೇ ಕೈ ಹಿಡಿಯಬೇಕಾಯಿತು,
ಜಗತ್ತಿನಲ್ಲಿ ಸಾಲ ಮಾಡದೇ ಇರೋದು, ಬಡ್ಡಿ ಕಟ್ಟದೇ ಇರೋರು ಯಾರಿದ್ದಾರೆ ಹೇಳಿ, “ಬಡವ ರಾಸ್ಕಲ್” ಚಿತ್ರದ ತನಕ ಅನೇಕ ಚಿತ್ರ ಮಾಡಿದ್ದೆ , ಆದರೆ ಆವು ಯಾವುವು ನನ್ನ ಚಿತ್ರ ಆಗಿರಲಿಲ್ಲ, ಆ ಚಿತ್ರದಲ್ಲಿ ನಾನೊಂದು ಪಾತ್ರ ಮಾಡಿದ್ದೆ ಅಷ್ಟೇ. ಸರಳವಾಗಿರುವ ಇರುವ ಪಾತ್ರ ಮಾಡುವುದೇ ದೊಡ್ಡ ಸವಾಲು, ಇದುವರೆಗೂ ಯಾವ ಚಿತ್ರದಲ್ಲಿಯೂ,ಎಲ್ಲಿಯೂ ಕಾಣದ ವಿಭಿನ್ನ ಪಾತ್ರ “ಕೋಟಿ’ ಚಿತ್ರದಲ್ಲಿದೆ.
ಜೂ,14ಕ್ಕೆ ತೆರೆಗೆ ಬರಲು ಸಜ್ಜು
“ಕೋಟಿ” ಚಿತ್ರ ಮೈಸೂರು ಸುತ್ತ ಮುತ್ತ 85 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದು ಜೂನ್ 14 ರಂದು ತೆರೆಗೆ ಬರಲಿದೆ, ಜಿಯೋ ಸ್ಟುಡಿಯೋನ ಜ್ಯೋತಿ ದೇಶಪಾಂಡೆ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ ಕಥೆ ಬರೆಯುವಾಗ ಧನಂಜಯ ಇರಲಿಲ್ಲ, ಅವರ ಪರಿಚಯವಾದ ನಂತರ ಅವರೇ ಸೂಕ್ತ ಅನ್ನಿಸಿತು. ಹೀಗಾಗಿ ಆಯ್ಕೆ ಮಾಡಲಾಯಿತು. “ಕೋಟಿ’ ಶೀರ್ಷಿಕೆ ಹುಟ್ಟಿದ್ದೇ ರೋಚಕ ಎಂದರು ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ಪರಮೇಶ್ ಗುಂಡ್ಕಲ್ ಮಾಹಿತಿ ನೀಡಿದರು.
ಈ ಮುಂಚೆ ಚಿತ್ರಕ್ಕೆ ಮುನ್ನ, ಬಾಬು ಸೇರಿದಂತೆ ಬೇರೆ ಬೇರೆ ಹೆಸರು ಇಟ್ಟಿದ್ದೆ. ಯಾವ ಹೆಸರು ಇಡುವುದು ಎನ್ನುವ ಗೊಂದಲದಲ್ಲಿದ್ದೆ. ಆಗ ಮನೆಗೆ ವಾಟರ್ ಫ್ಯೂರಿಫೈಯರ್ ರಿಪೇರಿ ಮಾಡುವ ವ್ಯಕ್ತಿಯಿಂದ ಚಿತ್ರದ ಶೀರ್ಷಿಕೆ ಸಿಕ್ಕಿತು. ಆತನ ಹೆಸರು ಕೋಟಿ. ಶೀರ್ಷಿಕೆ ನಾನಾ ಅರ್ಥ ಇರಬೇಕು ಎನ್ನುವ ಕಾರಣಕ್ಕೆ ಕೋಟಿ ಹೆಸರಿಡಲಾಗಿದೆ. ಹೀಗಾಗಿ ಆತನಿಗೆ ಧನ್ಯವಾದ ಹೇಳಿದೆ .
ಒಳ್ಳೆಯ ಪಾತ್ರಕ್ಕೆ ಆದ್ಯತೆ
ನಟಿ ಮೋಕ್ಷಾ ಮಾತನಾಡಿ ಸಾಕಷ್ಟು ಕಥೆಗಳು ಬರುತ್ತಿವೆ. ಒಳ್ಳೆಯ ಕಥೆಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿವೆ. ಕೋಟಿಯಲ್ಲಿಯೂ ಒಳ್ಳೆಯ ಕತೆ ಇದೆ. ನನಗೆ ಒಪ್ಪುವ ಪಾತ್ರ ಸಿಕ್ಕಿದೆ. ಕನಸು ನನಸಾದ ಸಮಯ ಎಂದು ಖುಷಿ ಹಂಚಿಕೊಂಡರು
ಚಿತ್ರಕ್ಕೆ ಕೈಜೋಡಿರುವ ಪ್ರಕಾಶ್ ವೀರ್, ಕಲಾವಿದ ರಮೇಶ್ ಇಂದಿರಾ,ಪೃಥ್ವಿ ಶಾಮನೂರು,ಸರ್ದಾರ್ ಸತ್ಯ, ತನುಜಾ ಸೇರಿದಂತೆ ಚಿತ್ರದ ಕಲಾವಿದರ ತಂಡ ಇತ್ತು